ಮೇಕಪ್ ಗೆ ವಯಸ್ಸಿನ ಮಿತಿಯಿಲ್ಲ. ಅಂದವಾಗಿ ಕಾಣಿಸಿಕೊಳ್ಳಲು ಹುಡುಗಿಯರು ಮತ್ತು ಹುಡುಗರು ಮಾರುಕಟ್ಟೆಯಲ್ಲಿ ಸಿಗುವ ಅನೇಕ ಪ್ರಾಡಕ್ಟ್ಗಳನ್ನು ಬಳಸುತ್ತಾರೆ. ಆದರೆ ಅದರ ಸರಿಯಾದ ಬಳಕೆ ತಿಳಿದುಕೊಳ್ಳದೆ ಮುಖದ ಅಂದ ಕೆಡಿಸಿಕೊಳ್ಳವ ಸಂದರ್ಭವಿರುತ್ತದೆ. ಹೀಗಾಗಿ ಪ್ರತಿ ದಿನ ನಾವು ಬಳಸುವ ಬ್ಯೂಟಿ ಪ್ರಾಡೆಕ್ಟ್ಗಳ ಬಗ್ಗೆ ಎಚ್ಚರದಿಂದಿರುವುದು ಅಗತ್ಯ.
ಬ್ಲೀಚ್
ಬ್ಲೀಚ್ನಲ್ಲಿ ಅನೇಕ ರೀತಿಯ ರಾಸಾಯನಿಕಗಳು ಕಂಡುಬರುತ್ತವೆ. ಹಾಗಾಗಿಯೇ ಇದರ ಬಳಕೆಯಿಂದ ಮುಖ ಹೊಳೆಯುತ್ತದೆ. ಬ್ಲೀಚ್ನ ಅತಿಯಾದ ಬಳಕೆಯು ಮುಖದಲ್ಲಿರುವ ನೈಸರ್ಗಿಕ ಎಣ್ಣೆಯನ್ನು ಕಡಿಮೆ ಮಾಡುತ್ತದೆ. ಇದ್ರಿಂದ ಮುಖದಲ್ಲಿ ಎಣ್ಣೆಯಂಶ ಮಾಯವಾಗಿ ಚರ್ಮ ನಿರ್ಜೀವಗೊಳ್ಳುತ್ತದೆ. ಬ್ಲೀಚ್ ಮಾಡಿಸ್ಲೇಬೇಕು ಎನ್ನುವವರು ತಿಂಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಬ್ಲೀಚ್ ಮಾಡಿಸಬೇಡಿ.
ಲಿಪ್ ಗ್ಲಾಸ್ ಮತ್ತು ಲಿಪ್ಸ್ಟಿಕ್ಬಹುತೇಕ ಮಹಿಳೆಯರು ಲಿಪ್ಸ್ಟಿಕ್ ಬಳಸುತ್ತಾರೆ ಆದರೆ ಪ್ರತಿ ದಿನ ಲಿಪ್ಟ್ಸಿಕ್ ಬಳಸಿದರೆ ತುಟಿಗಳ ಚರ್ಮವನ್ನು ಒಣಗಿಸುತ್ತದೆ. ಲಿಪ್ ಗ್ಲಾಸ್ ಮತ್ತು ಲಿಪ್ ಲೈನರ್ ಕ್ಯಾಡ್ಮಿಯಮ್, ಅಲ್ಯೂಮಿನಿಯಂ, ಕ್ರೋಮಿಯಂ, ಸೀಸದಂತಹ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಇದು ನಿಮ್ಮ ಲಿಪ್ಸ್ಟಿಕ್ ನಲ್ಲಿ ಕಂಡುಬರುವ ಖನಿಜ ತೈಲವು ಮೂಲ ಚರ್ಮದ ರಂಧ್ರಗಳನ್ನು ಮುಚ್ಚುತ್ತದೆ. ಇದು ಚರ್ಮದ ಕೋಶಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಯನ್ನು ತಡೆಯುತ್ತದೆ. ಇದರಿಂದ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ.
ನೇಲ್ ಪಾಲಿಶ್ ಹಾಗೂ ನೇಲ್ ಪೇಂಟ್ಹುಡುಗಿಯರು ತಮ್ಮ ಉಗುರು ಸುಂದರವಾಗಿ ಕಾಣಲಿ ಎಂಬ ಕಾರಣಕ್ಕೆ ನೇಲ್ ಪಾಲಿಶ್ ಬಳಕೆ ಮಾಡ್ತಾರೆ. ಆದ್ರೆ ನೇಲ್ ಪಾಲಿಶ್ ಹಚ್ಚುವಾಗ ಅಜಾಗರೂಕತೆ ವಹಿಸಿದ್ರೆ ಸಮಸ್ಯೆಯಾಗುತ್ತದೆ. ಕಡಿಮೆ ಬೆಲೆಗೆ ಸಾಕಷ್ಟು ನೇಲ್ ಪಾಲಿಶ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂದು ಹಚ್ಚಿದರೆ ಉಗುರು ದುರ್ಬಲವಾಗುತ್ತದೆ ಹಾಗೂ ಉಗುರಿನ ಬಣ್ಣ ಬದಲಾಗುತ್ತದೆ ಮತ್ತು ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಅದ್ದರಿಂದ ಒಳ್ಳೆಯ ನೇಲ್ ಪಾಲಿಶಯನ್ನು ಬಳಸಿ.
ಫೌಂಡೇಶನ್ ಅಥವಾ ಸಿಸಿ ಕ್ರೀಮ್
ಮುಖಕ್ಕೆ ಮೇಕಪ್ ಮಾಡುವ ಮೊದಲು ಅನೇಕ ಹುಡುಗಿಯರು ಸಿಸಿ ಕ್ರೀಮ್ ಬಳಸ್ತಾರೆ. ಈ ಕ್ರೀಮ್ಗಳಲ್ಲಿ ಇರುವ ರಾಸಾಯನಿಕಗಳು ಚರ್ಮಕ್ಕೆ ಹಾನಿಕಾರಕ. ಮಲಗುವ ಮೊದಲು ಈ ಕ್ರೀಮ್ ಸ್ವಚ್ಛಗೊಳಿಸಬೇಕು. ಇಲ್ಲವೆಂದ್ರೆ ಕಲೆ, ಮೊಡವೆ, ತುರಿಕೆ ಸೇರಿದಂತೆ ಅನೇಕ ಸಮಸ್ಯೆ ಕಾಡಲು ಶುರುವಾಗುತ್ತದೆ.
ಕಾಡಿಗೆ