ಈ ಕಾಲದಲ್ಲಿ ಮೇಕಪ್ ಬಳಸದೇ ಇರುವ ಮಹಿಳೆಯರು/ಹೆಣ್ಣುಮಕ್ಕಳು ಇಲ್ಲವೇ ಇಲ್ಲ ಎನ್ನಬಹುದು. ಎಂಥಾ ಸ್ಪುರದ್ರೂಪಿ ಇದ್ದರೂ ಕನಿಷ್ಠ ಮೇಕಪ್ ಮಾಡಿಕೊಳ್ಳುವುದು ಸಾಮಾನ್ಯ. ಹಲವರಂತೂ ನಿತ್ಯ ಸಾಕಷ್ಟು ಮೇಕಪ್, ಹೇರ್ ಕೇರ್ ಪ್ರಾಡಕ್ಟ್‌ಗಳನ್ನು ಬಳಸದೇ ಹೊರಗೆ ಹೋಗುವುದೇ ಇಲ್ಲ ಎನ್ನುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಅಲ್ಲದೆ ಇತ್ತೀಚೆಗೆ ಸಾಕಷ್ಟು ಹೊಸ-ಹೊಸ ಸೌಂದರ್ಯ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನಾವು ಸಹ ಇತರರ ಸಲಹೆ ಮೇರೆಗೆ ಅವುಗಳನ್ನೆಲ್ಲ ಬಳಸುತ್ತೇವೆ.
ಆದರೆ ಇದರ ಬಗ್ಗೆ ನಿಜವಾಗಿಯೂ ತಜ್ಞರ ಸಲಹೆ ಪಡೆದಿದ್ದೇವೆಯೇ, ಈ ಮೇಕಪ್ ಉತ್ಪನ್ನಗಳು ನಿಜಕ್ಕೂ ಆರೋಗ್ಯಕರವೇ, ಇದರಿಂದ ಎಷ್ಟೆಲ್ಲಾ ಅಡ್ಡಪಡಿಣಾಮ ಇದೆ ಗೊತ್ತಾ. ಹೌದು ತಜ್ಞರ ಪ್ರಕಾರ ಸೌಂದರ್ಯ ವರ್ಧಕ ಪ್ರಾಡಕ್ಟ್‌ಗಳಿಂದ ಮಹಿಳೆಯರಲ್ಲಿ ಬಂಜೆತನ ಸೇರಿದಂತೆ, ತಲೆನೋವು, ಮೊಡವೆ, ಬಿಳಿ ಕೂದಲು, ಅಲರ್ಜಿ, ಕಣ್ಣಿನ ಸೋಂಕಿನಂಥ ಸಮಸ್ಯೆಗಳು ಎದುರಾಗಬಹುದು ಎನ್ನುತ್ತಾರೆ.
ತಲೆನೋವು
ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಸಾಮಾನ್ಯ ಅಂಶವಾಗಿರುವ ಡಯಾಜೊಲಿಡಿನಿಲ್ ಯೂರಿಯಾ ಮತ್ತು ಡಿಎಮ್‌ಡಿಎಂ ಹೈಡಾಂಟೊಯಿನ್‌ನಂತಹ ರಾಸಾಯನಿಕಗಳು, ಇವೆರಡೂ ಫಾರ್ಮಾಲ್ಡಿಹೈಡ್ ಅನ್ನು ಬಿಡುಗಡೆ ಮಾಡುತ್ತವೆ. ಇದನ್ನು ಆಂಟಿಮೈಕ್ರೊಬಿಯಲ್ ಸಂರಕ್ಷಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕಗಳು ತಲೆನೋವು, ಕಿರಿಕಿರಿ ಮತ್ತು ಕಣ್ಣುಗಳಿಗೆ ಹಾನಿಯನ್ನುಂಟುಮಾಡುತ್ತವೆ ಎಂದು ತಿಳಿದುಬಂದಿದೆ. ನೀವು ತಲೆನೋವಿನಿಂದ ಬಳಲುತ್ತಿದ್ದರೆ ಕೆಲವು ದಿನಗಳವರೆಗೆ ಮೇಕಪ್ ಮಾಡದೇ ಪ್ರಯತ್ನಿಸಿ ನೋಡಿ, ನಿಮ್ಮ ತಲೆನೋವು ಕಡಿಮೆ ಆದರೂ ಆಗಬಹುದು.
ಡಿಯೋಡರೆಂಟ್‌ಗಳು ಬಂಜೆತನಕ್ಕೆ ಕಾರಣ ಸ್ಕಿನ್‌ಕೇರ್ ಉತ್ಪನ್ನಗಳು ಮತ್ತು ಡಿಯೋಡರೆಂಟ್‌ಗಳು ನಿಮ್ಮ ಚರ್ಮದಿಂದ ನೇರವಾಗಿ ದೇಹಕ್ಕೆ ಹೀರಲ್ಪಡುತ್ತವೆ, ಆದ್ದರಿಂದ ಈ ಉತ್ಪನ್ನಗಳಲ್ಲಿ ಬಳಸುವ ರಾಸಾಯನಿಕಗಳು ನಿಮ್ಮ ದೇಹಕ್ಕೆ ಸೋರಿಕೆಯಾಗುವ ಸಾಧ್ಯತೆಯಿದೆ. ಇಲಿಗಳ ಮೇಲೆ ನಡೆಸಿದ ಅಧ್ಯಯನವು ಬ್ಯುಟೈಲ್ ಪ್ಯಾರಾಬೆನ್ ಟೆಸ್ಟೋಸ್ಟೆರಾನ್ ಸ್ರವಿಸುವಿಕೆ ಮತ್ತು ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯ ಕಾರ್ಯವನ್ನು ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ ಎಂದು ಕಂಡುಹಿಡಿದಿದೆ. ಸೌಂದರ್ಯವರ್ಧಕಗಳ ಗ್ರಾಹಕರು ಮುಖ್ಯವಾಗಿ ಮಹಿಳೆಯರಾಗಿದ್ದರೂ, ಪ್ಯಾರಾಬೆನ್‌ಗಳು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಬೀರುವ ಪ್ರತಿಕೂಲ ಪರಿಣಾಮಗಳನ್ನು ಗಮನಿಸುವುದು ಮುಖ್ಯವಾಗಿದೆ. ಪ್ಯಾರಾಬೆನ್‌ಗಳನ್ನು ತ್ವಚೆ, ಮೇಕಪ್ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ನೈಸರ್ಗಿಕ ಎಂದು ಲೇಬಲ್ ಮಾಡಿದ ಉತ್ಪನ್ನಗಳೂ ಸಹ ಪ್ಯಾರಾಬೆನ್‌ಗಳನ್ನು ಹೊಂದಿರಬಹುದು ಎಚ್ಚರ.
ಮೊಡವೆ ಹೆಚ್ಚಿನ ಮಹಿಳೆಯರು ಅನುಭವಿಸುವ ಸಾಮಾನ್ಯ ಸಮಸ್ಯೆ ಆಗಿದೆ. ಇದು ಖಂಡಿತವಾಗಿಯೂ ಮೇಕಪ್‌ನ ಸಾಮಾನ್ಯ ಅಡ್ಡ ಪರಿಣಾಮಗಳಲ್ಲಿ ಒಂದಾಗಿದೆ. ನಿಮ್ಮ ಚರ್ಮವು ಇತರ ಯಾವುದೇ ಅಂಗಗಳಂತೆ ನಿಮ್ಮ ದೇಹದ ಭಾಗವಾಗಿದೆ, ಅದಕ್ಕೂ ಉಸಿರಾಡಲು ನಾವು ಅವಕಾಶ ಮಾಡಿಕೊಡಬೇಕು. ಆದರೆ ಅತಿಯಾದ ಮೇಕಪ್ ಬಳಸುವುದರಿಂದ ಅದು ನಮ್ಮ ಚರ್ಮವನ್ನು ಮುಚ್ಚುತ್ತದೆ, ಇದರಿಂದ ಚರ್ಮ ಉಸಿರಾಡಲು ಕಷ್ಟವಾಗುತ್ತದೆ. ಇದು ಕಪ್ಪು ಚುಕ್ಕೆಗಳ ರಚನೆಗೆ ಕಾರಣವಾಗುತ್ತದೆ, ಇದನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದಲ್ಲಿ ಮೊಡವೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಲಗುವ ಮುನ್ನ ನೈಸರ್ಗಿಕ ಕ್ಲೆನ್ಸರ್‌ನಿಂದ ನಿಮ್ಮ ಮೇಕಪ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.
ಕೂದಲಿನ ಸಮಸ್ಯೆಗಳು ಫ್ಯಾಷನ್‌ನಲ್ಲಿ ಬದಲಾಗುತ್ತಿರುವ ಟ್ರೆಂಡ್‌ಗಳ ಜೊತೆಗೆ, ಹೇರ್ ಟ್ರೆಂಡ್‌ಗಳ ಅಲೆಯೂ ಬದಲಾಗುತ್ತಲೇ ಇರುತ್ತದೆ. ಹೇರ್ ಜೆಲ್, ಹೇರ್ ಸೀರಮ್, ಶ್ಯಾಂಪೂ, ಕಂಡಿಷನರ್‌ಗಳು ಮತ್ತು ಹೇರ್ ಸ್ಪ್ರೇಗಳಂತಹ ಹೇರ್ ಉತ್ಪನ್ನಗಳು ಹಲವಾರು ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಇದು ನಿಮ್ಮ ಕೂದಲನ್ನು ನೀವು ಬಯಸಿದ ರೀತಿಯಲ್ಲಿ ಹೊಂದಿಸುತ್ತದೆ ಆದರೂ ದೀರ್ಘಾವಧಿಯಲ್ಲಿ ನಿಮ್ಮ ಕೂದಲನ್ನು ಖಂಡಿತವಾಗಿಯೂ ಭಾರೀ ಹಾನಿಗೊಳಿಸುತ್ತದೆ. ರಾಸಾಯನಿಕ ಆಧಾರಿತ ಕೂದಲಿನ ಉತ್ಪನ್ನಗಳ ವ್ಯಾಪಕ ಬಳಕೆಯು ತಲೆಹೊಟ್ಟು, ನೆತ್ತಿಯ ಕೆಂಪಾಗುವಿಕೆ, ಕೂದಲು ತೆಳುವಾಗುವುದು ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಕೂದಲಿನ ಬಣ್ಣವನ್ನು ದೀರ್ಘಕಾಲದವರೆಗೆ ಬಳಸುವುದರಿಂದ ನೆರೆ ಕೂದಲು ಸಹ ಬೇಗ ಶುರು ಅಗಬಹುದು.
ಕಣ್ಣಿನ ಸೋಂಕುಗಳು ಹೆಚ್ಚೆನೂ ಮೇಕಪ್ ಮಾಡದ ಮಹಿಳೆಯರೂ ಸಹ ಬಳಸುವ ಸೌಂದರ್ಯ ವರ್ಧಕ ಕಣ್ಣಿನ ಮೇಕಪ್. ಆದರೆ ನಿಮ್ಮ ಕಣ್ಣುಗಳು ಮತ್ತು ಅವುಗಳ ಸುತ್ತಲಿನ ಚರ್ಮವು ನಿಮ್ಮ ಮುಖದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ ಎಂದು ನೆನಪಿಟ್ಟುಕೊಳ್ಳಿ. ಕಣ್ಣಿನ ಮೇಕಪ್ ಪದರಗಳು ನಿಮ್ಮ ಕಣ್ಣುಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಕಣ್ಣಿನ ಮೇಕಪ್ ಸಾಮಾಗ್ರಿಯು ಮೂಲೆಗಳ ಮೂಲಕ ನಿಮ್ಮ ಕಣ್ಣುಗಳಿಗೆ ಜಾರುತ್ತದೆ, ಇದರಿಂದ ನಿಮಗೆ ಕಿರಿಕಿರಿ ಎನಿಸಬಹುದು. ಹೆಚ್ಚು ಮಸ್ಕರಾ ಮತ್ತು ಐಲೈನರ್‌ಗಳು ರೆಪ್ಪೆಗೂದಲುಗಳ ಬೆಳವಣಿಗೆಯನ್ನು ತಡೆಯುತ್ತದೆ, ಕಿರಿಕಿರಿ ಮತ್ತು ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಸ್ಥಳವಾಗಲೂಬಹದು