ರಕ್ತದಾನ ಮಹಾದಾನ, ಆದರೆ ಟ್ಯಾಟೂ ಹಾಕಿದವರು ರಕ್ತದಾನ ಮಾಡಬಹುದೇ ಎಂದು ಕೇಳುವುದಾದರೆ ನೀವು 1 ವರ್ಷದವರೆಗೆ ರಕ್ತದಾನ ಮಾಡದಿರುವುದೇ ಒಳ್ಳೆಯದು.
ಟ್ಯಾಟೂವಿಗೆ ಬಳಸುವ ಸೂಜಿ ಬಗ್ಗೆ ಎಚ್ಚರ ಟ್ಯಾಟೂ ಹಲವು ಕಡೆ ಹಾಕುತ್ತಾರೆ. ಟ್ಯಾಟೂ ಹಾಕಿಸುವಾಗ ಎಲ್ಲಾ ಸುರಕ್ಷಿತ ವಿಧಾನಗಳನ್ನು ಅನುಸರಿಸುವ ಪರಿಣಿತರ ಬಳಿ ಹಾಕಿಸುವುದು ಒಳ್ಳೆಯದು. ಏಕೆಂದರೆ ಟ್ಯಾಟೂ ಹಾಕಿಸುವಾಗ ಬಳಸುವ ಸೂಜಿ ಬಗ್ಗೆ ತುಂಬಾನೇ ಎಚ್ಚರವಹಿಸಬೇಕು. ಒಬ್ಬರಿಗೆ ಬಳಸಿದ ಸೂಜಿ ಮತ್ತೊಬ್ಬರಿಗೆ ಬಳಸಿದಾಗ ಏಡ್ಸ್, ಹೆಪಟೈಟಿಸ್ ಮುಂತಾದ ಅಪಾಯಕಾರಿ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಟ್ಯಾಟೂ ಹಾಕಿದ ಬಳಿಕ ರಕ್ತದಾನಕ್ಕೆ ಮುಂದಾಗಬೇಡ
ಟ್ಯಾಟೂ ಹಾಕಿಸಿಕೊಳ್ಳುವಾಗ ಈ ಎಚ್ಚರಿಕೆವಹಿಸಿ ಹಚ್ಚೆ ಅಥವಾ ಟ್ಯಾಟೂ ಹಾಕಿಸಿಕೊಳ್ಳುವಾಗ ಟ್ಯಾಟೂ ಹಾಕುವ ಕಲಾವಿದರು ಹೊಸ ಸೂಜಿಗಳನ್ನು ಬಳಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ. ಒಮ್ಮೆ ಬಳಸಿದ ಸೂಜಿ ಬಳಸಲು ಅನುಮತಿ ನೀಡಬೇಡಿ. ಅಲ್ಲದೆ ಹಚ್ಚೆ ಹಾಕಲು ಬಳಸುವ ಪರಿಕರಗಳನ್ನು ಸರಿಯಾಗಿ ಸ್ಟೆರ್‌ಲೈಸ್ ಮಾಡುತ್ತಿದ್ದಾರೆಯೇ ಎಂದು ಗಮನಿಸಿದ ಬಳಿಕವಷ್ಟೇ ಟ್ಯಾಟೂ ಹಾಕಿಸಿ. ಟ್ಯಾಟೂ ಹಾಕಿಸುವ ಕಲಾವಿದನ ಬಗ್ಗೆ ಮಾಹಿತಿ ಇರಲಿ ನಿಮಗೆ ಟ್ಯಾಟೂ ಹಾಕುವ ಕಲಾವಿದ ಸಹ ಮುಖ್ಯವಾಗುತ್ತಾನೆ. ಮೊದಲಿಗೆ ಟ್ಯಾಟೂ ಹಾಕುವ ಸ್ಥಳದ, ಉಪಕರಣಗಳ ಸ್ವಚ್ಛತೆ ಹಾಗೂ ಎಲ್ಲಾ ಅಗತ್ಯ ಉಪಕರಣಗಳು ಇದೆಯೇ ಎಂಬುದನ್ನು ಪರಿಶೀಲಿಸಿ, ನಂತರ ಅವರ ಅನುಭವ, ಕೌಶಲ್ಯದ ಬಗ್ಗೆ ವಿಚಾರಿಸಿ. ಅವರ ಹಿಂದಿನ ಕೆಲಸಗಳನ್ನು ನೋಡಿ. ಇಲ್ಲವಾದಲ್ಲಿ ಇದು ನಿಮ್ಮ ಆರೋಗ್ಯ ಹಾಗೂ ಟ್ಯಾಟೂ ವಿನ್ಯಾಸದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು
ಉತ್ತಮ ಟ್ಯಾಟೂ ಕಲಾವಿದ ಸಿಕ್ಕಾಗ ಹಣ ವಿಷಯಕ್ಕಾಗಿ ರಾಜಿಯಾಗಿ ನಿರಾಕರಿಸಬೇಡಿ. ಇದು ನಿಮ್ಮ ಜೀವನದುದ್ದಕ್ಕೂ ನಿಮ್ಮ ಜೊತೆಯಲ್ಲಿರುವ, ಅಲ್ಲದೆ ನಿಮ್ಮ ಮೊದಲ ಟ್ಯಾಟೂ ಇದಾಗಿದೆ ಎಂಬುದು ನೆನಪಿನಲ್ಲಿಡಿ. ಇವರು ಉತ್ತಮ ಅನುಭವಿಗಳೂ ಆಗಿರುತ್ತಾರೆ, ಟ್ಯಾಟೂ ಹಾಕಿದ ನಂತರ ಅವರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಿ
ಟ್ಯಾಟೂ ಅಡ್ಡಪರಿಣಾಮಗಳು ಟ್ಯಾಟೂಗಳಿಂದ ಚರ್ಮ ರೋಗಗಳು ಸುಲಭವಾಗಿ ಹರಡುತ್ತವೆ. ಸೋಂಕನ್ನು ತಡೆಗಟ್ಟಲು, ಅವುಗಳನ್ನು ಆಗಾಗ್ಗೆ ಬ್ಯಾಂಡೇಜ್ ಅಥವಾ ಅಂಟಿಕೊಳ್ಳುವ ಬಟ್ಟೆಯಿಂದ ಸುತ್ತಿಡಲಾಗುತ್ತದೆ. ಹಾಗಂತ ಅದನ್ನು ಬಟ್ಟೆಯಿಂದ ಮುಚ್ಚುವುದು ಅಥವಾ ಗಾಳಿ ಆಡದಂತಹ ಬಟ್ಟೆಯನ್ನು ಧರಿಸಬಾರದು. ಹಾಗೆ ಮಾಡಿದರೆ ಸಾಕಷ್ಟು ತೊಂದರೆ ಉಂಟಾಗುವುದು. ಹೊಟ್ಟೆ, ತೋಳು ಅಥವಾ ಇನ್ಯಾವುದೇ ಪ್ರದೇಶದಲ್ಲಿ ಹಚ್ಚೆಯನ್ನು ಹಾಕಿಸಿಕೊಂಡಿದ್ದರೆ ಅದರ ನೋವು ಮತ್ತು ಗಾಯ ಗುಣವಾಗುವ ತನಕ ಗಾಳಿ ಆಡಲು ಬಿಡಬೇಕು. ಆಗ ಬಹುಬೇಗ ಗಾಯ ಗುಣವಗುವುದು. ಸೋಂಕು ಮತ್ತು ಗಾಯಗಳಂತಹ ಸಮಸ್ಯೆ ಆಗದಂತೆ ಸುಲಭವಾಗಿ ತಡೆಯಬಹುದು. ಅಲರ್ಜಿ ಸಮಸ್ಯೆಯಿದ್ದರೆ ಟ್ಯಾಟೂ ಹಾಕಿಸಬೇಡಿ ನಿಮಗೆ ಅಲರ್ಜಿ ಸಮಸ್ಯೆಯಿದ್ದರೆ ಟ್ಯಾಟೂ ಹಾಕಿಸಲು ಹೋಗಬೇಡಿ, ಏಕೆಂದರೆ ಇದರಿಂದ ಅಲರ್ಜಿ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಟ್ಯಾಟೂ ಹಾಕಿಸುವಾಗಲೂ ಎಚ್ಚರವಹಿಸಿ, ಟ್ಯಾಟೂ ಹಾಕಿಸಿದ ಬಳಿಕ ಚೆನ್ನಾಗಿ ಆರೈಕೆ ಮಾಡಿ. ಟ್ಯಾಟೂ ಹಾಕಿಸಿ 6 ತಿಂಗಳು ಅಥವಾ 1 ವರ್ಷದ ಬಳಿಕ ನಿಮ್ಮ ಆರೋಗ್ಯ ಸ್ಥಿತಿ ಬಗ್ಗೆ ತಿಳಿಯಲು ರಕ್ತ ಪರೀಕ್ಷೆ ಮಾಡಿಸಿ, ನಂತರವಷ್ಟೇ ರಕ್ತದಾನಕ್ಕೆ ಮುಂದಾಗಿ.