ಸಾಧಾರಣ ಬೇಳೆ ಸಾರಿನ ಬದಲಿಗೆ, ಬತುವಾ ಸೊಪ್ಪನ್ನು ಬಳಸಿ ತಯಾರಿಸಿದ ದಾಲ್ ಸೇವಿಸುವುದರಿಂದ ವಿಭಿನ್ನ ಅನುಭವ ಸಿಗುತ್ತದೆ. ಇದು ಕೇವಲ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೇ, ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಉಷ್ಣತೆ ಮತ್ತು ರೋಗನಿರೋಧಕ ಶಕ್ತಿಯನ್ನು ನೀಡಿ, ಆರೋಗ್ಯ ವೃದ್ಧಿಗೆ ನೆರವಾಗುತ್ತದೆ. ಹಾಗಾಗಿ, ಚಕ್ರವರ್ತಿ ಸೊಪ್ಪು ಚಳಿಗಾಲದ ಅಡುಗೆಗೆ ಉತ್ತಮ ಆಯ್ಕೆಯಾಗಿದೆ.
ಬತುವಾ ದಾಲ್ ಸೇವನೆಯ ಪ್ರಯೋಜನಗಳು ಬತುವಾ ದಾಲ್ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ಪೌಷ್ಟಿಕಾಂಶಗಳ ಗಣಿಯೆಂದೇ ಗುರುತಿಸಲ್ಪಟ್ಟಿದೆ. ವಿಟಮಿನ್ ಎ, ವಿಟಮಿನ್ ಸಿ, ಮತ್ತು ಕಬ್ಬಿಣಾಂಶ ಇದರಲ್ಲಿ ಹೇರಳವಾಗಿವೆ. ಈ ಅಂಶಗಳು ದೇಹದ ಒಟ್ಟಾರೆ ಆರೋಗ್ಯಕ್ಕೆ ಅಗತ್ಯವಾಗಿವೆ.
ಜೀರ್ಣಕ್ರಿಯೆಯ ಸುಧಾರಣೆಗೂ ಬತುವಾ ದಾಲ್ ಸಹಕಾರಿಯಾಗಿದೆ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಿ, ಜೀರ್ಣಶಕ್ತಿಯನ್ನು ಹೆಚ್ಚಿಸುವ ಗುಣ ಇದರಲ್ಲಿದೆ. ಇದಲ್ಲದೆ, ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಬತುವಾ ಸೊಪ್ಪಿನ ಪದಾರ್ಥಗಳು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಬತುವಾ ದಾಲ್ ರೆಸಿಪಿ ಇಲ್ಲಿದೆ.
ಜೀರ್ಣಕ್ರಿಯೆಯ ಸುಧಾರಣೆಗೂ ಬತುವಾ ದಾಲ್ ಸಹಕಾರಿಯಾಗಿದೆ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಿ, ಜೀರ್ಣಶಕ್ತಿಯನ್ನು ಹೆಚ್ಚಿಸುವ ಗುಣ ಇದರಲ್ಲಿದೆ. ಇದಲ್ಲದೆ, ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಬತುವಾ ಸೊಪ್ಪಿನ ಪದಾರ್ಥಗಳು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಬತುವಾ ದಾಲ್ ರೆಸಿಪಿ ಇಲ್ಲಿದೆ.
ಬತುವಾ ದಾಲ್‌ಗೆ ಬೇಕಾಗುವ ಸಾಮಗ್ರಿಗಳು
• ತೊಗರಿ ಬೇಳೆ
• ಬತುವಾ (ಚಕ್ರವರ್ತಿ ಸೊಪ್ಪು)
• ಟೊಮೆಟೊ
• ಈರುಳ್ಳಿ
• ಹಸಿ ಮೆಣಸಿನಕಾಯಿ
• ಶುಂಠಿ-ಬೆಳ್ಳುಳ್ಳಿ ಪೇಸ್ಟ್
• ಜೀರಿಗೆ
• ಒಣ ಕೆಂಪು ಮೆಣಸಿನಕಾಯಿ
• ಇಂಗು
• ಅರಿಶಿನ ಪುಡಿ
• ಖಾರದ ಪುಡಿ
• ಧನಿಯಾ ಪುಡಿ
• ತುಪ್ಪ ಅಥವಾ ಎಣ್ಣೆ
• ಕೊತ್ತಂಬರಿ ಸೊಪ್ಪು
• ರುಚಿಗೆ ತಕ್ಕಷ್ಟು ಉಪ್ಪು
ಬತುವಾ ದಾಲ್ ತಯಾರಿಸುವ ವಿಧಾನ:
ತೊಗರಿ ಬೇಳೆಯನ್ನು ಶುದ್ಧವಾಗಿ ತೊಳೆದು, ಕನಿಷ್ಠ 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
- ನಂತರ ಪ್ರೆಷರ್ ಕುಕ್ಕರ್ಗೆ ನೆನೆಸಿದ ಬೇಳೆ, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸಾಕಷ್ಟು ನೀರನ್ನು ಸೇರಿಸಿ. ಮೂರು ವಿಷಲ್ಗಳವರೆಗೆ ಬೇಯಿಸಿಕೊಂಡರೆ ಬೇಳೆ ಸಿದ್ಧವಾಗುತ್ತದೆ.
- ಬತುವಾ ಸೊಪ್ಪನ್ನು ಚೆನ್ನಾಗಿ ತೊಳೆದು, ನುಣ್ಣಗೆ ಹೆಚ್ಚಿಕೊಳ್ಳಿ. ಇದು ದಾಲ್ಗೆ ಹೆಚ್ಚು ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ.
- ದಪ್ಪ ತಳದ ಬಾಣಲೆಯಲ್ಲಿ 2 ಚಮಚ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಜೀರಿಗೆ, ಇಂಗು, ಮತ್ತು ಒಣ ಕೆಂಪು ಮೆಣಸಿನಕಾಯಿ ಸೇರಿಸಿ ಕೆಂಪಗಾಗಿಸಿ.
- ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸುಮಾರು ಒಂದು ನಿಮಿಷದವರೆಗೆ ಹುರಿಯಿರಿ. ಈಗ ಹೆಚ್ಚಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ, ತಿಳಿ ಹೊಂಬಣ್ಣ ಬರುವವರೆಗೆ ಕರಿಯಿರಿ.
- ಈಗ ಹೆಚ್ಚಿದ ಟೊಮೆಟೊ ಸೇರಿಸಿ, ಅದು ಸಂಪೂರ್ಣವಾಗಿ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ. ಬಳಿಕ ಕೆಂಪು ಖಾರದ ಪುಡಿ ಹಾಗೂ ಧನಿಯಾ ಪುಡಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಸಿದ್ಧಪಡಿಸಿದ ಬತುವಾ ಸೊಪ್ಪನ್ನು ಈ ಮಿಶ್ರಣಕ್ಕೆ ಸೇರಿಸಿ, ಸೊಪ್ಪು ಮೃದುವಾಗುವವರೆಗೆ ಬಾಡಿಸಿ. ಈ ಹಂತದಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಬೇಯಿಸಿದ ತೊಗರಿ ಬೇಳೆಯನ್ನು ಈಗ ಸಿದ್ಧಪಡಿಸಿದ ಮಸಾಲೆ ಮಿಶ್ರಣಕ್ಕೆ ಸೇರಿಸಿ. ನಿಮಗೆ ಬೇಕಾದ ಹದಕ್ಕೆ ನೀರನ್ನು ಬೆರೆಸಿ, ಮಿಶ್ರಣವನ್ನು ಚೆನ್ನಾಗಿ ಒಂದು ಕುದಿ ಬರಿಸಿ.
- ಅಂತಿಮವಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಮೇಲೆ ಒಂದು ಚಮಚ ತುಪ್ಪ ಸೇರಿಸಿದರೆ, ಬಿಸಿಬಿಸಿಯಾದ ಬತುವಾ ದಾಲ್ ಸವಿಯಲು ಸಿದ್ಧ.
ಈ ಬತುವಾ ದಾಲ್ ಅನ್ನು ಬಿಸಿಬಿಸಿ ಅನ್ನದೊಂದಿಗೆ, ಅಥವಾ ರೊಟ್ಟಿ ಮತ್ತು ಚಪಾತಿಯ ಜೊತೆಗೂ ಸವಿಯಬಹುದು. ಚಳಿಗಾಲದಲ್ಲಿ ಮಣ್ಣಿನ ಪಾತ್ರೆ ಅಥವಾ ಸೌದೆ ಒಲೆಯ ಮೇಲೆ ತಯಾರಿಸಿದರೆ ಇದರ ರುಚಿ ಮತ್ತಷ್ಟು ಹೆಚ್ಚಿ, ವಾವ್ ಫೀಲ್ ನೀಡುತ್ತದೆ.
