ಕುಂಬಳಕಾಯಿ ಬೀಜದಲ್ಲಿ ಹೆಚ್ಚಿನ ಪೌಷ್ಟಿಕಾಂಶದ ಜೊತೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಈ ಬೀಜಗಳ ಸೇವನೆಯು ಸಂತಾನದ ಫಲವತ್ತತೆಯನ್ನು ಸುಧಾರಿಸಲು, ಉತ್ತಮ ಹೃದಯದ ಆರೋಗ್ಯವನ್ನು ಉತ್ತೇಜಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹಣ್ಣು, ತರಕಾರಿ, ಬೇಳೆ-ಕಾಳು, ಬೀಜ ಇವುಗಳಲೆಲ್ಲಾ ಆರೋಗ್ಯಕ್ಕೆ ಏನ್ ಬೇಕೋ ಅದೆಲ್ಲವೂ ಹೇರಳವಾಗಿ ಲಭಿಸುತ್ತದೆ. ನಿಯಮಿತವಾಗಿ ಇವುಗಳನ್ನೆಲ್ಲಾ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ರೋಗಗಳನ್ನು ದೂರ ಇಡಬಹುದು ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದು. ಸಾಮಾನ್ಯವಾಗಿ ಸಣ್ಣಕ್ಕಿರುವ ಆದರೆ ಆರೋಗ್ಯ ಲಾಭಗಳಲ್ಲಿ ಮುಖ್ಯವಾಗಿ ಬೇಕಾದ ಕುಂಬಳಕಾಯಿ ಬೀಜದ ಬಗ್ಗೆ ನಿಮಗೆ ಗೊತ್ತಿರಲೇಬೇಕು. ಈ ಬೀಜ ಹಲವು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿವೆ. ಅಂತೆಯೇ ಕುಂಬಳಕಾಯಿ ಬೀಜ ರುಚಿ ಹಾಗೂ ಪ್ರಯೋಜನ ಎರಡಕ್ಕೂ ಹೆಸರುವಾಸಿ.
ಕುಂಬಳಕಾಯಿ ಬೀಜದಲ್ಲಿದೆ ಆರೋಗ್ಯದ ಗುಟ್ಟು:
ಕುಂಬಳಕಾಯಿ ಬೀಜದಲ್ಲಿ ಹೆಚ್ಚಿನ ಪೌಷ್ಟಿಕಾಂಶದ ಜೊತೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಈ ಬೀಜಗಳ ಸೇವನೆಯು ಸಂತಾನದ ಫಲವತ್ತತೆಯನ್ನು ಸುಧಾರಿಸಲು, ಉತ್ತಮ ಹೃದಯದ ಆರೋಗ್ಯವನ್ನು ಉತ್ತೇಜಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮಧುಮೇಹ ನಿಯಂತ್ರಿಸುವಲ್ಲಿ ಎತ್ತಿದ ಕೈ:
ಪೋಷಕಾಂಶಗಳ ಕಣಜವಾಗಿರುವ ಕುಂಬಳಬೀಜವು ಮಧುಮೇಹವನ್ನು ನಿಯಂತ್ರಿಸುವಲ್ಲಿ ಎತ್ತಿದ ಕೈ. ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಮಾನಸಿಕ ಆರೋಗ್ಯವೃದ್ಧಿಗೂ ಸಹಕಾರಿ. ಈ ಬೀಜದಲ್ಲಿ ಮೆಗ್ನೀಸಿಯಂ, ಸತು, ಉತ್ಕರ್ಷಣ ನಿರೋಧಕ ಅಂಶಗಳು, ಇತರ ಅಗತ್ಯ ಜೀವಸತ್ವಗಳು ಹಾಗೂ ಖನಿಜಾಂಶಗಳು ಅಡಗಿವೆ.
ಕುಂಬಳಕಾಯಿ ಬೀಜ ಸೇವಿಸೋದು ಹೇಗೆ?
ಆದರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನವಿರುವ ಬೀಜಗಳನ್ನು ಸುಮಾರು ಜನಕ್ಕೆ ಹೇಗೆ ಆಹಾರಕ್ಕೆ ಸೇರಿಸಿಕೊಳ್ಳಬೇಕು ಅಂತಾನೇ ಗೊತ್ತಿಲ್ಲ. ಹಾಗಾದ್ರೆ ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸಲು 5 ವಿಧಾನಗಳು ಇಲ್ಲಿವೆ
ಯೋಗರ್ಟ್ ಮತ್ತು ಮೊಸರಿಗೆ ಸೇರಿಸಿ:
ನಿಮ್ಮ ಉಪಹಾರ ಅಥವಾ ಲಘು ಆಹಾರದಲ್ಲಿ ಪೌಷ್ಟಿಕಾಂಶಕ್ಕೋಸ್ಕರ ಮೊಸರು ಅಥವಾ ಓಟ್ಸ್ಗಳ ಮೇಲೆ ಕುಂಬಳಕಾಯಿ ಬೀಜಗಳನ್ನು ಹಾಕಿಕೊಳ್ಳಬಹುದು. ಈ ಬೀಜಗಳು ನಿಮ್ಮ ಆಹಾರಕ್ಕೆ ರುಚಿ ಎಲ್ಲವನ್ನೂ ನೀಡುತ್ತದೆ. ಯೋಗರ್ಟ್ ಮತ್ತು ಮೊಸರು ಆರೋಗ್ಯಕ್ಕೆ ಹೇಳಿ ಮಾಡಿಸಿದ್ದು ಮತ್ತು ಕುಂಬಳಕಾಯಿ ಬೀಜ ಅದರ ಪ್ರಯೋಜನಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಟ್ರಯಲ್ ಮಿಕ್ಸ್:
ಟ್ರಯಲ್ ಮಿಕ್ಸ್ ಅನ್ನು ಆರೋಗ್ಯಕರ ಆಯ್ಕೆ ಮಾಡುವಲ್ಲಿ ಪಂಪ್ಕಿನ್ ಸೀಡ್ಸ್ ಒಂದೊಳ್ಳೆ ಆಯ್ಕೆ. ಕುಂಬಳಕಾಯಿ ಬೀಜಗಳು, ಡ್ರೈಪ್ರೂಟ್ಸ್ ಮತ್ತು ಚಾಕೊಲೇಟ್ ಅನ್ನು ಮಿಕ್ಸ್ ಮಾಡುವ ಮೂಲಕ ರುಚಿಕರವಾದ ಟ್ರಯಲ್ ಮಿಕ್ಸ್ ಅನ್ನು ತಯಾರು ಮಾಡಬಹುದು. ಶಕ್ತಿಯನ್ನು ಹೆಚ್ಚಿಸಲು ನೀವು ಇದನ್ನು ಉತ್ತಮ ಸ್ನ್ಯಾಕ್ ಆಗಿ ಸೇವಿಸಬಹುದು.
ಸಲಾಡ್:
ಆರೋಗ್ಯಕರ ಮತ್ತು ಸುವಾಸನೆಯ ಸಲಾಡ್ಗಾಗಿ ಅವುಗಳ ಮೇಲೆ ಕುಂಬಳಕಾಯಿ ಬೀಜಗಳನ್ನು ಹಾಕಿಕೊಳ್ಳಬಹುದು. ಈ ಬೀಜಗಳು ಸಲಾಡ್ಗೆ ಪರಿಮಳ ಮತ್ತು ಹೆಚ್ಚುವರಿ ವಿನ್ಯಾಸವನ್ನು ನೀಡುತ್ತದೆ. ತರಕಾರಿ, ಹಣ್ಣು ಹೀಗೆ ಯಾವುದೇ ಸಲಾಡ್ಗೆ ಬೇಕಾದರೂ ಈ ಬೀಜಗಳನ್ನು ಸೇರಿಸಿಕೊಳ್ಳಬಹುದು.
ಪೆಸ್ಟೊ ಸಾಸ್:
ಕ್ಲಾಸಿಕ್ ಪೆಸ್ಟೊ ಸಾಸ್ಗೆ ವಿಶಿಷ್ಟವಾದ ರುಚಿ ನೀಡಲು, ಪೈನ್ ಬೀಜಗಳ ಬದಲಿಗೆ ನಿಮ್ಮ ಮನೆಯಲ್ಲಿ ತಯಾರಿಸಿದ ಪಾಕವಿಧಾನಕ್ಕೆ ಕುಂಬಳಕಾಯಿ ಬೀಜಗಳನ್ನು ಸೇರಿಸಬಹುದು. ಈ ಬೀಜಗಳ ಸೇರ್ಪಡೆಯು ಪರಿಮಳವನ್ನು ಹೆಚ್ಚಿಸುವುದಲ್ಲದೆ ನಿಮ್ಮ ಊಟಕ್ಕೆ ಪೌಷ್ಟಿಕಾಂಶ ಕೂಡ ಸೇರಿಸುತ್ತದೆ.
ಕುಂಬಳಕಾಯಿ ಬೀಜ ಹಾಳು ಮಾಡಬೇಡಿ:
ಹಾಗಿದ್ರೆ ಇನ್ನುಮುಂದೆ ಕುಂಬಳಕಾಯಿಯಿಂದ ಯಾವುದೇ ಖಾದ್ಯವನ್ನು ತಯಾರಿಸುವಾಗಲೂ ಬೀಜಗಳನ್ನು ಜೋಪಾನವಾಗಿ ಎತ್ತಿಟ್ಟುಕೊಂಡು ಅವುಗಳನ್ನು ಬಳಸಿ ಮತ್ತು ಆರೋಗ್ಯ ಪ್ರಯೋಜನದ ಜೊತೆ ಆಹಾರಕ್ಕೆ ರುಚಿ ಸೇರಿಸಿಕೊಳ್ಳಿ.
