ಸಿಂಪಲ್ ಆಗಿ ಟೊಮೆಟೊ ಬಾತ್ ಮಾಡಲು ಇಲ್ಲಿದೆ ನೋಡಿ ರೆಸಿಪಿ!

ಸಾಮಾನ್ಯವಾಗಿ ಎಲ್ಲರಿಗೂ ಸಹ ಟೊಮೆಟೊ ಬಾತ್ ತಿನ್ನಲು ಇಷ್ಟವಾಗುವಂತಹ ತಿಂಡಿ ಆಗಿರುತ್ತದೆ. ಇದನ್ನು ಬಹುತೇಕ ಕಾರ್ಯಕ್ರಮ ಹಾಗೂ ಸಮಾರಂಭಗಳಲ್ಲಿ ಊಣ ಬಡಿಸುವುದನ್ನು ನೀವು ಕಾಣಬಹುದಾಗಿದೆ. ಇಂತಹ ಟೊಮೆಟೊ ಬಾತ್ ಅನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂದು ನಾವಿಂದು ತಿಳಿಯೋಣ.

ಟೊಮೆಟೊ ಬಾತ್ ಮಾಡಲು ಬೇಕಾಗುವ ಸಾಮಾಗ್ರಿಗಳು!

ಅಕ್ಕಿ - 1½ ಕಪ್

ಈರುಳ್ಳಿ - 2 ರಿಣದ 3

ಟೊಮೆಟೊ - 5-6

ಪುದಿನಾ ಸೊಪ್ಪು - ಒಂದು ಹಿಡಿ

ತೆಂಗಿನಕಾಯಿ - ½ ಕಪ್

ಹಸಿರು ಬಟಾಣಿ - ½ ಕಪ್

ಹಸಿರು ಮೆಣಸಿನಕಾಯಿ - 5 ರಿಂದ 6

ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಸ್ಪೂನ್

ಕೊತ್ತಂಬರಿ ಸೊಪ್ಪು - ಒಂದು ಹಿಡಿ

ಸೋಂಪು - ½ ಟೀಸ್ಪೂನ್

ಜೀರಿಗೆ - ಸ್ವಲ್ಪ

ಎಣ್ಣೆ – 3 ರಿಂದ 4 ಸ್ಪೂನ್

ಪುಲಾವ್ ಎಲೆ - 2

ದಾಲ್ಚಿನ್ನಿ - 1 ಇಂಚು

ಲವಂಗ – 3 ರಿಂದ 4

ಏಲಕ್ಕಿ - 2

ಸ್ಟಾರ್ ಅನಿಸ್ - 1

ಅರಿಶಿನ - ¼ ಟೀಸ್ಪೂನ್

ರೆಡ್ ಚಿಲ್ಲಿ ಪೌಡರ್ - 1-1½ ಟೀಸ್ಪೂನ್

ಉಪ್ಪು - ರುಚಿಗೆ ತಕ್ಕಷ್ಟು

ನೀರು – ಅಕ್ಕಿ ಅಳತೆಗೆ ತಕ್ಕಷ್ಟು

 ಟೊಮೆಟೊ ಬಾತ್ ಮಾಡುವ ವಿಧಾನ!

ಮೊದಲು ಮಸಾಲೆ ತಯಾರಿಸಿಕೊಳ್ಳಲು ತೆಂಗಿನಕಾಯಿ, ಕೊತ್ತಂಬರಿ, ಸೋಂಪು, ಒಣ ಮೆಣಸು, ಶುಂಠಿ-ಬೆಳ್ಳುಳ್ಳಿ ಒಟ್ಟಿಗೆ ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಈಗ ಸ್ಟವ್ ಮೇಲೆ ಕುಕ್ಕರ್ ಇಟ್ಟು, ಕುಕ್ಕರ್ ಒಳಗೆ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಪಲಾವ್ ಎಲೆ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಸ್ಟಾರ್ ಅನಿಸ್ ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಿ. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಕೆಂಪಗೆ ಹುರಿಯಿರಿ.

ಬಳಿಕ ಕತ್ತರಿಸಿದ ಟೊಮೇಟೊ ಹಾಕಿ, ಉಪ್ಪು, ಅರಿಶಿನ, ಚಿಲ್ಲಿ ಪೌಡರ್ ಹಾಕಿ. ಟೊಮೆಟೊ ಬೆಂದು, ಎಣ್ಣೆ ಬಿಡುವವರೆಗೆ ಚೆನ್ನಾಗಿ ಬೇಯಿಸಿ. ಈಗ ರುಬ್ಬಿದ ಮಸಾಲೆ ಪೇಸ್ಟ್ ಹಾಕಿ, ಕೊತ್ತಂಬರಿ, ಪುದಿನಾ ಸೊಪ್ಪು ಸೇರಿಸಿ, 2-3 ನಿಮಿಷಗಳ ಕಾಲ ಮಿಕ್ಸ್ ಮಾಡಿ.                

ಕೊನೆಗೆ ತೊಳೆದು ನೆನೆಸಿಟ್ಟ ಅಕ್ಕಿಗೆ ನೀರು ಹಾಕಿ, ಅಗತ್ಯವಿದ್ದರೆ, ನಿಂಬೆ ರಸವನ್ನು ಹಿಂಡಿ, ಕುಕ್ಕರ್ ಮುಚ್ಚಿ. ಈಗ ಮಧ್ಯಮ ಉರಿಯಲ್ಲಿ 2 ವಿಸಿಲ್ ಬರುವವರೆಗೆ ಕುಕ್ಕರ್ ಕೂಗಿಸಿ. ಈಗ ಸ್ಟವ್ ಆಫ್ ಮಾಡಿ, ಕುಕ್ಕರ್ ತಣ್ಣಗಾಗುವರೆಗೂ ಕಾದು, ನಂತರ ಪ್ಲೇಟ್ಗೆ ಸರ್ವ್ ಮಾಡಿ.