ಯಮ್ಮೀ... ಯಮ್ಮೀ... ಚಿಕನ್ ಚಾಪ್ಸ್ ರೆಸಿಪಿ.


 ಚಿಕನ್ ಚಾಪ್ಸ್‌ ನೋಡುವಾಗಲೇ ಬಾಯಲ್ಲಿ ನೀರೂರುತ್ತೆ ಅಲ್ವಾ? 200 ರುಪಾಯಿ ಸಾಮಗ್ರಿ ಇದ್ದರೆ ಸಾಕು ಮನೆಯಲ್ಲಿಯೇ  4-5 ಜನ ಸವಿಯಲು ಚಿಕನ್‌ ಚಾಪ್ಸ್ ಮಾಡಬಹುದು.

ಚಿಕನ್‌ ಚಾಪ್ಸ್ ಮಾಡುವ ವಿಧಾನ:

ಬೇಕಾಗುವ ಸಾಮಗ್ರಿ 300 ಗ್ರಾಂ ಚಿಕನ್‌, 1 ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು) ,2 ಹಸಿ ಮೆಣಸಿನಕಾಯಿ, 1 ಮೊಟ್ಟೆ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2 ಚಮಚ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ, 1/4 ಚಮಚ ಅರಿಶಿಣ ಪುಡಿ, 1/2 ಚಮಚ ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು , ಡೀಪ್‌ ಫ್ರೈಗೆ ಮಾಡಲು ಎಣ್ಣೆ ಬ್ರೆಡ್‌ ಚೂರುಗಳು.

  •  ಒಂದು ಬೌಲ್‌ನಲ್ಲಿ ಮಿನ್ಸ್ಡ್‌ ಚಿಕನ್ (ತುಂಬಾ ಚಿಕ್ಕ -ಚಿಕ್ಕ ತುಂಡು), ಈರುಳ್ಳಿ, ಹಸಿ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಟ್ಟೆ, ಕೊತ್ತಂಬರಿ-ಪುದೀನಾ ಸೊಪ್ಪು, ಸ್ವಲ್ಪ ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು, ಸ್ವಲ್ಪ ನಿಂಬೆರಸ ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ.
  •  ಈಗ ಈ ಮಿಶ್ರಣವನ್ನು 15 ನಿಮಿಷ ಫ್ರಿಡ್ಜ್‌ನಲ್ಲಿಡಿ
  •  ಈಗ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಅದೇ ಸಮಯದಲ್ಲಿ ಚಿಕನ್‌ ಚಾಪ್ಸ್ ಮಿಶ್ರಣದಿಂದ ದೊಡ್ಡ-ದೊಡ್ಡ ನಿಂಬೆ ಹಣ್ಣಿನ ಗಾತ್ರದ ಉಂಡೆ ಕಟ್ಟಿ, ಅದನ್ನು ಕೈಯಲ್ಲಿಯೇ ರೋಲ್ ಮಾಡಿ.
  • ನಂತರ ಬ್ರೆಡ್ ಚೂರುಗಳಲ್ಲಿ ಹೊರಳಾಡಿಸಿ ನಂತರ ಎಣ್ಣೆಯಲ್ಲಿ ಹಾಕಿ ಡೀಪ್‌ ಫ್ರೈ ಮಾಡಿ.

ಈ ರೆಡಿಯಾದ ಬಿಸಿ-ಬಿಸಿ ಚಿಕನ್‌ ಚಾಪ್ಸ್ ಅನ್ನು ಟೊಮೆಟೊ ಸಾಸ್‌ ಅಥವಾ ಪುದೀನಾ ಚಟ್ನಿ ಅಥವಾ ಮಯೋನೈಸ್ ಜೊತೆ ಸವಿಯಿರಿ.

ಇಲ್ಲಿ 300 ಗ್ರಾಂ ಚಿಕನ್ ಚಾಪ್ಸ್‌ಗೆ ಸಾಕಾಗುವಷ್ಟು ಸಾಮಗ್ರಿ ಹೇಳಿದ್ದೇವೆ, ನೀವು ಚೆನ್ನಾಗಿ ತಿನ್ನಬೇಕೆಂದರೆ ಅರ್ಧ ಕೆಜಿಯಲ್ಲಿ ಮಾಡಿದರೆ ಸಾಕಾಗುವುದು.