ಪಿರಿಯಡ್ಸ್ ಹೆಸರು ಕೇಳ್ತಿದ್ದಂತೆ ಅನೇಕ ಮಹಿಳೆಯರು ಬೆಚ್ಚಿ ಬೀಳ್ತಾರೆ. ಪ್ರತಿ ತಿಂಗಳು ಮೂರು ದಿನ ನರಕಯಾತನೆ ಅನುಭವಿಸುವ ಅನೇಕ ಮಹಿಳೆಯರಿದ್ದಾರೆ. ರಜೆಯ ನೋವು ಹಾಗೂ ಬ್ಲೀಡಿಂಗ್ ಪ್ರತಿ ಮಹಿಳೆಯರಿಗೂ ಭಿನ್ನವಾಗಿರುತ್ತದೆ. ಅದರಲ್ಲೂ ಕೆಲ ಮಹಿಳೆಯರಿಗೆ ಪಿರಿಯಡ್ಸ್ ಮೂರ್ನಾಲ್ಕು ದಿನ ನೋವಿರುವುದು ಸಾಮಾನ್ಯ. ಆದ್ರೆ ಕೆಲವು ಮಹಿಳೆಯರಲ್ಲಿ, ಋತುಚಕ್ರ ಬರುವ ಒಂದು ವಾರ ಅಥವಾ ಎರಡು ವಾರ ಮೊದಲೇ ವಿಪರೀತ ನೋವು ಕಾಣಿಸಿಕೊಳ್ಳುತ್ತೆ. ಕಾಲೇಜು, ಕಚೇರಿಗೆ ರಜೆ ಹಾಕಬೇಕಾಗುತ್ತದೆ. ಏನೇ ಮಾಡಿದರೂ ನೋವು ಸಹಿಸಿಕೊಳ್ಳಲಾಗದೆ ಒದ್ದಾಡುವಂತಾಗುತ್ತದೆ.
ಇಂಥಾ ಸಮಯದಲ್ಲಿ ನೋವಿನಿಂದ ರಿಲೀಫ್ ಪಡೆಯಲು ಕೆಲವೊಬ್ಬರು ಪೈನ್ ಕಿಲ್ಲಸ್ ತೆಗೆದುಕೊಳ್ತಾರೆ. ಆದ್ರೆ ಈ ರೀತಿ ಮಾಡ್ಬೋದಾ ?
ಪಿರಿಯಡ್ಸ್ನ ಸಮಯದಲ್ಲಿ ನೋವು ನಿವಾರಕಗಳನ್ನು ಸೇವಿಸುವುದರಿಂದ ಯಾವುದೇ ತೊಂದರೆ ಇಲ್ಲ. ಈ ನೋವು ನಿವಾರಕಗಳನ್ನು ತೆಗೆದುಕೊಳ್ಳುವುದರಿಂದ ಗರ್ಭಾಶಯಕ್ಕೆ ಹಾನಿಯಾಗುವುದಿಲ್ಲ. ಪಿರಿಯಡ್ಸ್ ತುಂಬಾ ಕಷ್ಟದ ಸಮಯ. ಹೀಗಾಗಿ ಈ ಸಂದರ್ಭದಲ್ಲಿ ಆರಾಮವಾಗಿರುವುದು ಮುಖ್ಯ
ಪಿರಿಯಡ್ಸ್ನ ಸಮಯದಲ್ಲಿ ಕೋಪ, ಖಿನ್ನತೆಗೆ ಪರಿಣಾಮ :
ದೇಹವು ’ಪ್ರೊಸ್ಟಗ್ಲಾಂಡಿನ್ಸ್’ ಎಂಬ ಪದಾರ್ಥಗಳನ್ನು ಸ್ರವಿಸುವ ಕಾರಣ ಪಿರಿಯಡ್ಸ್ನ ನೋವು ಸಂಭವಿಸುತ್ತದೆ. ಇದು ನಿಮ್ಮ ಗರ್ಭಾಶಯವನ್ನು ಹಿಂಡುತ್ತದೆ ಮತ್ತು ಪಿರಿಯಡ್ಸ್ ರಕ್ತವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮಾಕ್ಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಹ ನಿರ್ದೇಶಕ ಡಾ.ಸುಮನ್ ಲಾಲ್ ಮಾತನಾಡಿ, ಪಿರಿಯಡ್ಸ್ನ ಸಮಯದಲ್ಲಿ ೧೨ ಗಂಟೆಗಳ ಅಂತರದಲ್ಲಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಹುದು ಎಂದಿದ್ದಾರೆ.
ಅತಿಯಾಗಿ ಮಾತ್ರೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ:
ಹೆಚ್ಚಿನ ಪಿರಿಯಡ್ಸ್ ನೋವು ನಿವಾರಕಗಳು ಗರ್ಭಾಶಯವನ್ನು ವಿಶ್ರಾಂತಿ ಮಾಡುವ ಮೂಲಕ ಕೆಲಸ ಮಾಡುತ್ತವೆ. ಆದರೂ, ಸಾಮಾನ್ಯ ನೋವು ನಿವಾರಕಗಳು (ಉದಾಹರಣೆಗೆ ಆಸ್ಪಿರಿನ್, ಡಿಕ್ಲೋಫೆನಾಕ್ ಮತ್ತು ಐಬುಪ್ರೊಫೇನ್) ಪ್ರೊಸ್ಟಗ್ಲಾಂಡಿನ್ ಚಟುವಟಿಕೆಯನ್ನು ಪರೋಕ್ಷವಾಗಿ ಕಡಿಮೆ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಸೆಳೆತದ ಕ್ರಿಯೆಯು ಕಡಿಮೆಯಾಗುತ್ತದೆ ಮತ್ತು ಪೀರಿಯಡ್ಸ್ ನೋವು ಅನುಭವಕ್ಕೆ ಬರುವುದಿಲ್ಲ ಎಂದು ಡಾ.ಸುಮನ್ ಹೇಳಿದರು.
ಪೀರಿಯೆಡ್ಸ್ ನೋವು ನಿವಾರಿಸಲು ಏನು ಮಾಡ್ಬೋದು ?
ಋತುಚಕ್ರದ ಸಮಯದಲ್ಲಿ ಕೆಲವೊಬ್ಬರು ಆಲಸ್ಯವನ್ನು ಅನುಭವಿಸಬಹುದು. ಶಾಖವನ್ನು ಬಳಸುವುದು ಮತ್ತು ಪುದೀನಾ ಚಹಾವನ್ನು ಕುಡಿಯುವುದರ ಜೊತೆಗೆ, ಕರಿದ ಆಹಾರಗಳು, ಹಾಲು ಮತ್ತು ಇತರ ಡೈರಿ ಉತ್ಪನ್ನಗಳು, ಕೊಬ್ಬಿನ ಆಹಾರಗಳು ಮತ್ತು ಕೆಫೀನ್ಗಳಂತಹ ನಿರ್ದಿಷ್ಟ ಆಹಾರಗಳನ್ನು ತಪ್ಪಿಸುವುದರಿಂದ ಮಲಬದ್ಧತೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಡಾ.ಸುಮನ್ . ಬೆನ್ನು ಅಥವಾ ಹೊಟ್ಟೆಗೆ ಶಾಖವನ್ನು ಅನ್ವಯಿಸುವುದು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.