ರುಚಿಕರವಾದ ಪಾಲಕ್ ಸೊಪ್ಪಿನ ಚಟ್ನಿ ಮಾಡಿ ನೋಡಿ! ಆರೋಗ್ಯಕ್ಕೂ ಬೆಸ್ಟ್!

ಪಾಲಕ್ ಸೊಪ್ಪುವಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ನಂತಹ ಅನೇಕ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ರಕ್ತಹೀನತೆಯನ್ನು ತಡೆಗಟ್ಟಲು ಮತ್ತು ಮೂಳೆಗಳನ್ನು ಬಲಪಡಿಸಲು ತುಂಬಾ ಉಪಯುಕ್ತವಾಗಿದೆ.

ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಇಡ್ಲಿ, ದೋಸೆ, ಅನ್ನ ಯಾವುದಕ್ಕೆ ಆಗಿರಲಿ ಹಸಿರು ಮೆಣಸಿನಕಾಯಿ ಚಟ್ನಿ, ತೆಂಗಿನಕಾಯಿ ಚಟ್ನಿ ಅಥವಾ ಒಣ ಮೆಣಸಿನಕಾಯಿ ಚಟ್ನಿಯನ್ನು ಟಿಫನ್ಗೆ ತಯಾರಿಸುತ್ತೇವೆ. ಆದರೆ ದಿನಾ ಒಂದೇ ರೀತಿಯ ಚಟ್ನಿ ತಿಂದು ಬೋರ್ ಆಗಿದ್ದರೆ ಪಾಲಕ್ ಚಟ್ನಿ ಟ್ರೈ ಮಾಡಬಹುದು. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಅಲ್ಲದೇ ಪಾಲಕ್ ಸೊಪ್ಪು ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ನಂತಹ ಅನೇಕ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದೆ. 

ಇದು ರಕ್ತಹೀನತೆಯನ್ನು ತಡೆಗಟ್ಟಲು ಮತ್ತು ಮೂಳೆಗಳನ್ನು ಬಲಪಡಿಸಲು ತುಂಬಾ ಉಪಯುಕ್ತವಾಗಿದೆ. ಅದರಲ್ಲೂ ಇದರಿಂದ ತಯಾರಿಸಿದ ಚಟ್ನಿ ಬಿಸಿ ಅನ್ನ, ಚಪಾತಿ, ಇಡ್ಲಿ ಮತ್ತು ದೋಸೆಯೊಂದಿಗೆ ಸವಿಯಲು ಸಖತ್ ರುಚಿಕರವಾಗಿರುತ್ತದೆ.

ಪಾಲಕ್ ಸೊಪ್ಪಿನ ಚಟ್ನಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು!

ಪಾಲಕ್ ಸೊಪ್ಪು - 1 ಕಪ್

ಎಣ್ಣೆ - 2 ಚಮಚ

ಕಡ್ಲೆ ಬೇಳೆ ಮತ್ತು ಕಡಲೆ ಹಿಟ್ಟು – 1 ಚಮಚ

ತುರಿದ ತೆಂಗಿನಕಾಯಿ – ½ ಕಪ್

ಬಿಳಿ ಎಳ್ಳು - 1 ಚಮಚ

ಜೀರಿಗೆ - 1 ಚಮಚ

ಬೆಳ್ಳುಳ್ಳಿ ಎಸಳು - 5 ರಿಂದ 7

ಹಸಿ ಮೆಣಸಿನಕಾಯಿ – 2

ಹುಣಸೆಹಣ್ಣು – 1 ಸಣ್ಣ ಪೀಸ್

ಉಪ್ಪು - ರುಚಿಗೆ ತಕ್ಕಷ್ಟು

ಪಾಲಕ್ ಸೊಪ್ಪಿನ ಚಟ್ನಿ ತಯಾರಿಸುವ ವಿಧಾನ!
ಮೊದಲು ಪಾಲಕ್ ಸೊಪ್ಪನ್ನು ಬಿಡಿಸಿ, ನೀರಿನಲ್ಲಿ ಸ್ವಚ್ಛಗೊಳಿಸಿ. ಈಗ ಸ್ಟವ್ ಆನ್ ಮಾಡಿ, ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ, ಪಾಲಕ್ ಸೊಪ್ಪನ್ನು ಸೇರಿಸಿ, ಕಡಿಮೆ ಉರಿಯಲ್ಲಿ ಮೃದುವಾಗುವವರೆಗೆ ಹುರಿದು, ಅದನ್ನು ಪ್ರತ್ಯೇಕ ಪಾತ್ರೆಗೆ ಹಾಕಿ.

ಈಗ ಅದೇ ಪ್ಯಾನ್ನಲ್ಲಿ ಇನ್ನೊಂದು ಚಮಚ ಎಣ್ಣೆ ಹಾಕಿ ಜೀರಿಗೆ, ಬೆಳ್ಳುಳ್ಳಿ ಎಸಳು ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಹುರಿಯಿರಿ. ನಂತರ ಕಡಲೆ ಮತ್ತು ಉದ್ದಿನ ಬೇಳೆ ಸೇರಿಸಿ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಿರಿ. ಕೊನೆಗೆ ತೆಂಗಿನಕಾಯಿ ತುರಿ, ಎಳ್ಳು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಸ್ಟವ್ ಆಫ್ ಮಾಡಿ.