ಮೊಡವೆ ಕಲೆ ನಿವಾರಿಸಲು ವೈದ್ಯರ ಈ ಟಿಪ್ಸ್ ಪಾಲಿಸಿ

ಮೊಡವೆ ಹಾಗೂ ಅದರ ಕಲೆಗಳು ಅದೆಷ್ಟೋ ಜನರ ಆತ್ಮವಿಶ್ವಾಸ ಕುಗ್ಗಿಸುತ್ತದೆ. ಮೊಡವೆ ಕಲೆಗಳನ್ನು ನಿವಾರಿಸಲು ವೈದ್ಯರು ಸೂಚಿಸುವ ಈ ವಿಧಾನಗಳನ್ನು ಅನುಸರಿಸಬಹುದಾಗಿದೆ.

1. ಕೀಳುವುದು ನಿಲ್ಲಿಸಿ: 

ಮೊಡವೆ ಬಂದಾಕ್ಷಣ ಅದನ್ನು ಕೀಳಲು ಮುಂದಾಗುತ್ತಾರೆ. ಆದ್ದರಿಂದ ಮೊಡವೆಯನ್ನು  ಕೀಳಲು ಅಥವಾ ಚಿವುಟಲು ಹೋಗಬೇಡಿ. . ಇದು ಹೆಚ್ಚೆಚ್ಚು ಮೊಡವೆಗಳಿಗೆ ಕಾರಣವಾಗುವುದು ಮಾತ್ರವಲ್ಲದೇ, ಕಲೆಗಳನ್ನ ಮಾಡಬಹುದು.

2. ಡಿಪಿಗ್ಮೆಂಟಿಂಗ್ ಕ್ರೀಮ್ಗಳನ್ನು ಬಳಸಿ: 

ಹೆಚ್ಚಿನವರು ಮೊಡವೆ ಒಣಗಿ ಕಲೆಯಾಗುವ ತನಕ ಯಾವುದೇ ಕಾಳಜಿಯನ್ನು ತೆಗೆದುಕೊಳ್ಳುವುದಿಲ್ಲ. ಇದರಿಂದ ಕಲೆ ನಿವಾರಣೆ ಮತ್ತಷ್ಟು ಜಟಿಲವಾಗಬಹುದು. ಆದ್ದರಿಂದ ಮುಖದಲ್ಲಿ ಆದ ಮೊಡವೆಗಳು ಕಡಿಮೆ ಆಗುವವರೆಗೆ ಕಾಯಬೇಡಿ. ಕಲೆ ಆದ ಪ್ರಾರಂಭದಿಂದಲೇ ಡಿಪಿಗ್ಮೆಂಟಿಂಗ್ ಕ್ರೀಮ್ಗಳನ್ನು ಬಳಸಿ. ಇದು ನಿಮ್ಮ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. 

3. ಸರಿಯಾದ ಪದಾರ್ಥಗಳನ್ನು ಆರಿಸಿ: 

ಕೋಜಿಕ್ ಆಸಿಡ್, ಗ್ಲೈಕೋಲಿಕ್ ಆಸಿಡ್, ಲ್ಯಾಕ್ಟಿಕ್ ಆಸಿಡ್ ಕೆಲವು ಪದಾರ್ಥಗಳು ಕಲೆಯನ್ನು ತ್ವರಿತವಾಗಿ ತೆಳುವಾಗಿಸಲು ಸಹಾಯ ಮಾಡುತ್ತದೆ.  ಆದ್ದರಿಂದ ಈ ಅಂಶಗಳು ಹೆಚ್ಚಿರುವ ಉತ್ಪನ್ನಗಳನ್ನು ಗಮನಿಸಿ ಖರೀದಿಸಿ, ಅವುಗಳನ್ನು ಕಲೆಗಳ ಮೇಲೆ ಬಳಸಿ. ಇದರಿಂದ ಕಲೆಗಳು ಬೇಗ ಮಸುಕಾಗುವುದು. 

4. ಕಲೆಗಳ ನಿವಾರಣೆಗೆ ಇರುವ ಉತ್ಪನ್ನಗಳಲ್ಲಿ ಹೂಡಿಕೆ ಮಾಡಿ: 

ಮೊಡವೆ ಕಲೆ ನಿವಾರಣೆಯಲ್ಲಿ ಬ್ರೈಟ್ನಿಂಗ್ ಫೇಸ್ ವಾಶ್ ಸಹ ಉತ್ತಮ ಪಾತ್ರವನ್ನು ವಹಿಸುತ್ತದೆ. ನಿಯಾಸಿನಾಮೈಡ್, ಗ್ಲೈಕೋಲಿಕ್ ಆಮ್ಲ, ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿರುವ ಫೇಸ್ ವಾಶ್ಗಳು ಕೆಮಿಕಲ್ ಎಫ್ಫೋಲಿಯೇಶನ್ಗೆ ಸಹಾಯ ಮಾಡುತ್ತದೆ. ಇದರಿಂದ ವೇಗವಾಗಿ ಕಲೆಗಳು ಹಗುರಾಗುತ್ತವೆ. ಆದ್ದರಿಂದ ಇಂತಹ ಉತ್ಪನ್ನಗಳನ್ನು ಖರೀದಿಸಿ.

ಮನೆಮದ್ದುಗಳು ಸಹಕಾರಿ:  

ಹಸಿ ಹಾಲು ಅಥವಾ ಆಲೂಗಡ್ಡೆ ರಸವನ್ನು ವಾರಕ್ಕೆ ಮೂರು ಬಾರಿ ಕಲೆಗಳ ಮೇಲೆ ಹಚ್ಚಿದರೆ, ಇದು ಖಂಡಿತವಾಗಿಯೂ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 


ಸನ್ಸ್ಕ್ರೀನ್ ಮರೆಯದಿರಿ: 

ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು ಸನ್ಸ್ಕ್ರೀನ್ ಬಳಸುವುದು ತುಂಬಾ ಮುಖ್ಯ. ಇದು ಕಲೆಗಳನ್ನು ಕಡಿಮೆ ಮಾಡಲಾರದು. ಆದ್ರೆ ಆ ಕಲೆಗಳು ಮತ್ತಷ್ಟು ಡಾರ್ಕ್ ಆಗುವುದನ್ನು ತಡೆಯುತ್ತವೆ. ಹಾಗೂ ಚರ್ಮವನ್ನು ರಕ್ಷಿಸಲು ಸನ್ಸ್ಕ್ರೀನ್ ಅನ್ನು ಬಳಸುವುದು ಮುಖ್ಯವಾಗಿದೆ.

ಚಿಕಿತ್ಸೆ ಮುಖ್ಯ: 

ಮೊಡವೆ ಕಲೆಗಳನ್ನು ಹಾಗೆಯೇ ಬಿಡುವ ಬದಲು ಅವುಗಳಿಗೆ ಚಿಕಿತ್ಸೆ ಕೊಡಿಸುವುದು ಸಹ ಮುಖ್ಯವಾಗಿದೆ. ಕಲೆಗಳನ್ನು ಕಡಿಮೆ ಮಾಡುವ ಹೈಡ್ರೋಕ್ವಿನೋನ್ನಂತಹ ಏಜೆಂಟ್ನೊಂದಿಗೆ ವಾರಕ್ಕೆ ಎರಡು ಬಾರಿ ಕೆಮಿಕಲ್ ಪೀಲಿಂಗ್ ಮಾಡಿಸುವುದು ಉತ್ತಮ.

ವೈದ್ಯರನ್ನು ಭೇಟಿ ಮಾಡಿ: 

ಮೊಡವೆ ಕಲೆಗಳನ್ನು ಕಡಿಮೆ ಮಾಡಲು ಸೂಕ್ತ ಚರ್ಮ ರೋಗ ತಜ್ಞರನ್ನು ಭೇಟಿ ಮಾಡಬಹುದು. ಅವರು ಕೆಮಿಕಲ್ ಪೀಲ್ಸ್, ಕಾರ್ಬನ್ ಲೇಸರ್ ಪೀಲ್ಸ್, ಫೋಟೋ ಫೇಶಿಯಲ್, ಹೈಡ್ರಾ ಫೇಶಿಯಲ್ ಸೇರಿದಂತೆ ಹಲವಾರು ಗುರುತುಗಳನ್ನು ತೊಡೆದುಹಾಕಲು ಸಹಾಯ ಮಾಡುವ ವಿಧಾನಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಬಹುದು. ಇವುಗಳ ಸಹಾಯದಿಂದ ನೀವು ಮೊಡವೆ ಕಲೆಗಳಿಂದ ಮುಕ್ತ ಹೊಂದಬಹುದು.