ಬಿಸಿಲಿನ ತಾಪಕ್ಕೆ ಬಾಯಾರಿಕೆ ಆಗದಿದ್ದರೂ ನೀವು ಇಷ್ಟು ನೀರು ಕುಡಿಯಲೇಬೇಕು!

ರಾಜ್ಯದಲ್ಲಿ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತಿರುತ್ತದೆ.  ಈ ಬದಲಾವಣೆಗಳನ್ನು ಎದುರಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು. 

ಬಿಸಿಲಿಗೆ ಮೈಯಿಂದ ಬೆವರು ಹೆಚ್ಚು ಹೋಗುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಆದ್ದರಿಂದ ಹೆಚ್ಚು ನೀರು ಕುಡಿಯಿರಿ. ಇನ್ನೂ ಬಾಯಾರಿಕೆ ಆಗದಿದ್ದರೂ ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಿರಿ.

ನೈಸರ್ಗಿಕ ಪಾನೀಯಗಳು:
ಎಳನೀರು, ಮಜ್ಜಿಗೆ, ನಿಂಬೆ ಹಣ್ಣಿನ ರಸ ಮತ್ತು ಮನೆಯಲ್ಲಿ ಮಾಡಿದ ಹಣ್ಣಿನ ಜ್ಯೂಸ್ಗಳು ಉತ್ತಮ.

ಸಕ್ಕರೆ ಅಂಶವಿರುವ ಪಾನೀಯ ಬೇಡ:
ಅತಿಯಾದ ಕಾಫಿ, ಟೀ ಅಥವಾ ಸೋಡಾ ಸೇವನೆ ದೇಹವನ್ನು ಮತ್ತಷ್ಟು ನಿರ್ಜಲೀಕರಣಗೊಳಿಸುತ್ತದೆ.