ಊಟ ಬದಲಿಗೆ ಹಾಲು ಬಯಸುವ ಮಕ್ಕಳು ಹೆಚ್ಚಿನ ಅಂಬೆಗಾಲಿಡುತ್ತಿರುವ ಮಕ್ಕಳಂತೆಯೇ, ನಿಮ್ಮ ಮಗು ತಿನ್ನುವುದಕ್ಕಿಂತಲೂ ಆಟಕ್ಕೇ ಹೆಚ್ಚಿನ ಆದ್ಯತೆ ನೀಡಿ ತನ್ನ ಸಮಯವನ್ನು ಊಟಕ್ಕಿಂತಲೂ ಆಟಕ್ಕಾಗಿ ಹೆಚ್ಚು ಆಯ್ಕೆ ಮಾಡುತ್ತದೆ.
ಮಗು ಊಟ ಮಾಡುತ್ತಿಲ್ಲವೇ?
ಕೆಲವೊಮ್ಮೆ ಮಗುವಿನ ಆರೋಗ್ಯ ಏರುಪೇರಾಗಿದ್ದರೂ ಮಗು ಊಟ ಮಾಡದೇ ಇರುವುದರ ಕಾರಣವಾಗಿರಬಹುದು. ಕೆಲವೊಮ್ಮೆ ತನಗೆ ಬಲವಂತವಾಗಿ ತಿನ್ನಿಸಲಾಗುತ್ತಿದೆ ಎಂಬ ಅರಿವೂ ಮಗುವಿಗೆ ಆಗುವ ಮೂಲಕ ಹಿರಿಯರ ಗಮನ ಸೆಳೆಯುತ್ತದೆ. ಒಂದು ವೇಳೆ ಮಗು ದಿನವೊಂದರಲ್ಲಿ ಒಂದೇ ಹೊತ್ತು ಘನ ಆಹಾರವನ್ನು ಸೇವಿಸಿದರೆ ದೃತಿಗೆಡದಿರಿ. ಬದಲಿಗೆ ಇಡೀ ವಾರದಲ್ಲಿ ಮಗು ಯಾವ ವೈವಿಧ್ಯತೆಯ ಆಹಾರಗಳನ್ನು ಸೇವಿಸಿದೆ ಎಂಬ ಬಗ್ಗೆ ಗಮನ ಹರಿಸಿ.
ನಿಮ್ಮ ಮಗು ಏನು ತಿನ್ನಲಿದ್ದರೆ ಮಗುವನ್ನು ತನ್ನ ಆಟಿಕೆಗಳ ಬಳಿ ಸಾಗಲು ಬಿಡಿ. ಮಗುವಿಗೆ ಹಸಿವೆಯಾದಾಗ ತಾನೇ ತಾಯಿಯ ಬಳಿ ಬರುತ್ತದೆ. ಆಗ ಮಗುವಿಗೆ ಹಾಲನ್ನು ಕೊಡದೇ ಘನ ಆಹಾರವನ್ನೇ ನೀಡಿ. ನಿಮ್ಮ ಮಗುವಿಗೆ ಹಾಲು ನೀಡಿದರೆ, ಅಥವಾ ಮಗುವಿನ ತಟ್ಟೆಯಲ್ಲಿರುವ ಆಹಾರವನ್ನು ಮಗು ಇಷ್ಟಪಡದಿದ್ದರೆ, ನೀವೇ ನಿಮ್ಮ ಮಗುವಿಗೆ ಕೆಟ್ಟ ಆಹಾರ ಪದ್ಧತಿಯನ್ನು ಪ್ರೋತ್ಸಾಹಿಸುತ್ತೀರಿ. ನಿಮ್ಮ ಮಗು ಆಹಾರಕ್ಕಾಗಿ ನಿಮ್ಮ ಬಳಿಗೆ ಬಂದಾಗ ನೀವು ನಿರಂತರವಾಗಿ ಮಗುವಿಗೆ ಅಗತ್ಯವಿರುವ ಘನ ಆಹಾರಗಳನ್ನು ನೀಡುತ್ತಾ ಬಂದರೆ ಮಗು ಶೀಘ್ರವೇ ತನ್ನ ಪಾಲಿಗೆ ಬಂದದ್ದೇ ಪಂಚಾಮೃತ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತದೆ ಹಾಗೂ ಈ ಆಹಾರವನ್ನು ಸೇವಿಸಲು ತೊಡಗುತ್ತದೆ.
ಮಗು ಕೇಳಿದಾಗೆಲ್ಲಾ ಹಾಲು ನೀಡಬೇಡಿ ಒಂದು ವೇಳೆ ನಿಮ್ಮ ಕುಟುಂಬದ ಇತರ ಸದಸ್ಯರೂ ಮಗುವಿಗೆ ಆಹಾರ ನೀಡುತ್ತಿದ್ದರೆ ಅವರಿಗೂ ಈ ವಿಧಾನದ ಬಗ್ಗೆ ತಿಳಿಸಿ ಹಾಗೂ ಮಗು ಕೇಳಿದಾಗಲೆಲ್ಲಾ ಹಾಲನ್ನು ನೀಡದಿರುವಂತೆ ಎಚ್ಚರಿಸಿ. ತಜ್ಞರ ಸಲಹೆ ಪಡೆಯಿರಿ ನಿಮ್ಮ ಅಂಬೆಗಾಲಿಡುತ್ತಿರುವ ಮಗು ಎಷ್ಟು ತಿನ್ನಬೇಕು ಎಂದು ನೀವು ಇನ್ನೂ ಚಿಂತೆ ಮಾಡುತ್ತಿದ್ದರೆ, ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ. ವೈದ್ಯರು ನಿಮ್ಮ ಮಗುವಿನ ತೂಕ ಮತ್ತು ಎತ್ತರವನ್ನು ಪರಿಶೀಲಿಸಿ ಸೂಕ್ತ ಸಲಹೆ ನೀಡಬಹುದು. ಸಾಮಾನ್ಯವಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ನಿಮಗೆ ಭರವಸೆ ನೀಡಬಹುದು.