ಮೆಂತ್ಯದ ಕಾಳುಗಳಲ್ಲಿ ಅಪಾರ ಆರೋಗ್ಯಕರ ಪ್ರಯೋಜನಗಳಿವೆ. ಇದನ್ನು ಪ್ರತಿನಿತ್ಯ ಅಡುಗೆಗಳಲ್ಲಿ ಬಳಸುತ್ತೇವೆ. ಕಹಿ ರುಚಿಯಿದ್ದರೂ ದೇಹಕ್ಕೆ ತಂಪು, ಶಕ್ತಿವರ್ಧಕ. ಈ ಕಾಳುಗಳನ್ನು ಪೌಡರ್ ಮಾಡಿಕೊಂಡು ಪ್ರತಿನಿತ್ಯ ಹಾಲಿಗೆ ಬೆರೆಸಿ ಕುಡಿದರೆ ಸಾಕಷ್ಟು ಪ್ರಯೋಜನಗಳಿವೆ.
ಎಲುಬು ಗಟ್ಟಿಯಾಗುತ್ತದೆ:
ಮೆಂತ್ಯದಲ್ಲಿರುವ ಉರಿಯೂತ ನಿರೋಧಕ ಅಂಶಗಳು ಕೀಲು ನೋವು ತಡೆಯುವ ಗುಣ ಹೊಂದಿದೆ. ಹಾಲಿನಲ್ಲಿ ವಿಟಮಿನ್ ಡಿ ಅಂಶವಿರುವುದರಿಂದ ಎಲುಬುಗಳ ಆರೋಗ್ಯಕ್ಕೆ ಉತ್ತಮ.
ನಿದ್ರಾಹೀನತೆಗೆ ಪರಿಹಾರ:
ಹಾಲಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವಿದ್ದು, ಇದು ಸಿರೊಟೋನಿನ್ ಮತ್ತು ಮೆಲಟೋನಿನ್ ಉತ್ಪಾದಿಸಲು ಸಹಾಯ ಮಾಡುತ್ತದೆ. ಮೆಂತ್ಯದಲ್ಲಿ ಜೀರ್ಣಕ್ರಿಯೆ ಸುಗಮಗೊಳಿಸುವ ಶಕ್ತಿ ಹೊಂದಿದ್ದು ಇವೆರಡರ ಕಾಂಬಿನೇಷನ್ ನಿಂದ ನಿದ್ರೆ ಚೆನ್ನಾಗಿ ಆಗುತ್ತದೆ.
ಹಾರ್ಮೋನ್ ಬೆಳವಣಿಗೆಗೆ:
ಪುರುಷರಲ್ಲಿ ಈ ಸಂಯೋಜನೆಯನ್ನು ಆಗಾಗ್ಗೆ ಚೈತನ್ಯ, ಸ್ನಾಯುಗಳ ಚೇತರಿಕೆ ಮತ್ತು ಆರೋಗ್ಯಕರ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಮಹಿಳೆಯರಲ್ಲಿ ಇದು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಮತ್ತು ಮುಟ್ಟಿನ ಸೆಳೆತದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
