ರಾತ್ರಿ ಕಾಡುವ ಕೆಮ್ಮಿಗೆ ಸರಳ ಮನೆ ಮದ್ದು

ರಾತ್ರಿ ಹಾಸಿಗೆ ಮೇಲೆ ಮಲಗ್ತಿದ್ದಂತೆ  ಕೆಮ್ಮು ಶುರುವಾಗುತ್ತದೆ. ಇಡೀ ರಾತ್ರಿ ನಿದ್ರೆಯಿಲ್ಲದೆ ಒದ್ದಾಡ್ಬೇಕು. ಸಾಕಪ್ಪ ಸಾಕು ಎನ್ನುವಷ್ಟು ಹಿಂಸೆ ನೀಡುತ್ತದೆ.  ಮಳೆಗಾಲದಲ್ಲಿ ಒಣ ಕೆಮ್ಮು ಕೂಡ ಹೆಚ್ಚಾಗಿ ಕಾಡುತ್ತದೆ. ಹಗಲಿನಲ್ಲಿ ಕಡಿಮೆಯಿರುವ ಈ ಕೆಮ್ಮು ರಾತ್ರಿಯಾಗ್ತಿದ್ದಂತೆ ಹೆಚ್ಚಾಗುತ್ತದೆ. ರಾತ್ರಿ  ಕಿರಿಕಿರಿ ನೀಡುವ ಕೆಮ್ಮನ್ನು ಕೆಲವು ಸುಲಭ ಮನೆ ಮದ್ದಿನ ಮೂಲಕ ಕಡಿಮೆ ಮಾಡಬಹುದು. 

ನಾವು ಹಾಸಿಗೆ ಮೇಲೆ ಮಲಗಿದಾಗ, ನಮ್ಮ ಬೆನ್ನಿನ ಭಾಗ ಹಾಸಿಗೆ ಮೇಲೆ ಇದ್ದಾಗ  ಗಂಟಲಿನ ಹಿಂಭಾಗದಲ್ಲಿ ಲೋಳೆಯು ಸಂಗ್ರಹವಾಗುತ್ತದೆ ಇದು ಕೆಮ್ಮಿಗೆ ಕಾರಣವಾಗುತ್ತದೆ. ಹೀಗೆ  ರಾತ್ರಿ ಕಾಡುವ ಕೆಮ್ಮಿಗೆ ಮನೆ ಮದ್ದುಇದೆ.

ಶುಂಠಿ  ಮತ್ತು ಜೇನುತುಪ್ಪ

ಶುಂಠಿ ಮತ್ತು ಜೇನುತುಪ್ಪವು ಕೆಮ್ಮಿಗೆ ವರದಾನವಾಗಿದೆ.  ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇದನ್ನು 2-3 ದಿನಗಳವರೆಗೆ ಸೇವಿಸುವುದರಿಂದ ನಿಮ್ಮ ಕೆಮ್ಮು ದೂರವಾಗುತ್ತದೆ.  

ಕಪ್ಪು ಮೆಣಸು ಮತ್ತು ಜೇನುತುಪ್ಪ :  

ಒಣ ಕೆಮ್ಮಿಗೆ ಕರಿಮೆಣಸು ಮತ್ತು ಜೇನುತುಪ್ಪ ಉತ್ತಮ ಔಷಧಿಯಾಗಿದೆ. ಇದು ಹೆಚ್ಚು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಸಹ ಬಲಪಡಿಸುತ್ತದೆ.  

ಜೇನುತುಪ್ಪದೊಂದಿಗೆ ಚಹಾವನ್ನು ಕುಡಿಯಿರಿ :

 ಜೇನುತುಪ್ಪದೊಂದಿಗೆ ಬಿಸಿ ಟೀ ಲೋಳೆಯನ್ನು ಸಡಿಲಗೊಳಿಸುತ್ತದೆ. ಗಂಟಲಿನ ಸಮಸ್ಯೆ ಕಡಿಮೆ ಮಾಡುವ ಜೊತೆಗೆ ಗಂಟಲ ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗಿಡಮೂಲಿಕೆ ಚಹಾದಂತಹ ಕೆಫೀನ್ ಮುಕ್ತ ಚಹಾಕ್ಕೆ ಎರಡು ಟೀ ಚಮಚ ಜೇನುತುಪ್ಪವನ್ನು ಸೇರಿಸಿ. ಮಲಗುವ ಮುನ್ನ ಈ ಚಹಾವನ್ನು ಕುಡಿಯಿರಿ.  

ಬೆಚ್ಚಗಿನ ಉಪ್ಪು ನೀರಿನಿಂದ ಗಾರ್ಗ್ಲ್

ಬೆಚ್ಚಗಿನ ಉಪ್ಪು ನೀರನ್ನು ಗಂಟಲಿಗೆ ಹಾಕಿ ಬಾಯಿ ಮುಕ್ಕಳಿಸಿ. ಇದ್ರಿಂದ ಗಂಟಲು ನೋವು ಕಡಿಮೆಯಾಗುತ್ತದೆ.  

ನೀಲಗಿರಿ ಎಣ್ಣೆ : 

ಕೆಮ್ಮಿನ ಸಮಸ್ಯೆ ಇದ್ದರೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಮೂಗಿಗೆ ಹಾಕಿ. ಇದು ಅವನ ಮೂಗು ತೆರೆಯುತ್ತದೆ ಮತ್ತು ಉಸಿರುಕಟ್ಟಿಕೊಳ್ಳುವ ಮೂಗಿನಿಂದ ತ್ವರಿತ ಪರಿಹಾರ ಸಿಗುತ್ತದೆ.  


ಧೂಮಪಾನ ತ್ಯಜಿಸಿ :
 

ಧೂಮಪಾನವು ತೀವ್ರವಾದ ಕೆಮ್ಮನ್ನು ಉಂಟುಮಾಡಬಹುದು. ಹಾಗಾಗಿ ಧೂಮಪಾನ ತ್ಯಜಿಸಿದ್ರೆ  ಇದು ಕೆಮ್ಮನ್ನು ಕ್ರಮೇಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಜಿರಳೆ ಓಡಿಸಿ : 

ಜಿರಳೆಗಳು ಅಲರ್ಜಿ ಮತ್ತು ಆಸ್ತಮಾ ದಾಳಿಗೆ ಸಾಮಾನ್ಯ ಕಾರಣವಾಗಿದೆ. ಕೆಮ್ಮು ಮತ್ತು ಇತರ ಅಲರ್ಜಿ ಲಕ್ಷಣ ಆಗಾಗ ಕಾಣಿಸಿಕೊಂಡ್ರೆ ಜಿರಳೆಯನ್ನು ಓಡಿಸಿ. ಮನೆಗೆ ಜಿರಳೆ ಬರದಂತೆ ನೋಡಿಕೊಳ್ಳಿ.

ಸಲೈನ್ ನಾಸಲ್ ಸ್ಪ್ರೇ ಬಳಸಿ : ಸಲೈನ್ ನಾಸಲ್ ಸ್ಪ್ರೇ ಅನ್ನು ಬಳಸುವುದರಿಂದ ಶುಷ್ಕತೆ, ತೆಳ್ಳಗಿನ ಲೋಳೆಯು ಕಡಿಮೆಯಾಗುತ್ತದೆ.  ಇದು ಮೂಗಿನ ಕಿರಿಕಿರಿ ಮತ್ತು ಅಲರ್ಜಿಯನ್ನು ನಿವಾರಿಸುತ್ತದೆ.