ಬೇಸಿಗೆಯಲ್ಲಿ ತಲೆಹೊಟ್ಟು ನಿವಾರಣೆಗೆ ಕೆಲವು ಟಿಪ್ಸ್ ಇಲ್ಲಿದೆ ನೋಡಿ!

ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಚರ್ಮ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಚರ್ಮವು ಕಪ್ಪಾಗುವುದು ಬಿಸಿಲಿನ ತಾಪದ ಕಾರಣಕ್ಕೆ ಅಲರ್ಜಿಗಳು ಕಾಣಿಸಿಕೊಳ್ಳುವುದು ನೋಡಬಹುದು. ಹಾಗೆ ಬೇಸಿಗೆಯಲ್ಲಿ ನಿಮಗೆ ಕಾಣಿಸಿಕೊಳ್ಳುವ ಸಮಸ್ಯೆಗಳಲ್ಲಿ ತಲೆ ಹೊಟ್ಟು ಸಹ ಒಂದಾಗಿದೆ.

ಬೇಸಿಗೆಯಲ್ಲಿ ಬೆವರು ಹೆಚ್ಚಾಗುವ ಕಾರಣದಿಂದಾಗಿ ಹೊಟ್ಟು ಹೆಚ್ಚಾಗಿ ನೋಡಬಹುದು. ಅದರಲ್ಲೂ ಬೆವರುವಿಕೆಯಿಂದ ಹೊಟ್ಟು ಹೆಚ್ಚಾಗಿ ತಲೆ ಕೂದಲು ಉದುರುವಿಕೆಗೂ ಕಾರಣವಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ತಲೆ ಹೊಟ್ಟು ನಿವಾರಣೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವ ಮೊದಲ ಆದ್ಯತೆಯಾಗಿ ನಾವು ನೆತ್ತಿಯ ಆರೋಗ್ಯ ಕಾಪಾಡಿಕೊಳ್ಳಬೇಕು.

ಕೂದಲಿನ ಕೆಳಗಿರುವ ಚರ್ಮವು ನಿಮ್ಮ ದೇಹದ ಉಳಿದ ಭಾಗಗಳಂತೆಯೇ ಬೇಸಿಗೆಯ ಸಮಯದಲ್ಲಿ ಹಾನಿಗೊಳಗಾಗುತ್ತದೆ. ಅದರಲ್ಲೂ ಹೆಚ್ಚು ಬಿಸಿಲಿನ ಕಾರಣದಿಂದ ಒಣಗುವುದು ಅಥವಾ ಬಿರುಕುಗಳು ಕಾಣಿಸಿಕೊಳ್ಳಿಲಿದೆ. ಇದು ಕೂದಲು ಉದುರುವಿಕೆಯಂತಹ ಗಂಭೀರ ಸಮಸ್ಯೆಗಳನ್ನು ಕೂಡ ತರಬಹುದು. ನೆತ್ತಿಯ ಮೇಲೆ ಬಿಸಿಲು ಬಿದ್ದಾಗ ಬೆವರು ಕಾಣಿಸಿಕೊಳ್ಳಲಿದೆ. ಹಾಗೆ ಈ ಬೆವರಿನೊಂದಿಗೆ ಮಾಲಿನ್ಯ, ಧೂಳು ಬೆರೆಯಲಿದೆ. ಇದು ವಿಪರೀತ ತುರಿಕೆ, ತಲೆಹೊಟ್ಟು, ಕಿರುಚೀಲಗಳು ಮುಚ್ಚಿಕೊಳ್ಳುವಂತಹ ಸಮಸ್ಯೆಗಳಿಗೆ ಕಾರಣವಾಗಲಿದೆ. 

ಈ ಎಲ್ಲಾ ಕಾರಣದಿಂದ ನೆತ್ತಿಯಲ್ಲಿ ಕೂದಲು ಉದುರುವಿಕೆ, ತಲೆ ಹೊಟ್ಟು ಹೆಚ್ಚಾಗುವಿಕೆ, ತುರಿಕೆ ಕಾಣಿಸಿಕೊಳ್ಳಿದೆ. ಹಾಗಾದ್ರೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಯಾವೆಲ್ಲಾ ಪರಿಹಾರ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಬಿಸಿಲಿನಿಂದ ತಪ್ಪಿಸಿಕೊಳ್ಳುವ ಉಪಾಯಗಳು

ಬಿಸಿಲಿನಿಂದ ತಪ್ಪಿಸಿಕೊಳ್ಳುವ ಉಪಾಯಗಳು: 
ಬೇಸಿಗೆಯಲ್ಲಿ ಬಿಸಿಲು ನೇರವಾಗಿ ನೆತ್ತಿಯ ಮೇಲೆ ಬೀಳುವುದನ್ನು ತಪ್ಪಿಸುವುದಬಹಳ ಮುಖ್ಯ. ಹೀಗಾಗಿ ಮನೆಯಿಂದ ಹೊರಬರುವ ಸಮಯದಲ್ಲಿ ಛತ್ರಿ, ಹ್ಯಾಟ್, ತಲೆ ಮುಚ್ಚುವಂತಹ ಬಟ್ಟೆ ಧರಿಸುವುದು ಉತ್ತಮ. ಹಾಗೆ ಆದಷ್ಟು ಬಿಸಿಲು ತಲೆ ಮೇಲೆ ನೇರವಾಗಿ ಬೀಳುವುದನ್ನು ತಡೆಯುವುದು ಉತ್ತಮ.


ತಲೆಸ್ನಾನ ಮತ್ತು ತೆಂಗಿನ ಎಣ್ಣೆ:
ಬೇಸಿಗೆಯ ಸಮಯದಲ್ಲಿ ನಿಯಮಿತ ತಲೆಸ್ನಾನ ಮಾಡುವುದು ಉತ್ತಮ. ಬೇಸಿಗೆಯಲ್ಲಿ ಬೆವರಿನ ಕಾರಣದಿಂದಾಗಿ ಹೆಚ್ಚು ಹೊಟ್ಟು ಅಥವಾ ತುರಿಕೆಯು ಈ ಸಮಸ್ಯೆಯನ್ನು ದ್ವಿಗುಣವಾಗಿಸಲಿದೆ. ಹೀಗಾಗಿ ವಾರದಲ್ಲಿ 4 ಬಾರಿಯಾದರು ತಲೆಸ್ನಾನ ಮಾಡುವುದು ಉತ್ತಮ. ಉಳಿದಂತೆ ತಲೆಗೆ ತೆಂಗಿನ ಎಣ್ಣೆ ಹಾಕುವುದು ನೆತ್ತಿಯನ್ನು ತಂಪಾಗಿಸಲಿದೆ. 

ಹೊಟ್ಟು ನಿವಾರಣೆಗೆ ನೈಸರ್ಗಿಕ ಪದಾರ್ಥಗಳ ಬಳಸಿ:
ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಈ ತಲೆಹೊಟ್ಟು ನಿವಾರಣೆಗೆ ನೈಸರ್ಗಿಕ ವಿಧಾನ ಬಳಸುವುದು ಸೂಕ್ತ. ಅದ್ರಲ್ಲೂ ಹಲವು ಮನೆಮದ್ದುಗಳ ಬಳಸಿಕೊಂಡು ಒಂದಿಷ್ಟು ಔಷಧಿ ಮಾಡಿಕೊಂಡರೆ ಪರಿಣಾಮಕಾರಿಯಾಗಿ ಈ ಸಮಸ್ಯೆಗಳಿಂದ ಮುಕ್ತರಾಗಬಹುದು. ನಿಮ್ಮ ನೆತ್ತಿಗೂ ಒಳಗಿನಿಂದ ತೇವಾಂಶ ಬೇಕು. ಸಾಕಷ್ಟು ನೀರು ಕುಡಿಯಿರಿ ಮತ್ತು ಸೌತೆಕಾಯಿ, ಕಲ್ಲಂಗಡಿ ಮತ್ತು ಪುದೀನದಂತಹ ತಂಪಾಗಿಸುವ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.

ಶಾಂಪೂ, ಔಷಧಿ:
ಇನ್ನು ನೆತ್ತಿಯ ಆರೋಗ್ಯಕ್ಕಾಗಿ ಹಾಗೆ ಬೇಸಿಗೆಯಲ್ಲಿನ ಸಮಸ್ಯೆಗಳ ನಿವಾರಿಸಿಕೊಳ್ಳಲು ವೈದ್ಯರ ಸಲಹೆಯ ಮೇರೆಗೆ ಶಾಂಪೂ ಹಾಗೂ ಔಷಧಿಯನ್ನು ಬಳಸಬಹುದು. ಅದ್ರಲ್ಲೂ ತಲೆಹೊಟ್ಟು ನಿವಾರಣೆಗಾಗಿ, ಸ್ಕಾಲ್ಪ್ ರಕ್ಷಣೆಗೆ ಸಹಕಾರಿಯಾಗುವಂತಹ ಹಲವು ಔಷಧಿಗಳು ಮಾರುಕಟ್ಟೆಯಲ್ಲಿ ಸಿಗುವುದು ನೋಡಬಹುದು.