ಮಹಿಳೆಯ ಸ್ತನಗಳಲ್ಲಿ ಪುರುಷನ ಆಯಸ್ಸಿನ ಗುಟ್ಟು!

ಮಹಿಳೆಯರ ಸ್ತನಗಳನ್ನು ಒಂದು ದಿನದಲ್ಲಿ 10 ನಿಮಿಷಗಳ ಕಾಲ ನೋಡಿದರೆ ಪುರುಷರ ಆಯಸ್ಸು 5 ವರ್ಷ ವೃದ್ಧಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಯಾವ ಪುರುಷರು ದಿನದಲ್ಲಿ10 ನಿಮಿಷಗಳ ಕಾಲ ಮಹಿಳೆಯರ ಸ್ತನಗಳನ್ನು ನೋಡುತ್ತಾರೋ ಅಂಥವರ ಜೀವಿತಾವಧಿ 5 ವರ್ಷ ಹೆಚ್ಚಾಗಿರುತ್ತದೆ ಎಂದು ವರದಿ ಹೇಳುತ್ತದೆ.

ಹಾಗಂತ ಇದನ್ನು ಎಕ್ಸಪೆರಿಮೆಂಟ್ ಮಾಡುವಾಗ ಹುಷಾರಾಗಿರಿ. ಬೇರೆಯವರಿಂದ ಪೆಟ್ಟು ತಿನ್ನುವಂಥ ಪ್ರಸಂಗ ಸೃಷ್ಟಿಸಿಕೊಳ್ಳಬೇಡಿ. ಮತ್ತೊಂದು ಕುತೂಹಲಕಾರಿ ವಿಷಯವೇನೆಂದರೆ 10 ನಿಮಿಷಗಳ ಕಾಲ ಸ್ತನಗಳನ್ನು ನೋಡುವುದು 30 ನಿಮಿಷಗಳ ಕಾಲ ಜಿಮ್ನಲ್ಲಿ ಬೆವರಿಳಿಸಿ ಕಸರತ್ತು ಮಾಡುವುದಕ್ಕೆ ಸಮವಂತೆ. ಈ ಒಂದು ಸಂಶೋಧನೆಗೆ 5 ವರ್ಷಗಳ ಕಾಲ 200 ಪುರುಷರನ್ನು ಬಳಸಿಕೊಳ್ಳಲಾಗಿದೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ.

ಮಹಿಳೆಯರ ಸ್ತನಗಳನ್ನು ನೋಡುವ ಪುರುಷನಲ್ಲಿ ರಕ್ತದೊತ್ತಡ ಕಡಿಮೆ ಇರುತ್ತದೆ. ಅಂತಹ ಪುರುಷ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುವುದು ವಿರಳ. ಅಷ್ಟೇ ಅಲ್ಲದೆ ನಿಧಾನಗತಿಯ ಹೃದಯ ಬಡಿತ ಹೊಂದಿರುತ್ತಾನೆ. 

ವೈದ್ಯರು ಹೇಳುವ ಪ್ರಕಾರ 'ಲೈಂಗಿಕ ಆಸಕ್ತಿ ಹೊಂದಿದ ಪುರುಷನ ದೇಹದಲ್ಲಿ ರಕ್ತ ಸಂಚಲನ ಚೆನ್ನಾಗಿರುತ್ತದೆ. ಅದು ಅವನ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.