ಡೆಂಗ್ಯೂ ಜ್ವರ ಬಂದಾಗ ಬೇಗ ಚೇತರಿಸಿಕೊಳ್ಳಲು ಕೆಲವು ಆಹಾರ ಸೇವಿಸಿ


ಡೆಂಗ್ಯೂ ಜ್ವರ ಎಲ್ಲೆಡೆ ಕಂಡುಬರುತ್ತಿದೆ. ಇದ್ದಕ್ಕಿದ್ದ ಹಾಗೆ ಪ್ಲೇಟ್ಲೆಟ್ಗಳ ಸಂಖ್ಯೆ ಕುಸಿದು ಬಹಳಷ್ಟು ಜನರಿಗೆ ಭಾರೀ ತೊಂದರೆ ಆಗಿರುವುದು ಬೆಳಕಿಗೆ ಬಂದಿದೆಡೆಂಗ್ಯೂ ಜ್ವರ ಬಂದಾಗ ಬೇಗ ಚೇತರಿಸಿಕೊಳ್ಳಲು ಕೆಲವು ಆಹಾರ ಪದ್ಧತಿ ಅನುಸರಿಸಿ.

ಡೆಂಗ್ಯೂ ಜ್ವರದ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ದೇಹ ನಿಯಂತ್ರಣವಾಗಿ ಸಾವಿನ ಅಂಚಿಗೆ ಹೋಗಿ ಬರುವ ಅನುಭವ ಬಹುತೇಕರದ್ದು. ನಮ್ಮ ಸಮಾಜಕ್ಕೆ ಡೆಂಗ್ಯೂ ಹೊಸ ಜ್ವರವೇನೂ ಅಲ್ಲ. ಅದು ಬಾರದಂತೆ ತಡೆಯುವ ಬಗ್ಗೆ ಬಹಳಷ್ಟು ಜನರಿಗೆ ನಿಖರ ಅರಿವಿಲ್ಲ. ಹಾಗೆಯೇ, ಡೆಂಗ್ಯೂ ಜ್ವರದಿಂದ ಚೇತರಿಸಿಕೊಳ್ಳುವ ಸಮಯದಲ್ಲಿ ಅನುಸರಿಸಬೇಕಾದ ಆಹಾರ-ವಿಹಾರ ಪದ್ಧತಿಗಳ ಕುರಿತೂ ಹೆಚ್ಚು ಜನರಿಗೆ ಮಾಹಿತಿ ಇಲ್ಲ.

ನಮ್ಮ ದೇಹದಲ್ಲಿ ಸಾಮಾನ್ಯವಾಗಿ ಎರಡೂವರೆ ಲಕ್ಷದಿಂದ ನಾಲ್ಕು ಲಕ್ಷದವರೆಗೆ ರಕ್ತದ ಪ್ಲೇಟ್ಲೆಟ್ಗಳು ಇರುತ್ತವೆ. ಆದರೆ, ಪ್ರಮಾಣ  ಐವತ್ತು ಸಾವಿರಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದಾಗ ಜೀವಕ್ಕೇ ಅಪಾಯ ಒಡ್ಡುತ್ತದೆ. ಬಳಿಕ, ಚೇತರಿಸಿಕೊಂಡರೂ ವಿಪರೀತ ಸುಸ್ತು ಕಂಗಾಲು ಮಾಡಿಬಿಡುತ್ತದೆ. ಕೈಕಾಲುಗಳ ನೋವು, ಎದ್ದು ಓಡಾಡಲು ಸಾಧ್ಯವಾಗದಂತಹ ಸುಸ್ತು ಕಾಡಿಸಿಬಿಡುತ್ತದೆ.

ದೇಹಕ್ಕಾಗುವ ಹಿಂಸೆಯಿಂದ ಪಾರಾಗಲು ಪ್ಲೇಟ್ಲೆಟ್ಗಳ ಸಂಖ್ಯೆ ವೇಗವಾಗಿ ವೃದ್ಧಿಸಬೇಕು. ಅದಕ್ಕೆ ನಮ್ಮ ಪ್ರಯತ್ನ ಬೇಕಾಗುತ್ತದೆ. ಹೀಗಾಗಿ, ಡೆಂಗ್ಯೂ ಜ್ವರ ಬಂದವರು ಕೆಲವು ಆಹಾರಗಳನ್ನು ಸೇವಿಸಬೇಕು. ಇದರಿಂದ ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ಲೇಟ್ಲೆಟ್ಸಂಖ್ಯೆ ವೃದ್ಧಿಸಿದಾಗ ದೇಹದ ನೋವು ಕಡಿಮೆಯಾಗುತ್ತ ಸಾಗುತ್ತದೆ.

ದೇಹದಲ್ಲಿ ನೀರಿನಂಶ ಕಡಿಮೆ ಆಗದಂತೆ ನೋಡಿಕೊಳ್ಳಿ:
ಡೆಂಗ್ಯೂ ಬಂದವರು ವಹಿಸಬೇಕಾದ ಅತಿ ಮುಖ್ಯವಾದ ಎಚ್ಚರಿಕೆ ಎಂದರೆ ದೇಹಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು. ಸಾಮಾನ್ಯ ದಿನಕ್ಕಿಂತಲೂ ಹೆಚ್ಚಿನ ನೀರಿನ ಅಂಶ ಸಮಯದಲ್ಲಿ ಬೇಕಾಗುತ್ತದೆ. ಹೀಗಾಗಿ, ತರಕಾರಿ ಸೂಪ್‌, ಎಳನೀರು, ದಾಳಿಂಬೆ ಹಾಗೂ ಅನಾನಸ್ಹಣ್ಣಿನ ಜ್ಯೂಸ್ಸೇವನೆ ಮಾಡಬೇಕು. ಇವೆಲ್ಲದರೊಂದಿಗೆ ಹೆಚ್ಚು ನೀರು ಸಹ ಕುಡಿಯಬೇಕು. ಇದರಿಂದ ಜ್ವರ ಬೇಗ ಕಡಿಮೆಯಾಗುವ ಜತೆಗೆ ಸುಸ್ತು ಸಹ ನಿವಾರಣೆಯಾಗುತ್ತದೆ.

ಹಸಿರು
ಸೊಪ್ಪು ತರಕಾರಿ ಸೇವನೆ:
ಡೆಂಗ್ಯೂ ಜ್ವರ ಬಂದವರು ಹಸಿರು ಸೊಪ್ಪು ಮತ್ತು ತರಕಾರಿ ಸೇವನೆ ಮಾಡಬೇಕು. ತರಕಾರಿ ಸೂಪ್‌, ಕಾರ್ನ್ಸೂಪ್‌, ಸಲಾಡ್ಅಥವಾ ಪಲ್ಯದ ರೂಪದಲ್ಲಿ ಸೇವನೆ ಮಾಡಬೇಕು. ಇದರಿಂದ ಬೇಗ ಸುಧಾರಿಸಿಕೊಳ್ಳಲು ಅನುಕೂಲವಾಗುತ್ತದೆ.

ಪೌಷ್ಟಿಕ ಆಹಾರಕ್ಕೆ ಒತ್ತು ನೀಡಬೇಕು:
ಡೆಂಗ್ಯೂ ಜ್ವರ ಬಂದ ಬಳಿಕ ಹಸಿವೆ ಎನ್ನುವುದೇ ಸತ್ತು ಹೋಗುತ್ತದೆ. ಹೊಟ್ಟೆಯ  ಬ್ಯಾಕ್ಟೀರಿಯಾ ನಾಶವಾಗುವುದರಿಂದ ಹಸಿವು ಉಂಟಾಗುವುದಿಲ್ಲ. ಹೀಗಾಗಿ, ತಿನ್ನುವ ಸ್ವಲ್ಪೇ ಆಹಾರ ಅತ್ಯುತ್ತಮ ಮಟ್ಟದಲ್ಲಿ ಪೌಷ್ಟಿಕಾಂಶಗಳನ್ನು ಒಳಗೊಂಡಿರಬೇಕು. ಪೌಷ್ಟಿಕತೆ ಹೊಂದಿರುವ ಜತೆಗೆ ಸುಲಭವಾಗಿ ಜೀರ್ಣಕಾರಿಯೂ ಆಗಿರಬೇಕು. ತರಕಾರಿ ಕಿಚಡಿ, ಬೇಳೆಯ ಸಾರು ಸಮಯದಲ್ಲಿ ಉತ್ತಮ. ತುಳಸಿ ಎಲೆ, ಧನಿಯಾ, ಶುಂಠಿ, ಬೆಳ್ಳುಳ್ಳಿ, ಲಿಂಬೆಗಳನ್ನು ಆಹಾರದಲ್ಲಿ ಬಳಕೆ ಮಾಡಿಕೊಳ್ಳಬೇಕು.

ಮೇಕೆಯ ಹಾಲು ಅತ್ಯುತ್ತಮ:
ಪ್ಲೇಟ್ಲೆಟ್ಗಳ ಸಂಖ್ಯೆ ಹೆಚ್ಚಿಸಲು ಮೇಕೆಯ ಹಾಲು ಅತ್ಯುಪಯುಕ್ತ. ನಾಟಿ ಹಸುವಿನ ಹಾಲು ಮತ್ತು ತುಪ್ಪ ಅಥವಾ ಮೇಕೆಯ ಹಾಲನ್ನು ದಿನವೂ ಸೇವಿಸಬೇಕು. ಹಸುವಿನ ಹಾಲಿಗಿಂತ ಮೇಕೆಯ ಹಾಲು ಸಮಯದಲ್ಲಿ ಹೆಚ್ಚು ಪ್ರಯೋಜನಕಾರಿ. ತಜ್ಞರ ಪ್ರಕಾರ, ಪಪ್ಪಾಯದ ಎಲೆಯ ರಸ ಸಮಯದಲ್ಲಿ ಭಾರೀ ಪ್ರಯೋಜನಕಾರಿ ಆಗಿದೆ. ದಿನವೂ ನಿರ್ದಿಷ್ಟ ಪ್ರಮಾಣದಲ್ಲಿ ಪಪ್ಪಾಯ ಎಲೆಯ ರಸ ಸೇವಿಸಬೇಕು. ಈಗಂತೂ ಅದರ ಔಷಧವೂ ಲಭ್ಯವಿದೆ.

ಎಚ್ಚರಿಕೆ ಇರಲಿ:
ಡೆಂಗ್ಯೂ ಉಂಟಾಗದಂತಿರಲು ಮನೆಯ ಸುತ್ತಮುತ್ತ ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಮನೆಯನ್ನು ಲಿಂಬೆ ಹುಲ್ಲಿನ ತೈಲ, ನೀಲಗಿರಿ ತೈಲ, ಲವಂಗ, ಚಕ್ಕೆ, ರೋಸ್ಮೆರಿ, ಟೀ ಟ್ರೀ ತೈಲದ ಹನಿಗಳನ್ನು ಹಾಕಿ ಒರೆಸಬೇಕು. ಇದರಿಂದ ಮನೆಯೊಳಗೆ ಸೊಳ್ಳೆ ಪ್ರವೇಶವಾಗುವುದಿಲ್ಲ.