ಮಕ್ಕಳಿಗೆ ಹೆಚ್ಚು ವರ್ಷ ಎದೆಹಾಲು ನೀಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

 

ಅನೇಕ ಮಹಿಳೆಯರು  ಮಗುವಿಗೆ ಎದೆಹಾಲು ಬಿಡಿಸಲು ತುಂಬಾ ಪ್ರಯತ್ನಸುತ್ತಾರೆ. ಕೆಲವೊಮ್ಮೆ  ವೈದ್ಯರ ಸಲಹೆಗಿಂತ ಮನೆಯವರ, ಅವರಿವರ ಮಾತು ಕೇಳುವುದು ಹೆಚ್ಚು. ಆದರೆ ವೈದ್ಯರು ಮಗುವಿಗೆ ಮೂರ್ನಾಲ್ಕು ವರ್ಷದವರೆಗೂ ನೀಡಬಹುದು ಎನ್ನುತ್ತಾರೆ. ಎದೆಹಾಲು ಮುಂದುವರಿಸುವುದರಿಂದ ಸಾಕಷ್ಟು  ಪ್ರಯೋಜನಗಳಿವೆ.

1. ಎದೆಹಾಲು ಮುಂದುವರಿಸುವುದರ  ಪ್ರಯೋಜನಗಳು :

ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಸ್ತನ್ಯಪಾನ ಮುಂದುವರಿಸುವುದರಿಂದ ಮಗುವಿಗೆ ಮತ್ತು ತಾಯಿಗೂ ಭಾವನಾತ್ಮಕ ಹಾಗೂ ಆರೋಗ್ಯಕರ ಪ್ರಯೋಜನಗಳೂ ಇದೆ. ಅದೇನೆಂದರೆ, 

* ಎಷ್ಟು ವರ್ಷದವರೆಗೂ ಹಾಲುಣಿಸುತ್ತೀರೋ ಅಷ್ಟು ವರ್ಷದವರೆಗೆ ಮಗುವಿಗೆ ರೋಗನಿರೋಧಕ ಶಕ್ತಿಯು ತಾಯಿಯ ಎದೆಹಾಲಿನಿಂದಲೇ ದೊರೆಯುತ್ತದೆ. 

* ಎರಡು ವರ್ಷದವರೆಗೂ ಹಾಲು ನೀಡುವುದರಿಂದ ಮಗುವಿನ ದೇಹಕ್ಕೆ ಬೇಕಾಗುವ ಮೂವತ್ತೈದರಿಂದ ನಲವತ್ತು ಶೇಕಡಾ ಕ್ಯಾಲೋರಿ ಮಗುವಿಗೆ ತಾಯಿಯ ಎದೆಹಾಲಿನಿಂದಲೇ ಸಿಗುತ್ತದೆ. ಹೆಚ್ಚು ಕೊಬ್ಬಿನ ಅಂಶವು ವಿಟಮಿನ್ ಎ ಮತ್ತು ವಿಟಮಿನ್ ಡಿನಂತಹ ಕೊಬ್ಬು ಕರಗುವ ವಿಟಮಿನ್ಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಮತ್ತು ಫಾಸ್ಪರಸ್ನ ಪ್ರಮಾಣವೂ ಕೂಡಾ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.

 * ಹೆಚ್ಚು ಸಮಯ ಎದೆಹಾಲು ನೀಡುವುದರಿಂದ, ಇತರ ಆಹಾರಗಳ ಮೇಲಿನ ಕುತೂಹಲವೂ ಹೆಚ್ಚುತ್ತದೆ, ಎದೆಹಾಲನ್ನು ಹೊರತುಪಡಿಸಿ ಇತರ ಆಹಾರವನ್ನೂ ಗಮನಿಸಿ ಮಗು ಸೇವಿಸಲು ಪ್ರಯತ್ನಿಸುವುದು.

2. ರೋಗ ನಿರೋಧಕಶಕ್ತಿ 

* ಅನಾರೋಗ್ಯದ ಸಮಯದಲ್ಲಿ ಹೆಚ್ಚಿನ ಮಗುವು ಆಹಾರ ಸೇವಿಸಲು ನಿರಾಕರಿಸುತ್ತಾರೆ. ಆಗ ಮಗುವಿಗೆ ಎದೆಹಾಲು ಕೂಡಿಸಿದರೆ  ರೋಗ ನಿರೋಧಕಗಳು ಶಕ್ತಿ, ಹಾಗೂ ಮಗು ಬೇಗನೆ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತದೆ.

* ಸ್ತನ್ಯಪಾನವು "ಮೊದಲ 1000 ದಿನಗಳ ಪೋಷಣೆ" ಯ ಪ್ರಮುಖ ಅಂಶವಾಗಿದೆ, ಇದು ಮಗುವಿನ ಬೆಳವಣಿಗೆಯನ್ನು ಸುಧಾರಿಸಲು ಗರ್ಭಾವಸ್ಥೆಯಿಂದ ಪ್ರಾರಂಭಿಸಿ ಮಗುವಿನ ಜನನವಾದ ನಂತರ ಎರಡು ವರ್ಷಗಳವರೆಗೆ ಎದೆಹಾಲು ರೋಗನಿರೋಧಕ ಅಂಶಗಳು ಮತ್ತು ಅನೇಕ ಪೋಷಕಾಂಶಗಳ ಮೂಲವಾಗಿರುತ್ತದೆ. 

* ವರ್ಕಿಂಗ್ನಲ್ಲಿರುವ ತಾಯಂದಿರು ಎದೆಹಾಲು ಬೇಗನೆ ಬಿಡಿಸುತ್ತಾರೆ. ಆದರೆ ಸ್ತನ್ಯಪಾನವು ಮಗುವಿನೊಂದಿಗೆ ಮತ್ತೆ ಒಂದಾಗಲು ಪರಿಣಾಮಕಾರಿ ವಿಧಾನ. ಕೆಲಸಕ್ಕಾಗಿ ಕೆಲಸಮಯ ದೂರವಿರಬೇಕಾಗಿ ಬಂದರೆ, ಎದೆಹಾಲು ಕುಡಿಸುವ ಮೂಲಕ ಮತ್ತೆ ಮಗುವಿನೊಂದಿಗೆ ಅದೇ ಬಂಧವನ್ನು ಮುಂದುವರಿಸಬಹುದು.

3. ಮಾರಣಾಂತಿಕ ಕಾಯಿಲೆಯಿಂದ ಮುಕ್ತಿ 

* ಎದೆಹಾಲನ್ನು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದವರೆಗೂ ನೀಡುವುದರಿಂದ ಬಾಲ್ಯದಲ್ಲಿ ಬರುವ ಕ್ಯಾನ್ಸರ್, ಟೈಪ್ 1, ಟೈಪ್ 2 ಮಧುಮೇಹದ ಅಪಾಯ ತುಂಬಾ ಕಡಿಮೆಯಿರುತ್ತದೆ. 

* ಹೆಚ್ಚು ವರ್ಷದವರೆಗೂ ಮಗುವಿಗೆ ಎದೆಹಾಲು ಕುಡಿಸುವುದರಿಂದ ತಾಯಂದಿರಿಗೂ ಆರೋಗ್ಯ ಪ್ರಯೊಜನಗಳಿವೆ. ಅದೇನೆಂದರೆ ಮೆನೋಪಾಸ್ ಮುಂಚಿತವಾಗಿ ಬರುವ ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್ನ ಅಪಾಯದ ವಿರುದ್ಧ ರಕ್ಷಣೆ ನೀಡುತ್ತದೆ. ಟೈಪ್ 2 ಮಧುಮೇಹ ಹಾಗೂ ಹೃದಯ ರಕ್ತನಾಳದ ಕಾಯಿಲೆಯ ಅಪಾಯವೂ ಕಡಿಮೆ.

4. ದೀರ್ಘಾವಧಿಯ ಸ್ಯನ್ಯಪಾನ್ಯದಿಂದ ಸಮಸ್ಯೆಯಾಗುವುದೇ. 

ಮಗುವಿಗೆ ಹೆಚ್ಚು ವರ್ಷದವರೆಗೂ ಸ್ತನ್ಯಪಾನದಿಂದ ಸಮಸ್ಯೆ ಏನಿರದಿದ್ದರೂ ಹಲ್ಲಿನ ಕ್ಷಯದ ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣ ಬಾಯಿಯ ಶುಚಿತ್ವವನ್ನು ಕಾಪಾಡಿಕೊಳ್ಳದಿರುವುದು. ಮತ್ತು ರಾತ್ರಿ ಬಾಟಲಿಯಲ್ಲಿ ಹಾಲನ್ನು ನೀಡಬೇಡಿ. ಪ್ರತಿ ಊಟದ ನಂತರ ಬಾಯನ್ನು ಸ್ವಚ್ಛಗೊಳಿಸಿ, ನೀರು ಕುಡಿಸಿ.  ಹಾಗೂ ಟೂತ್ಪೇಸ್ಟ್ನಿಂದ ಮಗುವಿನ ಹಲ್ಲುಗಳನ್ನು ಸಾಪ್ಟ್ ಆಗಿ ಉಜ್ಜಿ. ಯಾಕೆಂದರೆ ಮಗುವಿನ ವಸಡುಗಳು ಸೂಕ್ಷ್ಮವಾಗಿರುತ್ತದೆ. ಮಗುವಿಗೆ ಎದೆಹಾಲಿನೊಂದಿಗೆ ಕಬ್ಬಿಣಾಂಶಭರಿತ ಆಹಾರವನ್ನೂ ನೀಡಿ.  ಹಾಗೂ ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಷದವರೆಗೂ ಎದೆಹಾಲು ನೀಡಬಹುದು. ಮಗು ತಾನಾಗಿ ಎದೆಹಾಲು ಬಿಡುವವರೆಗೂ ಎದೆಹಾಲು ನೀಡುವುದು ಉತ್ತಮ.