ಪುರುಷರ ತಲೆ ಕೂದಲು ಉದುರುವುದನ್ನು ನಿಯಂತ್ರಿಸಲು ಈ ಟಿಪ್ಸ್ ಪಾಲಿಸಿ

ಕೂದಲು ಉದುರುವಿಕೆ ಈಗೀನ ಕಾಲದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಇದು ಕೇವಲ ಉದ್ದ ಕೂದಲಿನ ಮಹಿಳೆಯರಿಗೆ ಸೀಮಿತವಾಗಿಲ್ಲ. ಇದಕ್ಕೆ ಕಾರಣ ದೇಹಕ್ಕೆ ಆರೋಗ್ಯಕರ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸದಿದ್ದರೆ, ಅತಿಯಾದ ಯೋಚನೆ, ನಿದ್ರಾಹೀನತೆ, ಟೆನ್ಶನ್, .ಕಲುಷಿತ ನೀರು, ಧೂಳು, ಹಾರ್ಮೋನ್ಗಳ ವ್ಯತ್ಯಾಸ, ಪೋಷಕಾಂಶಗಳ ಕೊರತೆ ಹೀಗೆ ವಿವಿಧ ಕಾರಣಗಳಿಂದ ಕೂದಲು ಉದುರುತ್ತದೆ. 

ಈ ಆರು ಟಿಪ್ಸ್  ಉಪಯೋಗಿಸಿದರೆ ನಿಮ್ಮ ತಲೆ ಕುದೂಲು ಉದರಿ ಹೋಗುದಿಲ್ಲ.

1.ಮಿನೊಕ್ಸಿಡಿಲ್ :

ರೋಗೈನ್ ಕಂಪನಿಯ ಮಿನೊಕ್ಸಿಡಿಲ್ ಎಂಬ ಔಷಧ ತುಂಬಾನೇ ಉಪಯುಕ್ತವಾಗಿದೆ. ಇದು ನೀವು ಕಳೆದುಕೊಂಡಿರುವ ಕೂದಲನ್ನು ಪುನಃ  ಸ್ಥಾಪಿಸುವುದಿಲ್ಲ, ಆದರೆ ಉಳಿದಿರುವ ಕೂದಲನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಕಾರ್ಯವನ್ನು ಇದು ಮಾಡುತ್ತದೆ. ಈ ಔಷಧವು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಕಿರುಚೀಲಗಳಿಗೆ ಹೆಚ್ಚು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ನೀಡಿ,  ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ.

2.ನ್ಯೂಟ್ರಾಫೊಲ್ :

ನ್ಯೂಟ್ರಾಫೊಲ್ ಅನ್ನೋದು ಕೂದಲು ಬೆಳೆಯುವ ಸಪ್ಲಿಮೆಂಟ್ ಆಗಿದೆ. ಇದು ವಿಟಮಿನ್ಗಳು ಮತ್ತು ಗಿಡಮೂಲಿಕೆಗಳನ್ನು ಒಳಗೊಂಡಿರುತ್ತದೆ, ಇದು ಟೆಸ್ಟೋಸ್ಟೆರಾನ್ನ ಉಪ ಉತ್ಪನ್ನವಾದ ಡೈಹೈಡ್ರೊಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಕಡಿಮೆ ಮಾಡುತ್ತದೆ.

3. ವಿಟಮಿನ್: 

ಆಂಟಿ ಆಕ್ಸಿಡೆಂಟ್ ಗುಣಗಳುಳ್ಳ ವಿಟಮಿನ್-ಎ ಪದಾರ್ಥಗಳು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಸಿಹಿ ಆಲೂಗೆಡ್ಡೆ, ಕ್ಯಾರೆಟ್, ಕರಿಬೇವಿನ ಸೊಪ್ಪು, ಒಣಗಿದ ಏಪ್ರಿಕಾಟ್, ಸ್ವೀಟ್ ಕೆಂಪು ಮೆಣಸು, ಟ್ಯೂನಾ ಮೀನು,ಮಾವು ವಿಟಮಿನ್-ಎ ಅಂಶವನ್ನು ಒಳಗೊಂಡಿರುತ್ತದೆ. ಇದು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ನಷ್ಟವನ್ನು ತಡೆಯುತ್ತದೆ. 

4. ಕಾರ್ಟಿಕೊಸ್ಟೆರಾಯ್ಡ್: 

ಸ್ವಯಂ ನಿರೋಧಕ ಅಸ್ವಸ್ಥತೆಗಳಂತಹ ವೈದ್ಯಕೀಯ ಪರಿಸ್ಥಿತಿಗಳಿಂದ ಉರಿಯೂತ ಉಂಟಾಗುತ್ತದೆ. ಇದರಿಂದಾಗಿ ಕೆಲವೊಮ್ಮೆ ಕೂದಲು ಉದುರುತ್ತದೆ. ಇದನ್ನು ಅಲೋಪೆಸಿಯಾದ ಎಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಉರಿಯೂತವನ್ನು ನಿಲ್ಲಿಸಲು ಸಹಾಯ ಮಾಡಲು ಕಾರ್ಟಿಕೊಸ್ಟೆರಾಯ್ಡ್ ಔಷಧಿ ತೆಗೆದುಕೊಳ್ಳುವುದು ಉತ್ತಮ ಆಯ್ಕೆ. ಕಾರ್ಟಿಕೊಸ್ಟೆರಾಯ್ಡ್ ಔಷಧಿಯನ್ನು ಸಿರಿಂಜ್ ಮೂಲಕ ತಲೆಗೆ ಚುಚ್ಚಬಹುದಾಗಿದೆ. . ಈ ಚಿಕಿತ್ಸೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ನೀವು ಅದನ್ನು ತೆಗೆದುಕೊಳ್ಳುವ ಮೊದಲು, ವೈದ್ಯರ ಶಿಫಾರಸು ಅತ್ಯಗತ್ಯವಾಗಿದೆ.

5. ಐರನ್ ಸಪ್ಲಿಮೆಂಟ್ಸ್ : 

ಐರನ್ ಸಪ್ಲಿಮೆಂಟ್ಸ್ ಅಥವಾ ಕಬ್ಬಿಣಾಂಶಯುಕ್ತ ಆಹಾರ ಕೂದಲಿನ ಬೆಳವಣಿಗೆಗೆ ಕಬ್ಬಿಣ ಬಹಳ ಮುಖ್ಯ. ನಮ್ಮ ಕೂದಲು ಬೆಳವಣಿಗೆ ಮತ್ತು ಅಭಿವೃದ್ಧಿಗೆ ಆಮ್ಲಜನಕವನ್ನು ಅವಲಂಬಿಸಿರುವುದೇ ಇದಕ್ಕೆ ಕಾರಣ.  ಕಬ್ಬಿಣವು ಹಿಮೋಗ್ಲೋಬಿನ್'ನ  ಅಂಶವಾಗಿರುವುದರಿಂದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ. ದೇಹದ ಭಾಗವಾಗಿರದಿದ್ದರೂ ಕೂದಲಿಗೆ ಆಮ್ಲಜನಕ ಏಕೆ ಬೇಕು ಎಂದು ನಿಮಗೆ ಆಶ್ಚರ್ಯವಾಗುತ್ತಿರಬೇಕು. ಕೂದಲು ನಿರ್ಜೀವವಾಗಿದ್ದರೂ ಸಹ, ಅವು ಉಳಿವು ಮತ್ತು ಬೆಳವಣಿಗೆಗೆ ಕೆಲವು ಅಂಶಗಳನ್ನು ಅವಲಂಬಿಸಿರುತ್ತದೆ.

6. ಯೋಗ ಮತ್ತು ವ್ಯಾಯಾಮ: 

ದೈನಂದಿನ ಜಂಜಾಟದಿಂದ ಮನಸ್ಸು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತದೆ. ಸರಿಯಾದ ರೀತಿಯಲ್ಲಿ ನಿದ್ರೆ ಆಗುವುದಿಲ್ಲ. ಜವಾಬ್ದಾರಿಗಳು ಹೆಚ್ಚಿದಷ್ಟು ಮನಸ್ಸಿನ ಮೇಲೆ ಭಾರ ಬೀಳುತ್ತದೆ.ಹೀಗಾಗಿ ಆದಷ್ಟು ಮನಸ್ಸನ್ನು ಸಂತೋಷ ಹಾಗೂ ಉಲ್ಲಾಸದಿಂದ ಇಟ್ಟುಕೊಳ್ಳಬೇಕು. ಒಂದು ವೇಳೆ ಮಾನಸಿಕ ಒತ್ತಡ ಹೆಚ್ಚಾದರೆ ಕೂದಲುದುರುವ ಸಮಸ್ಯೆಯೂ ಅಧಿಕವಾಗಲಿದೆ. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ಕೂದಲು ಉದುರುವುದನ್ನು ತಡೆಯಬಹುದು.