ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ:
ಪೇರಲೆ ಹಣ್ಣು ಡಯಾಬಿಟಿಸ್ ಇರುವವರಿಗೆ ಬಹಳ ಒಳ್ಳೆಯದು. ಪೇರಲೆ ಎಲೆಗಳ ಸಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ದೀರ್ಘಾವಧಿಯ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ಇನ್ಸುಲಿನ್ ಪ್ರತಿರೋಧಕವಾಗಿದೆ. ಊಟದ ಮೊದಲು ಅಥವಾ ಊಟದ ನಂತರ ಇದರ ಎಲೆಯ ಚಹಾ ಸೇವಿಸಿದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ.
ರೋಗ ನಿರೋಧಕ ಶಕ್ತಿ:
ಪೇರಲೆಯಲ್ಲಿ ವಿಟಮಿನ್ ಸಿ ಅಂಶವು ಶ್ರೀಮಂತವಾಗಿದೆ. ಕಿತ್ತಳೆಯಲ್ಲಿರುವ ವಿಟಮಿನ್ ಸಿ ಗಿಂತ 4 ಪಟ್ಟು ಹೆಚ್ಚು ಪೆರಲೆಯಲ್ಲಿ ಕಾಣಬಹುದು. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದಲ್ಲದೆ ಸಾಮಾನ್ಯ ಸೋಂಕುಗಳು ಮತ್ತು ರೋಗ ಕಾರಕದಿಂದ ರಕ್ಷಿಸುತ್ತದೆ. ಅಲ್ಲದೆ ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ.
ಕ್ಯಾನ್ಸರ್:
ಲೈಕೋಪೀನ್, ಕ್ವೆರ್ಸೆಟಿನ್, ವಿಟಮಿನ್ ಸಿ ಮತ್ತು ಇತರೆ ಪಾಲಿಫಿನಾಲ್ಗಳು ಪ್ರಬಲವಾದ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ, ಇದು ದೇಹದಲ್ಲಿ ಉತ್ಪತ್ತಿಯಾಗುವ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸುತ್ತದೆ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಪೇರಲೆ ಹಣ್ಣು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದಲ್ಲದೆ ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನೂ ತಡೆಯುತ್ತದೆ. ಏಕೆಂದರೆ ಇದರಲ್ಲಿ ಲೈಕೋಪೀನ್ನಲ್ಲಿ ಸಮೃದ್ಧವಾಗಿದೆ.
ಮಧುಮೇಹ:
ಪೇರಲೆ ಹಣ್ಣಿನಲ್ಲಿ ಫೈಬರ್ ಅಂಶ ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಕಾರಣ ಮಧುಮೇಹದ ಬೆಳವಣಿಗೆಯನ್ನು ತಡೆಯುತ್ತದೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ಸಕ್ಕರೆ ಮಟ್ಟದಲ್ಲಿ ಹಠಾತ್ ಸ್ಪೆಂಕ್ ಅನ್ನು ತಡೆಯುತ್ತದೆ. ಫೈಬರ್ ಅಂಶವು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಹೃದಯ:
ಆರೋಗ್ಯಕರವಾದ ಪೇರಲೆ ಹಣ್ಣು ದೇಹದ ಸೋಡಿಯಂ ಮತ್ತು ಪೊಟ್ಯಾಸಿಯಮ್ ಸಮತೋಲನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹೃದಯದ ಬೆಳವಣಿಗೆಗೆ ಕೊಡುಗೆ ನೀಡುವ ಟ್ರೆಂಗ್ಲಿಸರೈಡ್ಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹಾಗೂ ಉತ್ತಮ ಕೊಲೆಸ್ಟಾçಲ್ ಮಟ್ಟವನ್ನು ಸುಧಾರಿಸುತ್ತದೆ.
ಮಲಬದ್ಧತೆ:
ಇತರೆ ಹಣ್ಣುಗಳಿಗೆ ಹೋಲಿಸಿದರೆ ಪೆರಲೆಯಲ್ಲಿ ಫೈಬರ್ನ ಶ್ರೀಮಂತ ಮೂಲವಾಗಿದೆ. ಕೇವಲ ೧ ಪೇರಲೆಯು ಶೇ.೧೨ರಷ್ಟು ಫೈಬರ್ ಅಂಶ ದೇಹಕ್ಕೆ ನೀಡುತ್ತದೆ. ಇದು ಜೀರ್ಣಕಾರಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಪೇರಲೆ ಬೀಜಗಳನ್ನು ಸಂಪೂರ್ಣವಾಗಿ ಸೇವಿಸಿದರೆ ಅಥವಾ ಅಗಿಯುತ್ತಿದ್ದರೆ, ಇದು ಅತ್ಯುತ್ತಮ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯಕರ ಕರುಳಿನ ಚಲನೆಯನ್ನು ರೂಪಿಸಲು ಸಹಾಯ ಮಾಡುತ್ತದೆ.
ಕಣ್ಣಿನ ದೃಷ್ಟಿ:
ಪೇರಲೆಯಲ್ಲಿ ವಿಟಮಿನ್ ಎ ಇದ್ದು, ಕಣ್ಣಿನ ದೃಷ್ಟಿ ಆರೋಗ್ಯಕ್ಕೆ ಬೂಸ್ಟರ್ ಎಂದು ಪ್ರಸಿದ್ಧವಾಗಿದೆ. ಇದು ದೃಷ್ಟಿ ಕ್ಷೀಣಿಸುವುದನ್ನು ತಡೆಯುವುದಲ್ಲದೆ, ದೃಷ್ಟಿಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲದೆ ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ನೋಟವನ್ನು ನಿಧಾನಗೊಳಿಸುತ್ತದೆ. ಪೇರಲೆಯು ಕ್ಯಾರೆಟ್ನಂತೆ ವಿಟಮಿನ್ ಎ ನಲ್ಲಿ ಸಮೃದ್ಧವಾಗಿಲ್ಲದಿದ್ದರೂ, ಪೋಷಕಾಂಶದ ಉತ್ತಮ ಮೂಲವಾಗಿದೆ.
ಗರ್ಭಿಣಿಯರಿಗೆ ಪ್ರಯೋಜನಕಾರಿ:
ಫೋಲಿಕ್ ಆಮ್ಲ ಅಥವಾ ವಿಟಮಿನ್ ಬಿ-೯ ಅಂಶವು ಪೇರಲೆಯಲ್ಲಿ ಹೇರಳವಾಗಿದೆ. ಗರ್ಭಿಣಿಯರು ಇದನ್ನಯ ಸೇವಿಸುವುದರಿಂದ ಹೊಟ್ಟೆಯಲ್ಲಿನ ಮಗುವಿನ ನರಮಂಡಲ ಅಭಿವೃದ್ಧಿಪಡಿಸಲು ಮತ್ತು ನವಜಾತ ಶಿಶುವನ್ನು ನರವೈಜ್ಞಾನಿಕ ಅಸ್ವಸ್ಥತೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಪೇರಲೆ ಎಲೆಗಳು ಪ್ರಬಲವಾದ ಉರಿಯೂತದ ಕ್ರಿಯೆಯನ್ನು ಹೊಂದಿವೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ಮತ್ತು ಸೂಕ್ಷ್ಮಜೀವಿಗಳನ್ನು ಕೊಲ್ಲುವ ಪ್ರಬಲವಾದ ಬ್ಯಾಕ್ಟೀರಿಯಾದ ಸಾಮರ್ಥ್ಯ ಹೊಂದಿವೆ. ಹೀಗಾಗಿ, ಪೇರಲೆ ಎಲೆಗಳನ್ನು ಸೇವಿಸುವುದರಿಂದ ಹಲ್ಲುನೋವಿಗೆ ಅದ್ಭುತವಾದ ಮನೆಮದ್ದಾಗಿದೆ. ಪೇರಲೆ ಎಲೆಗಳ ರಸವು ಹಲ್ಲುನೋವು, ಊದಿಕೊಂಡ ಒಸಡುಗಳು ಮತ್ತು ಬಾಯಿಯ ಹುಣ್ಣುಗಳನ್ನು ಸಹ ಗುಣಪಡಿಸುತ್ತದೆ ಎಂದು ತಿಳಿದುಬಂದಿದೆ.
ತೂಕ ಕಡಿಮೆ:
ತೂಕ ಇಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದೀರಾ? ಹಾಗಾದರೆ ನಿಮ್ಮ ಡಯೆಟ್ ಚಾರ್ಟ್ನಲ್ಲಿ ಪೇರಲೆ ಹಣ್ಣನ್ನು ಸೇರಿಸಿಕೊಳ್ಳಿ. ಪ್ರೋಟೀನ್, ವಿಟಮಿನ್ ಮತ್ತು ಫೈಬರ್ ಒದಗಿಸುವುದರ ಜೊತೆಗೆ ಚಯಾಪಚಯವನ್ನು ನಿಯಂತ್ರಿಸುವ ಮೂಲಕ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಶೀತ ಮತ್ತು ಕೆಮ್ಮು:
ಪೇರಲೆ ಹಣ್ಣಲ್ಲಿ ವಿಟಮಿನ್-ಸಿ ಮತ್ತು ಕಬ್ಬಿಣ ಅಂಶವು ಅತ್ಯಧಿಕ ಪ್ರಮಾಣದಲ್ಲಿದೆ. ಇದು ಶೀತ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಹಸಿ ಮತ್ತು ಬಲಿಯದ ಪೇರಲೆಯ ರಸ ಅಥವಾ ಎಲೆಗಳ ಕಷಾಯವು ಕೆಮ್ಮು ಮತ್ತು ಶೀತವನ್ನು ನಿವಾರಿಸಲು ಬಹಳ ಸಹಾಯಕವಾಗಿದೆ. ಏಕೆಂದರೆ ಇದು ಲೋಳೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಉಸಿರಾಟ, ಗಂಟಲು ಮತ್ತು ಶ್ವಾಸಕೋಶಗಳನ್ನು ಸೋಂಕುರಹಿತಗೊಳಿಸುತ್ತದೆ.
ವಯಸ್ಸಾಗುವಿಕೆ:
ಪೇರಲೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಕ್ಯಾರೋಟಿನ್ ಮತ್ತು ಲೈಕೋಪೀನ್ ನಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಚರ್ಮವನ್ನು ಸುಕ್ಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಪೇರಲೆ ಸೇವಿಸುವುದರಿಂದ ಸುಕ್ಕುಗಳನ್ನು, ರೇಖೆಗಳನ್ನು ದೂರ ಇಡುತ್ತದೆ.