ಬಿಸಿಲಿನಿಂದ ಆಗುವ ಸನ್‌ಟ್ಯಾನ್ ತೆಗೆಯಲು, ಮನೆಯಲ್ಲಿಯೇ ಮಾಡಿ ನ್ಯಾಚುರಲ್ ಸನ್‌ಸ್ಕ್ರೀನ್!

ಬೇಸಿಗೆಯಲ್ಲಿ ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸನ್‌ಸ್ಕ್ರೀನ್ ಬಳಸುವುದು ಅಗತ್ಯ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಸನ್‌ಸ್ಕ್ರೀನ್ ಬಳಸುವ ಬದಲು ಅಡುಗೆ ಮನೆಯಲ್ಲಿ ಕಂಡುಬರುವ ಪದಾರ್ಥಗಳನ್ನು ಬಳಸಿಕೊಂಡು ನೈಸರ್ಗಿಕ ಸನ್‌ಸ್ಕ್ರೀನ್ ತಯಾರಿಸಬಹುದು.

ಬೇಸಿಗೆಯ ಉರಿಬಿಸಿಲು ಹಾಗೂ ತ್ವಚೆಗೆ ತೇವಾಂಶದ ಕೊರತೆಯಿಂದಾಗಿ ಚರ್ಮಕ್ಕೆ ಹೆಚ್ಚುವರಿ ಆರೈಕೆಯ ಅಗತ್ಯವಿರುತ್ತದೆ. ಅದರಲ್ಲೂ ಬೇಸಿಗೆಯ ಸೂರ್ಯನ ಉರಿ ಬಿಸಿಲಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಅಥವಾ ಸೂರ್ಯನ ಯುವಿ ಕಿರಣಗಳು ಚರ್ಮದ ಮೇಲೆ ನೇರವಾಗಿ ಬಿದ್ದಾಗ ಚರ್ಮವು ತನ್ನನ್ನು ರಕ್ಷಿಸಿಕೊಳ್ಳಲು ಮೆಲನಿನ್ ಎಂಬ ವರ್ಣದ್ರವ್ಯವನ್ನು ಹೆಚ್ಚಾಗಿ ಉತ್ಪಾದಿಸುತ್ತದೆ. ಇದು ಚರ್ಮದ ಬಣ್ಣವನ್ನು ಕಪ್ಪಾಗಿಸುತ್ತದೆ ಅಂದರೆ ತ್ವಚೆಯ ಟ್ಯಾನಿಂಗ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ

ನ್ಯಾಚುರಲ್ ಸನ್‌ಸ್ಕ್ರೀನ್ ಮಾಡುವ ವಿಧಾನ ಹೇಗೆ?
ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ತ್ವಚೆಯನ್ನು ರಕ್ಷಿಸಲು ಸನ್‌ಸ್ಕ್ರೀನ್ ಬಳಸುವುದು ಅತ್ಯಗತ್ಯ. ಪ್ರಮುಖವಾಗಿ ಇದು ತ್ವಚೆಯ ಟ್ಯಾನಿಂಗ್ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಬಗೆಯ ಸನ್ಸ್ಕ್ರೀನ್ಗಳು ತ್ವಚೆಗೆ ಹಾನಿಯುಂಟುಮಾಡುವ ರಾಸಾಯನಿಕಗಳನ್ನು ಹೊಂದಿರುತ್ತವೆ.

ಹೀಗಾಗಿ ಮನೆಯಲ್ಲಿಯೇ ಲಭ್ಯವಿರುವ ಅಡುಗೆ ಮನೆಯ ಕೆಲವೊಂದು ನೈಸರ್ಗಿಕ ಪದಾರ್ಥಗಳನ್ನು ಬಳಸಿ ನ್ಯಾಚುರಲ್ ಸನ್‌ಸ್ಕ್ರೀನ್ ತಯಾರಿಸಬಹುದು.ಪ್ರಸ್ತುತ ಇಂದಿನ ಲೇಖನದಲ್ಲಿ ಟ್ಯಾನಿಂಗ್ ಸಮಸ್ಯೆಯನ್ನು ಹೋಗಲಾಡಿಸಲು ಸನ್‌ಸ್ಕ್ರೀನ್ ಲೋಷನ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ನೋಡೋಣ

ಅಲೋವೆರಾ ಮತ್ತು ತೆಂಗಿನ ಎಣ್ಣೆ ಸನ್‌ಸ್ಕ್ರೀನ್:
ಅಲೋವೆರಾ ಮತ್ತು ತೆಂಗಿನ ಎಣ್ಣೆಯನ್ನು ಬಳಸಿ ಮನೆಯಲ್ಲೇ ನೈಸರ್ಗಿಕ ಸನ್‌ಸ್ಕ್ರೀನ್ ತಯಾರಿಸಬಹುದು. ಪ್ರಮುಖವಾಗಿ ಅಲೋವೆರಾ ಜೆಲ್ ತ್ವಚೆಯ ಸಮಸ್ಯೆಗಳಿಗೆ ಒಂದು ಅದ್ಭುತ ನೈಸರ್ಗಿಕ ಪರಿಹಾರವಾಗಿದೆ.

ಅದರಲ್ಲೂ ಬಿಸಿಲಿನಲ್ಲಿ ಸುಟ್ಟ ಚರ್ಮ ಅಥವಾ ಸನ್ ಟ್ಯಾನ್ ನಂತಹ ಚರ್ಮದ ಸಮಸ್ಯೆಗಳಿಗೆ ಅಲೋವೆರಾ ಜೆಲ್ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ.

ಹೀಗಾಗಿ ತೆಂಗಿನ ಎಣ್ಣೆಯನ್ನು ಅಲೋವೆರಾ ಜೆಲ್ನೊಂದಿಗೆ ಬೆರೆಸಿ ಹಚ್ಚಿ. ಇದು ಚರ್ಮವನ್ನು ತಂಪಾಗಿಸಲು ಮತ್ತು ತೇವಾಂಶವನ್ನು ನೀಡಲು ಸಹಾಯ ಮಾಡುತ್ತದೆ. ಸೂರ್ಯನಿಂದ ಚರ್ಮವನ್ನು ರಕ್ಷಿಸುವಲ್ಲಿ ಇದು ಪರಿಣಾಮಕಾರಿ ಯಾಗಿದೆ.

ಅಧ್ಯಯನದ ಪ್ರಕಾರ:
ಕಂಡುಬಂದ ಅಧ್ಯಯನಗಳ ಆಧಾರದ ಮೇಲೆ, ಅಲೋವೆರಾ ಮತ್ತು ತೆಂಗಿನ ಎಣ್ಣೆ ಚರ್ಮ ವನ್ನು ಶಮನಗೊಳಿಸುವ, ಆರ್ಧ್ರಕಗೊಳಿಸುವ ಮತ್ತು ಗಾಯವನ್ನು ಗುಣಪಡಿ ಸುವ ಗುಣಲಕ್ಷಣಗಳಿಗಾಗಿ ಗುರುತಿಸಲ್ಪಟ್ಟಿವೆ,

ಇವುಗಳನ್ನು ಹೆಚ್ಚಾಗಿ ಸೂರ್ಯನ ನಂತರದ ಆರೈಕೆಗಾಗಿ ಒಟ್ಟಿಗೆ ಬಳಸಲಾಗು ತ್ತದೆ. ಆದಾಗ್ಯೂ, ವಾಣಿಜ್ಯ ಸನ್‌ಸ್ಕ್ರೀನ್‌ಗಳಿಗೆ ಹೋಲಿಸಿದರೆ ಅವು ಸೂರ್ಯನ ಹಾನಿಯ ವಿರುದ್ಧ ಬಹಳ ಸೀಮಿತ ರಕ್ಷಣೆಯನ್ನು ಒದಗಿಸುತ್ತವೆ.

ಸೌತೆಕಾಯಿ ಮತ್ತು ರೋಸ್ ವಾಟರ್:
ಸೌತೆಕಾಯಿ ರಸ ಮತ್ತು ರೋಸ್ ವಾಟರ್ ಮಿಶ್ರಣವು ಬೇಸಿಗೆಯಲ್ಲಿ ಸೂರ್ಯನ ಯುವಿ ಕಿರಣಗಳಿಂದಾಗಿ ಚರ್ಮದ ಮೇಲಾಗುವ ಟ್ಯಾನಿಂಗ್ ಅಥವಾ ಚರ್ಮದ ಕಂದು ಬಣ್ಣದ ಸಮಸ್ಯೆಯನ್ನು ಹಾಗೂ ಸನ್ ಬರ್ನ್ ಸಮಸ್ಯೆಯನ್ನು ಶಮನ ಗೊಳಿಸಲು ಅತ್ಯುತ್ತಮ ನೈಸರ್ಗಿಕ ಮನೆಮದ್ದಾಗಿದೆ.

ಪ್ರಮುಖವಾಗಿ ಚರ್ಮಕ್ಕೆ ತಂಪನ್ನು ನೀಡಲು ಹಾಗೂ ಉರಿಯೂತವನ್ನು ಕಡಿಮೆ ಮಾಡಲು ಸೌತೆಕಾಯಿ ನೆರವಿಗೆ ಬಂದರೆ, ರೋಸ್ ವಾಟರ್ ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುವಲ್ಲಿ ನೆರವಿಗೆ ಬರುತ್ತದೆ .

ಬಳಸುವ ವಿಧಾನ:
ಅರ್ಧ ಎಳೆ ಸೌತೆಕಾಯಿಯನ್ನು ತುರಿದು ಅದರ ರಸವನ್ನು ತೆಗೆಯಿರಿ.

ಇನ್ನು ಈ ರಸಕ್ಕೆ ಒಂದು ಟೇಬಲ್ ಚಮಚ ಆಗುವಷ್ಟು ರೋಸ್ ವಾಟರ್ ಮಿಶ್ರಣ ಮಾಡಿ ದಪ್ಪಗೆ ಪೇಸ್ಟ್ ರೀತಿ ಮಾಡಿಕೊಳ್ಳಿ

ಹತ್ತಿಯ ಸಹಾಯದಿಂದ ಈ ಮಿಶ್ರಣವನ್ನು ಟ್ಯಾನ್ ಆಗಿರುವ ಮುಖ, ಕುತ್ತಿಗೆಯ ಹಿಂದಿನ ಭಾಗ ಅಥವಾ ಕೈಕಾಲುಗಳಿಗೆ ಹಚ್ಚಿ.

ಸರಿಸುಮಾರು ಅರ್ಧ ಗಂಟೆಗಳ ಕಾಲ ಈ ಪೇಸ್ಟ್ ಹಾಗೆಯೇ ಒಣಗಲು ಬಿಡಿ.

ಆಮೇಲೆ ತಣ್ಣೀರಿನಿಂದ ಮುಖ, ಕೈಕಾಲು ತೊಳೆಯಿರಿ. ಉತ್ತಮ ಫಲಿತಾಂಶ ಕ್ಕಾಗಿ ವಾರದಲ್ಲಿ ಎರಡು-ಮೂರು ಬಾರಿ ಪುನರಾವರ್ತಿಸಿ.

ಶ್ರೀಗಂಧ ಮತ್ತು ಅರಿಶಿನ ಪೇಸ್ಟ್:

ಶ್ರೀಗಂಧದ ಪುಡಿ ಅರಿಶಿನ ಮತ್ತು ರೋಸ್ ವಾಟರ್ ಮಿಶ್ರಣವು ತ್ವಚೆಯನ್ನು ಸೂರ್ಯನ ಯುವಿ ಕಿರಣಗಳ ಹಾನಿಯಿಂದ ರಕ್ಷಿಸಲು ಮತ್ತು ಬಿಸಿಲಿನಲ್ಲಿ ಆದ ಟ್ಯಾನ್) ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಉಪಾಯವಾಗಿದೆ.

ಹೀಗೆ ಮಾಡಿ:
ಒಂದು ಬೌಲ್ ನಲ್ಲಿ ಶ್ರೀಗಂಧದ ಪುಡಿಗೆ ಚಿಟಿಕೆಯಷ್ಟು ಅರಿಶಿನದ ಪುಡಿ ಹಾಗೂ ಅಗತ್ಯಕ್ಕೆ ತಕ್ಕಷ್ಟು ರೋಸ್ ವಾಟರ್ ಬೆರೆಸಿ ನಯವಾದ ಪೇಸ್ಟ್ ತಯಾರಿಸಿ.

ಇನ್ನು ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ದಪ್ಪಗೆ ಹಚ್ಚಿ, 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ನಿಂಬೆ ಮತ್ತು ಅಲೋವೆರಾ ಜೆಲ್:
ನಿಂಬೆ ಮತ್ತು ಅಲೋವೆರಾ ಜೆಲ್ ಬಳಸಿ ಕೂಡ ನೈಸರ್ಗಿಕ ಸನ್ಸ್ಕ್ರೀನ್ ಅನ್ನು ಸಹ ತಯಾರಿಸಬಹುದು. ಅಲೋವೆರಾ ಜೆಲ್ ಮತ್ತು ನಿಂಬೆ ರಸದ ಮಿಶ್ರಣವು ಚರ್ಮದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಒಂದು ಬೌಲ್ ನಲ್ಲಿ ಒಂದು ಟೀ ಚಮಚ ಆಗುವಷ್ಟು ಅಲೋವೆರಾ ಜೆಲ್ಗೆ ಅರ್ಧ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿೊಂಡು ಮುಖಕ್ಕೆ ಹಚ್ಚಿ

ನಂತರ 20 ನಿಮಿಷ ಬಿಟ್ಟು ನೀರಿನಿಂದ ತೊಳೆದುಕೊಳ್ಳಿ. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಮುಖಕ್ಕೆ ಹಚ್ಚುವ ಮುನ್ನ ಒಮ್ಮೆ ಪ್ಯಾಚ್ ಟೆಸ್ಟ್ ಮಾಡಿಕೊಳ್ಳಿ.