ಶುಂಠಿ ಪುಡಿಯು ಆರೋಗ್ಯಕರ ಆಯ್ಕೆ ಆಗಿದೆ. ಆರೋಗ್ಯ ಸಮಸ್ಯೆ ನಿವಾರಣೆಗೆ ಶುಂಠಿ ಪುಡಿ ಬಳಕೆ ಮಾಡಲಾಗುತ್ತದೆ. ಶುಂಠಿ ಪುಡಿಯು ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನ ನೀಡುತ್ತದೆ. ಒಣ ಶುಂಠಿ ಕಷಾಯ ಮಾಡಿ ಸೇವಿಸುವುದು, ಚಹಾ ಮಾಡಲು, ಚಟ್ನಿ ಮತ್ತು ಇತರೆ ಭಕ್ಷ್ಯಗಳ ಮೂಲಕ ತಿನ್ನಲಾಗುತ್ತದೆ.
ಒಣ ಶುಂಠಿ ಪುಡಿ ಅಡ್ಡ ಪರಿಣಾಮಗಳು ಹಲವಾರು ಇದೆ. ಒಣ ಶುಂಠಿ ಪುಡಿ ಸಾಮಾನ್ಯ ಪ್ರಮಾಣದಲ್ಲಿ ಅಂದರೆ ದಿನಕ್ಕೆ 1ರಿಂದ 4 ಗ್ರಾಂ ಹೆಚ್ಚಿನವರಿಗೆ ಸುರಕ್ಷಿತವಾಗಿದೆ. ಆದರೆ ಅತಿಯಾಗಿ ಸೇವಿಸಿದರೆ ಅಥವಾ ಕೆಲವು ವ್ಯಕ್ತಿಗಳಲ್ಲಿ ಕೆಲವು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು.
ಒಣ ಶುಂಠಿಯಲ್ಲಿ ಕಂಡು ಬರುವ ಜಿಂಜರಾಲ್ ಅಂಶವು ಜೈವಿಕ ಸಕ್ರಿಯ ಸಂಯುಕ್ತವಾಗಿದೆ. ಇದು ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ. ಚಯಾಪಚಯ ಸುಧಾರಿಸುತ್ತದೆ. ಕೊಬ್ಬನ್ನು ಕಡಿಮೆ ಮಾಡುವ ಮೂಲಕ ತೂಕ ನಷ್ಟಕ್ಕೆ ಸಹಕಾರಿ.
ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ. ಕೆಮ್ಮು, ನೆಗಡಿ, ನೋಯುತ್ತಿರುವ ಗಂಟಲು ಮತ್ತು ಜೀರ್ಣಕಾರಿ ಸಮಸ್ಯೆ ನಿವಾರಿಸುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ಹೈಪೋಲಿಪಿಡೆಮಿಕ್ ಅಂಶಗಳಿಂದ ಸಮೃದ್ಧ ಶುಂಠಿಯು ರಕ್ತದ ಕೊಬ್ಬಿನ ಮಟ್ಟ ಕಡಿಮೆ ಮಾಡುತ್ತದೆ. ಇದು ಪಿತ್ತಗಲ್ಲು ಅಥವಾ ಹುಣ್ಣು ಕಡಿಮೆ ಮಾಡುತ್ತದೆ.
ಇದು ತೂಕ ಇಳಿಕೆಗೆ ಸಹಕಾರಿ. ಜಿಂಜರಾಲ್ ಅಂಶವು ದೇಹದ ತೂಕ ಕಡಿಮೆ ಮಾಡಲು ಸಹಕಾರಿ. ಇದು ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ಜಿಂಜರಾಲ್ ಪೊಟ್ಯಾಸಿಯಮ್, ಸತು, ಕಬ್ಬಿಣ, ವಿಟಮಿನ್ಗಳು, ಕ್ಯಾಲ್ಸಿಯಂ ಮತ್ತು ಬೀಟಾ-ಕ್ಯಾರೋಟಿನ್ ಅನ್ನು ಹೊಂದಿದೆ. ಇದು ಅನಾರೋಗ್ಯ ತಡೆದು ಹೆಲ್ದಿಯಾಗಿರಿಸುತ್ತದೆ.
ಒಣ ಶುಂಠಿಯನ್ನು ಅತಿಯಾಗಿ ತಿಂದರೆ ಇದು ಕೆಲವು ಅನಾನುಕೂಲತೆ ಉಂಟು ಮಾಡುತ್ತದೆ. ಅದರಲ್ಲಿ ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುತ್ತದೆ. ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಒಣ ಶುಂಠಿಯನ್ನು ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆ ಹಾಳು ಮಾಡುತ್ತದೆ. ಅತಿಸಾರ ಮತ್ತು ಹೊಟ್ಟೆ ಸೆಳೆತ ಸಮಸ್ಯೆ ಹೆಚ್ಚುತ್ತದೆ.
ಎದೆಯುರಿ ಅಪಾಯ ಸಮಸ್ಯೆ ಉಂಟು ಮಾಡುತ್ತದೆ. ಹೀಗಾಗಿ ಪ್ರತಿದಿನ ಸೇವನೆ ತಪ್ಪಿಸಿ. ಗರ್ಭಾವಸ್ಥೆಯಲ್ಲಿ ಕಾಳಜಿ ವಹಿಸಿ. ಒಣ ಶುಂಠಿಯು ಗರ್ಭಾವಸ್ಥೆಯಲ್ಲಿ ಹೆಚ್ಚು ಸೇವಿಸದಿರಿ. ಇದು ಗರ್ಭಿಣಿಯರಲ್ಲಿ ಅಸಿಡಿಟಿ ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಒಣ ಶುಂಠಿಯ ಸೇವನೆ ಮಿತವಾಗಿರಲಿ. ಅಂದಾಗ ಇದು ಆರೋಗ್ಯಕ್ಕೆ ಉತ್ತಮ.
ಎದೆಯುರಿ ಅಥವಾ ಆಸಿಡಿಟಿ ಉಂಟು ಮಾಡುತ್ತದೆ. ಶುಂಠಿ ಹೊಟ್ಟೆಯ ಆಸಿಡ್ ಹೆಚ್ಚಿಸುವುದರಿಂದ ಎದೆಯುರಿ, ರಿಫ್ಲೆಕ್ಸ್ ಅಥವಾ ಹೊಟ್ಟೆಯ ಅಸ್ವಸ್ಥತೆ ಉಂಟಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆಯ ಚಲನೆ ಹೆಚ್ಚಾಗಿ ಅತಿಸಾರವಾಗಬಹುದು. ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಬ್ಲೋಟಿಂಗ್ ಉಂಟಾಗುತ್ತದೆ. ಜೀರ್ಣಕ್ರಿಯೆಯಲ್ಲಿ ಬದಲಾವಣೆಯಿಂದ ಉಂಟಾಗುತ್ತದೆ.
ಬರ್ಪಿಂಗ್ ಅಥವಾ ಹೊಟ್ಟೆಯ ಅಸ್ವಸ್ಥತೆ ಉಂಟಾಗಬಹುದು. ಪುಡಿಯನ್ನು ನೇರವಾಗಿ ಹೆಚ್ಚು ಸೇವಿಸಿದರೆ ಬಾಯಿ ಅಥವಾ ಗಂಟಲು ಜ್ವಾಲೆ ಉಂಟಾಗುತ್ತದೆ. ಹೆಚ್ಚಿನ ಡೋಸ್ ಅಂದರೆ 5 ಗ್ರಾಂ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದಿನಕ್ಕೆ ಸೇವಿಸಿದ್ರೆ ಸಮಸ್ಯೆಗಳು ಹೆಚ್ಚಾಗುತ್ತವೆ.
