ಹಬ್ಬ ಅಂದ್ರೆ ಸಿಹಿ ಮಾಡೋದು ಸಾಮಾನ್ಯ. ಊಟದ ರುಚಿ ಹೆಚ್ಚಾಗಬೇಕು ಅಂದ್ರೆ ಯಾವುದಾದರು ಒಂದು ಸಿಹಿ ಮಾಡಿರಲೇಬೇಕು. ಹಾಗೆ ಈ ಸಿಹಿಯು ಎಲ್ಲರಿಗೂ ಇಷ್ಟವಾಗುವಂತಿರಬೇಕು. ಬಹಳಷ್ಟು ಸಿಹಿ ತಿಂಡಿಗಳ ನಡುವೆಯೂ ಪಾಯಸ ಸಂಪ್ರದಾಯ ಎಂಬಂತೆ ಮಾಡಲಾಗುತ್ತೆ. ಅದರಲ್ಲೂ ವಿಶೇಷ ಬಗೆಯ ಪಾಯಸಗಳನ್ನು ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ.
ವಿಭಿನ್ನ ರೀತಿಯ ಪಾಯಸ ಮಾಡುವ ಕುರಿತು ನಾವು ತಿಳಿಯೋಣ. ಅದರಲ್ಲೂ ದೇವಾಲಯಗಳಲ್ಲಿ ನೀಡುವಂತಹ ಬಾಯಲ್ಲಿ ನೀರು ತರಿಸುವ ಗೋಧಿ ಪಾಯಸ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಬ್ಬದ ರಂಗು ಮತ್ತಷ್ಟು ಹೆಚ್ಚಿಸಬೇಕಾದರೆ ಈ ಗೋಧಿ ಪಾಯಸ ಮಾಡಿ ಸವಿಯೋದನ್ನು ನಾವಿಂದು ತಿಳಿಯೋಣ. ಹಾಗಾದ್ರೆ ಈ ಪಾಯಸ ಮಾಡುವುದು ಹೇಗೆ? ಅನ್ನೋದನ್ನು ತಿಳಿದುಕೊಳ್ಳೋಣ.
ಗೋಧಿ ಪಾಸಯ ಎಲ್ಲರಿಗೂ ಇಷ್ಟವಾಗುವ ಹಾಗೆ ಆರೋಗ್ಯದ ದೃಷ್ಟಿಯಿಂದಲೂ ಸಹ ಇದು ಬಹಳ ಉತ್ತಮವಾಗಿರಲಿದೆ. ನೀವು ಸಹ ಮನೆಯಲ್ಲಿ ಇದನ್ನು ಸುಲಭವಾಗಿ ಮಾಡಿ ಸವಿಯಬಹುದು. ಹೀಗಾಗಿ ಈ ಹಬ್ಬದ ಸಮಯದಲ್ಲಿ ಈ ಗೋಧಿ ಪಾಯಸ ಮಾಡುವುದು ಬಾಯಲ್ಲಿ ನೀರು ತರಿಸುತ್ತೆ. ಹಾಗೆ ಚೂರು ಉಳಿಯದಂತೆ ಖಾಳಿಯಾಗುತ್ತೆ.
ಈ ಗೋಧಿ ಪಾಯಸ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಗೋಧಿ ಪಾಯಸ ಮಾಡಲು ಬೇಕಾಗುವ ವಸ್ತುಗಳು
ಗೋಧಿ ಕಡಿ
ತೆಂಗಿನಕಾಯಿ ತುರಿ
ಬೆಲ್ಲದ ಪುಡಿ
ಉಪ್ಪು
ಏಲಕ್ಕಿ ಪುಡಿ
ತುಪ್ಪ
ಗೋಡಂಬಿ
ಗೋಧಿ ಪಾಯಸ ಮಾಡುವ ಸುಲಭದ ವಿಧಾನ:
ಮೊದಲು ಒಂದು ಬೌಲ್ಗೆ 2 ಕಪ್ ಗೋಧಿ ಕಡಿ ಹಾಕಿಕೊಂಡು 2ರಿಂದ 3 ಬಾರಿ ತೊಳೆದು ಅನಂತರ ಕುಕ್ಕರ್ಗೆ ಹಾಕಿ ಅಳತೆಯಲ್ಲಿ ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ 4 ಸೀಟಿ ಹೊಡೆಯಲು ಬಿಟ್ಟು ಒಲೆ ಆಫ್ ಮಾಡಿ ಕುಕ್ಕರ್ ತಣ್ಣಗಾಗಲು ಬಿಡಿ. ಅನಂತರ ಗೋಧಿ ಕಡಿಯನ್ನು ಒಮ್ಮೆ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಇದು ಬೇಳೆಯಂತೆ ಆಗಿರಬೇಕು.
