ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಹೀಗೆ ಮಾಡಿ.

ಜ್ವರ ಬಂದಾಗ ಹಗಲಿನಲ್ಲಿ ಹೆಚ್ಚೇನು ತೊಂದರೆ ಅನಿಸುವುದಿಲ್ಲ, ಆದರೆ ರಾತ್ರಿ ಹೊತ್ತಿನಲ್ಲಿ ಇದ್ಧಕ್ಕಿದ್ದಂತೆ ಹೆಚ್ಚಾಗುವುದು, ಏಕೆ? ರಾತ್ರಿ ಹೊತ್ತಿನಲ್ಲಿ ಜ್ವರ ಅಧಿಕವಾದಾಗ ನಮಗೆ ಹಗಲಿನಲ್ಲಿ ಈ ರೀತಿ ಇದ್ದರೆ ಆಸ್ಪತ್ರೆಗೆ ಹೋಗಿ ತೋರಿಸಿ ಬರುತ್ತಿದ್ದೆ, ಆದರೆ ಈ ರಾತ್ರಿಯಲ್ಲಿ ಯಾವ ಕ್ಲಿನಿಕ್‌ ಓಪನ್‌ ಇರುತ್ತದೆ, ಇನ್ನು ರೋಗ ಲಕ್ಷಣಗಳು ತುಂಬಾ ತೀವ್ರವಾಗಿದ್ದರೆ ಎಮರ್ಜೆನ್ಸಿಗೆ ಹೋಗಬೇಕು, ಏನು ಮಾಡುವುದು ಆಸ್ಪತ್ರೆಗೆ ಹೋಗುವುದೇ ಅಥವಾ ಬೆಳಗ್ಗೆವರೆಗೆ ಕಾಯುವುದೇ ಎಂಬ ಗೊಂದಲ ಉಂಟಾಗುವುದು 

ನಮ್ಮ ಕಾಯಿಲೆ ರಾತ್ರಿ ಹೊತ್ತಿನಲ್ಲಿ ಅಧಿಕವಾಗಲು ಕಾರಣವೇನು ಎಂದು ನೋಡೋಣ ಬನ್ನಿ: ರಾತ್ರಿಯಲ್ಲಿ ಜ್ವರ ಹೆಚ್ಚಾಗಲು ಹಾರ್ಮೋನ್‌ಗಳು ಕಾರಣ ನಮ್ಮ ದೇಹದಲ್ಲಿ ಕಾರ್ಟಿಸೆಲ್ ಎಂಬ ಹಾರ್ಂಇನ್ ಇದೆ, ಈ ಹಾರ್ಮೋನ್‌ ದೇಹದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುವುದು, ಚಯಪಚಯಕ್ರಿಯೆ ನಿಯಂತ್ರಿಸುವುದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು, ದೇಹ ಒತ್ತಡವನ್ನು ನಿಯಂತ್ರಿಸುವಂತೆ ಮಾಡುವುದು ಈ ಎಲ್ಲಾ ಕಾರ್ಯಗಳಿಗೆ ಸಹಕಾರಿಯಾಗಿದೆ

ಇದರ ಜೊತೆಗೆ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಈ ಹಾರ್ಮೋನ್ ಮಾಡುತ್ತದೆ, ಮತ್ತೊಂದು ಅರ್ಥದಲ್ಲಿ ಹೇಳುವುದಾದರೆ ಇದು ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ.

ಹಗಲು ಹೊತ್ತಿನಲ್ಲಿ ತುಂಬಾ ಕಾರ್ಟಿಸಲ್ ನಮ್ಮ ದೇಹದಲ್ಲಿರುವುದರಿಂದ ಇದು ರೋಗ ನಿರೋಧಕ ವ್ಯವಸ್ಥೆಯ ಚಟುವಟಿಕೆಯನ್ನು ಕುಗ್ಗಿಸುತ್ತದೆ. ಅದೇ ರಾತ್ರಿ ಹೊತ್ತಿನಲ್ಲಿ ಕಾರ್ಟಿಸಲ್‌ ರಕ್ತದಲ್ಲಿ ಕಡಿಮೆಯಾಗುವುದು, ಆಗ ಬಿಳಿ ರಕ್ತ ಕಣಗಳು ಸೋಂಕಾಣುಗಳನ್ನು ಗುರುತಿಸಿ ಅವುಗಳ ಲಕ್ಷಣಗಳು ಹೆಚ್ಚಾಗುವಂತೆ ಪ್ರೇರೇಪಿಸುತ್ತದೆ, ಆಗ ಶೀತ, ಚಳಿ-ಜ್ವರ ಈ ಎಲ್ಲಾ ಸಮಸ್ಯೆ ರಾತ್ರಿ ಹೊತ್ತಿನಲ್ಲಿ ಅಧಿಕವಾಗುವುದು.

ಹಗಲು ಹಾಗೂ ರಾತ್ರಿಯಲ್ಲಿ ದೇಹದ ಉಷ್ಣತೆಯಲ್ಲಿ ವ್ಯತ್ಯಾಸವಿರುತ್ತದೆ
ಹಗಲು ಹೊತ್ತಿನಲ್ಲಿ ನಾವು ಚಟುವಟಿಕೆಯಿಂದ ಇರುವುದರಿಂದ ಮೈ ಉಷ್ಣಾಂಶ ಅಧಿಕವಿರುತ್ತದೆ, ಅದೇ ರಾತ್ರಿ ಹೊತ್ತಿನಲ್ಲಿ ಮೈ ಉಷ್ಣತೆ ಕಡಿಮೆಯಾಗುವುದು, ಆಗ ಶೀತ, ಜ್ವರ ಈ ಬಗೆಯ ಸಮಸ್ಯೆಯಿದ್ದರೆ ಅದರ ಲಕ್ಷಣಗಳು ಅಧಿಕ ಗೋಚರಿಸುವುದ.

ರಾತ್ರಿ ಹೊತ್ತಿನಲ್ಲಿ ಜ್ವರ ಹೆಚ್ಚಾಗುವುದನ್ನು ತಡೆಗಟ್ಟಲು ಏನು ಮಾಡಬೇಕು?

ಸಾಕಷ್ಟು ನೀರು ಕುಡಿಯಿರಿ: ಬಿಸಿ ಬಿಸಿ ನೀರು ಕುಡಿಯಿರಿ, ಕಷಾಯ ಮಾಡಿ ಕುಡಿಯಿರಿ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ. ಹೀಗೆ ಮಾಡುವುದರಿಂದ ಬ್ಯಾಕ್ಟಿರಿಯಾ ಅಥವಾ ಸೋಂಕು ನಿಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಮೇಲೆ ದಾಳಿ ಮಾಡುವುದನ್ನು ತಡೆಗಟ್ಟಬಹುದು.

 ಜ್ವರ ಕಡಿಮೆಯಿದೆ ಅಂತ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ಔಷಧಗಳನ್ನು ತೆಗೆದುಕೊಳ್ಳಿ, ಜೊತೆಗೆ ಮಲಗುವ ಮುನ್ನ ಕಷಾಯ ಅಥವಾ ಬಿಸಿ ನೀರು ಕುಡಿದು ಮಲಗಿ.'


ಜ್ವರ ಬಂದಾಗ ಸೂಪ್‌, ಬಿಸಿ ಬಿಸಿಯಾದ ಕಷಾಯ ಅಥವಾ ಕಾಫಿ, ವಿಟಮಿನ್‌ ಸಿ ಅಧಿಕ ಸೇವಿಸಿ.


ರಾತ್ರಿ ಹೊತ್ತಿನಲ್ಲಿ ಚಳಿಜ್ವರ ಬಂದಾಗ ನಾವು ಚಳಿಯಾಗುತ್ತಿದೆ ಎಂದು ಮೈಗೆ ಸ್ವೆಟರ್‌, ದಪ್ಪ ಹೊದಿಕೆ ಹಾಕಿ ಕೂರುತ್ತೇವೆ. ಆದರೆ ಈ ರೀತಿ ಮಾಡುವುದು ತಪ್ಪು, ಇದರಿಂದ ಜ್ವರ ಮತ್ತಷ್ಟು ಹೆಚ್ಚಾಗುವುದು. ತುಂಬಾ ಜ್ವರವಿದ್ದಾಗ ಚಳಿ ಅನಿಸಿದರೂ ಸ್ವೆಟರ್ ಧರಿಸಬಾರದು. ತುಂಬು ತೋಳಿನ ಉಡುಪು ಧರಿಸಿ, ಹಣೆಗೆ ಬಟ್ಟೆ ಅಥವಾ ಹತ್ತಿಯನ್ನು ಒದ್ದೆ ಮಾಡಿ ಇಡಿ. ಇನ್ನು ಮೈಗೆ ಸ್ಪಾಂಜ್‌ ಬಾತ್‌ ಕೊಡುವುದರಿಂದ ಜ್ವರ ಕಡಿಮೆಯಾಗುವುದು.

ಮಕ್ಕಳಿಗೆ ಜ್ವರ ಬಂದಾಗ ಅವರ ಮೈಗೆ ಸ್ಪಾಂಜ್ ಬಾತ್‌ ಕೊಡುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗಿ ಮಗು ಸುಸ್ತಾಗುವುದನ್ನು ತಡೆಗಟ್ಟಬಹುದು.

ವೈರಲ್‌ ಜ್ವರ ಬಂದಾಗ ಬೇಗನೆ ಕಡಿಮೆಯಾಗಲ್ಲ
ವೈರಲ್‌ ಜ್ವರ ಬಂದಾಗ ಸಂಪೂರ್ಣ ಗುಣಮುಖವಾಗಲು 3-4 ದಿನ ಬೇಕಾಗುವುದು, ಆದ್ದರಿಂದ ಬಿಟ್ಟು-ಬಿಟ್ಟು ಜ್ವರ ಬಂದಾಗ ಆತಂಕ ಪಡಬೇಕಾಗಿಲ್ಲ, ವೈದ್ಯರು ನೀಡಿರುವ ಔಷಧವನ್ನು ತೆಗೆದುಕೊಳ್ಳಿ. 3 ದಿನದಲ್ಲಿ ಕಡಿಮೆಯಾಗದಿದ್ದರೆ ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು.

ಜ್ವರ ಬಂದಾಗ ಈ ಬಗೆಯ ಆಹಾರ ತೆಗೆದುಕೊಳ್ಳಿ
ಸೂಪ್ ತೆಗೆದುಕೊಳ್ಳಿ: ಸೂಪ್‌ ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿಯಾಗಿದೆ. ನೀವು ನಾನ್‌ವೆಜ್‌ ತಿನ್ನುವವರಾದರೆ ಚಿಕನ್ ಸೂಪ್ ಒಳ್ಳೆಯದು.
* ಮಟನ್ ಸೂಪ್: ಕಾಲಿನ ಸೂಪ್ ಜ್ವರದ ಸುಸ್ತು ಕಡಿಮೆ ಮಾಡಲು ಸಹಕಾರಿ
* ಎಳನೀರು ಕುಡಿಯಿರಿ
* ಹರ್ಬಲ್ ಟೀ ಮಾಡಿ ಕುಡಿಯಿರಿ
* ಶುಂಠಿ, ಜೇನು ಈ ಬಗೆಯ ಆಹಾರ ಸೇವಿಸಿ.
* ಮಸಾಲೆ ಪದಾರ್ಥಗಳ ಆಹಾರ ಒಳ್ಳೆಯದು
* ವಿಟಮಿನ್ ಸಿ ಇರುವ ಹಣ್ಣುಗಳನ್ನು ಸೇವಿಸಿ