ಮೊಸರಿನಲ್ಲಿ ಪ್ರೋಬಯಾಟಿಕ್ಗಳು ಮತ್ತು ಕೆಲವು ಅಗತ್ಯ ಪೋಷಕಾಂಶಗಳು ಇರುತ್ತವೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದಲ್ಲದೇ, ಕೆಲವು ಆರೋಗ್ಯಕರ ಪದಾರ್ಥಗಳನ್ನು ಮೊಸರಿನೊಂದಿಗೆ ಬೆರೆಸುವುದರಿಂದ ಅದರ ರುಚಿ ಮತ್ತು ಪೌಷ್ಟಿಕಾಂಶದ ಮೌಲ್ಯ ಎರಡೂ ಹೆಚ್ಚಾಗುತ್ತದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳಲು ಕೆಲವು ಸುಲಭವಾದ ಮಾರ್ಗಗಳು ಈ ಕೆಳಗಿನಂತಿವೆ ನೋಡಿ. ಇದು ನಿಮಗೆ ಉಪಯುಕ್ತವಾಗಿದೆ. ಹಾಗಾದ್ರೆ ಮೊಸರಿನೊಂದಿಗೆ ಯಾವ ಪದಾರ್ಥಗಳನ್ನು ಸೇವಿಸಬಹುದು ಅಂತ ನೋಡೋಣ ಬನ್ನಿ.
ಮೊಸರಿನೊಂದಿಗೆ ಡ್ರೈ ಫ್ರೂಟ್ಸ್!
ಅಂಜೂರ, ಬಾದಾಮಿ ಮತ್ತು ಪಿಸ್ತಾ ಮುಂತಾದ ಡ್ರೈ ಫ್ರೂಟ್ಸ್ ಅನ್ನು ಮೊಸರಿನೊಂದಿಗೆ ಬೆರೆಸಿ ತಿನ್ನುವುದರಿಂದ ತೂಕ ಇಳಿಸಿಕೊಳ್ಳಬಹುದಾಗಿದೆ. ಇದು ದೇಹದಲ್ಲಿ ಸಂಗ್ರಹವಾಗುವ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕೆಲ ದಿನಗಳಲ್ಲಿಯೇ ಕರಗಿಸುತ್ತದೆ. ಹೀಗಿದ್ದರೂ ನಿಮ್ಮ ಬೊಜ್ಜು ಕರಗುತ್ತಿಲ್ಲ ಅಂತ ಅನಿಸಿದರೆ ಮತ್ತು ನಿಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ನಿಮ್ಮ ತೂಕ ಇಳಿಸಿಕೊಳ್ಳಲು ಆಗುತ್ತಿಲ್ಲ ಎನ್ನುವುದಾದರೆ ಮೊಸರಿನೊಂದಿಗೆ ಬಾದಾಮಿಯನ್ನು ಬೆರೆಸಿ ತಿನ್ನಲು ಪ್ರಾರಂಭಿಸಿ.
ಮೊಸರು ಮತ್ತು ಅನ್ನ!
ನೀವು ಕರಿಬೇವಿನ ಎಲೆಗಳು ಮತ್ತು ಸಾಸಿವೆ ಬೀಜಗಳನ್ನು ಬೆರೆಸಿದ ಮೊಸರನ್ನವನ್ನು ತಿನ್ನಬಹುದು, ಇದು ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದಷ್ಟೇ ಅಲ್ಲದೇ, ತೂಕ ಇಳಿಸಿಕೊಳ್ಳಲು ಸಹ ಸಹಾಯಕವಾಗಿದೆ. ಈ ಮೂಲಕ ನೀವು ನಿಮ್ಮ ತೂಕವನ್ನು ಸುಲಭವಾಗಿ ಕರಗಿಸಿಕೊಳ್ಳಬಹುದು.
ಮೊಸರಿನೊಂದಿಗೆ ಕರಿಮೆಣಸು!
ಮೊಸರಿನಲ್ಲಿ ಕರಿಮೆಣಸನ್ನು ಬೆರೆಸಿ ತೆಗೆದುಕೊಳ್ಳಬಹುದು. ಕರಿಮೆಣಸಿನಲ್ಲಿ ಪೈಪರಿನ್ ಎಂಬ ಅಂಶವಿದ್ದು ಅದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೊಟ್ಟೆಯಿಂದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಪ್ರತಿದಿನ ಇದನ್ನು ಸೇವಿಸಿ, ಇದು ನಿಮ್ಮ ಹೊಟ್ಟೆಯನ್ನು ಶೀಘ್ರದಲ್ಲೇ ಕರಗಿಸಲು ಸಹಾಯ ಮಾಡುತ್ತದೆ.
ಮೊಸರಿನೊಂದಿಗೆ ಹಣ್ಣುಗಳನ್ನು ಬೆರೆಸಿ ಸ್ಮೂಥಿ ತಯಾರಿಸಿ!
ಮೊಸರನ್ನು ಹಣ್ಣುಗಳೊಂದಿಗೆ ಕೂಡ ತಿನ್ನಬಹುದು. ಇದಕ್ಕಾಗಿ ಸೇಬು, ಬಾಳೆಹಣ್ಣು ಮತ್ತು ದ್ರಾಕ್ಷಿಯಂತಹ ಹಣ್ಣುಗಳನ್ನು ಮೊಸರಿನೊಂದಿಗೆ ಬೆರೆಸಿ ಸ್ಮೂಥಿ ತಯಾರಿಸಿ ಸೇವಿಸಬಹುದು. ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾದ ಬೊಜ್ಜು ಕರಗುತ್ತದೆ ಮತ್ತು ನಿಮ್ಮ ತೂಕವು ವೇಗವಾಗಿ ಕರಗಲು ಆರಂಭವಾಗುತ್ತದೆ ಮತ್ತು ಒಂದು ತಿಂಗಳೊಳಗೆ ನಿಮ್ಮ ಹೊಟ್ಟೆಯನ್ನು ಸ್ಲಿಮ್ ಆಗಿಸುತ್ತದೆ.
