ಬಿಪಿ ಹೆಚ್ಚಾದರೆ ಕಡಿಮೆ ಮಾಡುವುದು ಹೇಗೆ?

ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯನಿಗೆ  ನಾನಾ ಕಾಯಿಲೆ ಇರುತ್ತದೆ. ಅದರಲ್ಲೂ ಅಧಿಕ ರಕ್ತದೊತ್ತಡದಿಂದ ಇರುವ ಜನರು ತುಂಬಾ ಭಯಪಡುತ್ತಾರೆ. ಹತ್ತು ವಯಸ್ಕರ ಪೈಕಿ 7 ಜನರಿಗೆ ಸಂಭವಿಸುವ ಹೃದಯಾಘಾತ ಅಧಿಕ ರಕ್ತದೊತ್ತಡವೇ ಕಾರಣ ಎಂದು ಅಧ್ಯಯನ ವರದಿಗಳು ಹೇಳುತ್ತವೆ.

ಇನ್ನು ಹೃದಯಾಘಾತ ಎಂದರೇ ನಮ್ಮ ಹೃದಯದಿಂದ ನರಗಳ ಮೂಲಕ ರಕ್ತ ಹರಿಯುತ್ತದೆ. ಹೀಗೆ ರಕ್ತ ಹರಿಯಲು ಹೃದಯವು ರಕ್ತವನ್ನು ಪಂಪ್ ಮಾಡಿ ನರಗಳ ಮೂಲಕ ಕಳುಹಿಸಿಕೊಡುತ್ತದೆ. ಹೀಗೆ ನಮ್ಮ ಪ್ರತಿ ನರದ ಒಳಗೆ ಹರಿಯುತ್ತಿರುವ ರಕ್ತ ನಾಳದ ಮೇಲೆ ಒಳಗಿನಿಂದ ಹೇರುವ ಒತ್ತಡವೇ ರಕ್ತದ ಒತ್ತಡವಾಗಿದೆ.

ರಕ್ತದೊತ್ತಡ ಸಾಮಾನ್ಯವಾಗಿ ಎಷ್ಟಿರಬೇಕು?
ರಕ್ತದೊತ್ತಡವನ್ನು ಅಳೆಯಲು ಮಾಪನವಿದೆ. ಗರಿಷ್ಟ ಮತ್ತು ಕನಿಷ್ಟ ಎಂದು ರಕ್ತದೊತ್ತಡವನ್ನು ಕರೆಯುತ್ತಾರೆ. ಉದಾಹರಣೆಗೆ 120 / 80. ಇಲ್ಲಿ 120 ಅನ್ನು ಸಂಕೋಚನ ರಕ್ತದೊತ್ತಡ ಎಂದೂ 80 ಅನ್ನು ವ್ಯಾಕೋಚನ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. 120/80 mmHg ಎಂಬ ಮಾಪನ ಸಾಮಾನ್ಯ ಆರೋಗ್ಯದ ಸ್ಥಿತಿಯಾಗಿದೆ. ಇವು ಯಾವಾಗ 140/90 ಕ್ಕೆ ಏರಿತೋ ಆಗ ಅಧಿಕ ರಕ್ತದ ಒತ್ತಡ ಎಂದು ಕರೆಯಲಾಗುತ್ತದೆ. 180/120 ದಾಟಿದರಂತೂ ಪ್ರಾಣಾಪಾಯಕ್ಕೆ ಸಮನಾದ ಸ್ಥಿತಿ ಎಂದು ವೈದ್ಯರು ಪರಿಗಣಿಸುತ್ತಾರೆ.

ಅಧಿಕ ರಕ್ತದೊತ್ತಡದ ಲಕ್ಷಣಗಳೇನು?
ರಕ್ತದೊತ್ತಡದ ಸಂಬಂಧ ಪರೀಕ್ಷೆ ನಡೆಸಿದರೆ ನಿಮಗೆ ಅಧಿಕ ರಕ್ತದೊತ್ತಡವಿದೆ ಎಂದು ತಿಳಿಯುತ್ತದೆ. ಇದಲ್ಲದೇ ನಿಮಗೆ ನಾವು ಹೇಳುವ ಲಕ್ಷಣಗಳು ಇದ್ದರೆ ತಡ ಮಾಡದೇ ಕೂಡಲೇ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಹೌದು, ನಿಮಗೆ ವರ್ಟಿಗೋ , ತೀವ್ರ ತಲೆನೋವು, ಎದೆನೋವು, ಹೃದಯ ಬಡಿತದಲ್ಲಿ ಹಠಾತ್ ಹೆಚ್ಚಳ, ದೃಷ್ಟಿ ನಷ್ಟ, ಮೂಗಿನಲ್ಲಿ ರಕ್ತಸ್ರಾವ, ಉಸಿರಾಟದ ತೊಂದರೆ, ಟಿನ್ನಿಟಸ್, ನಿದ್ರಾಹೀನತೆ, ಗೊಂದಲ, ಆಯಾಸ, ಅಧಿಕ ಬೆವರುವುದು . ಹೀಗೆ ಇವೆಲ್ಲ ಲಕ್ಷಣಗಳು ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ ಎಂದು ತೋರಿಸಿಕೊಡುತ್ತದೆ. ಹೀಗಾಗಿ ರೀತಿಯ ಲಕ್ಷಣಗಳು ಕಂಡುಬಂದರೆ ಕೂಡಲೇ ನೀವು ಇದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು.

ರಕ್ತದೊತ್ತಡ ಉಂಟಾಗಲು ಕಾರಣವೇನು?
ರಕ್ತದೊತ್ತಡ ಉಂಟಾಗಲು ಹಲವು ಕಾರಣಗಳಿವೆ. ನಮ್ಮ ಜೀವನ ಪದ್ದತಿ, ಆಹಾರದ ರೀತಿಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ನಾವು ತೀವ್ರತರದಲ್ಲಿ ಒತ್ತಡದ ಜೀವನ ನಡೆಸುತ್ತಿದ್ದೇವೆ ಎಂದರೆ ನಮಗೆ ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ವೈಟ್-ಕೋಟ್ ಸಿಂಡ್ರೋಮ್ ಕೂಡ ರಕ್ತದೊತ್ತಡ ಉಂಟಾಗಲು ಕಾರಣವಾಗಿದೆ. ಬೇರೆ ರೋಗಗಳಿಗೆ ತೆಗೆದುಕೊಳ್ಳುವ ಔಷಧಿಗಳಿಂದಲೂ ನಮಗೆ ರಕ್ತದೊತ್ತಡ ಉಂಟಾಗಬಹುದು. ಇನ್ನು ಜೀವನದಲ್ಲಿ ಯಾವುದೇ ಚಟುವಟಿಕೆ ಇಲ್ಲದೆ ಸುಮ್ಮನಿರುವುದಾದರೆ ಆರೋಗ್ಯದ ಮೇಲೆ ಸಮಸ್ಯೆ ಉಂಟಾಗುತ್ತದೆ. ಇನ್ನು ನಮ್ಮ ಆಹಾರ ಪದ್ದತಿ ಕೂಡ ರಕ್ತದೊತ್ತಡ ಉಂಟು ಮಾಡಲು ಕಾರಣವಾಗಿರಬಹುದು. ಮೂತ್ರಜನಕಾಂಗದ ಸಮಸ್ಯೆಗಳಿಂದಲು ಅಧಿಕ ರಕ್ತದೊತ್ತಡ ಉಂಟಾಗಬಹುದು. ಇನ್ನು ಅತಿಯಾದ ಧೂಮಪಾನ ಮತ್ತು ಅತಿಯಾದ ಮದ್ಯ ಸೇವನೆಯೂ ರಕ್ತದೊತ್ತಡ ಹೆಚ್ಚಿಸುತ್ತದೆ.

ಹೇಗೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು?
ಕೆಲವು ಸ್ಥಿತಿಗಳು ಮತ್ತು ನಮ್ಮ ಅಭ್ಯಾಸಗಳು ರಕ್ತದ ಒತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತವೆ. ಇವನ್ನು ಆದಷ್ಟೂ ನಿಯಂತ್ರಿಸುವ ಮೂಲಕ ಅಧಿಕ ರಕ್ತದ ಒತ್ತಡದ ಸಾಧ್ಯತೆಗಳನ್ನು ಕಡಿಮೆಗೊಳಿಸಬಹುದು. ನಿಮಗೆ ಯಾವಾಗ ರಕ್ತದ ಒತ್ತಡ ಜಾಸ್ತಿ ಇದೆ ಎಂದು ಅನಿಸುತ್ತದೆ ವೇಳೆ ನೀವು ನಾವು ಹೇಳುವ ಕ್ರಮಗಳನ್ನು ಕೂಡಲೇ ಮಾಡಿ. ಮೂಲಕ ತಕ್ಷಣ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

1. ನಿಮಗೆ ರಕ್ತದೊತ್ತಡ ಜಾಸ್ತಿಯಾಗಿದೆ ಎಂದು ಅನಿಸುತ್ತಿದ್ದರೆ ಅಥವಾ ನಿಮ್ಮ ದೇಹದಲ್ಲಿ ರಕ್ತದೊತ್ತಡದಿಂದ ಏನಾದರೂ ಬದಲಾವಣೆ ಆಗಿದ್ದರೆ ಕೂಡಲೇ ವಿಶ್ರಾಂತಿ ತೆಗೆದುಕೊಳ್ಳಿ. ವಿಶ್ರಾಂತಿ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.

2. ನೀವು ಜನಸಂದಣಿಯಲ್ಲಿದ್ದು ನಿಮಗೆ ರಕ್ತದೊತ್ತಡವಾದ ಅನುಭವ ಆದರೆ ಕೂಡಲೆ ಜನಸಂದಣಿಯಿಂದ ದೂರ ಹೋಗಿ. ಅಂದರೆ ಕಡಿಮೆ ಜನರಿರುವ ಸ್ಥಳಕ್ಕೆ ಹೋಗಿ ರೆಸ್ಟ್ ಮಾಡಿ.

3.ನಿಮಗೆ ರಕ್ತದೊತ್ತಡದ ಅನುಭವ ಆದರೆ ಕೂಡಲೇ ಎಲ್ಲದರೂ ಹೋಗಿ ಕುಳಿತುಕೊಳ್ಳಿ. ಚೇರ್ ಅಥವಾ ನೆಲ ಆದರೂ ಪರವಾಗಿಲ್ಲ ಕುಳಿತುಕೊಂಡು ನಿಧಾನವಾಗಿ ಉಸಿರು ತೆಗೆದುಕೊಳ್ಳಿ.

4. ನಿಮಗೆ ರಕ್ತದೊತ್ತಡ ಹೆಚ್ಚಿದ ಅನುಭವ ಆದರೆ ನೀವು ಕೂಡಲೇ ತಾಜಾ ಗಾಳಿ ಸಿಗುವ ಸ್ಥಳಕ್ಕೆ ಹೋಗಿ. ಫ್ರೆಶ್ ಏರ್ ನಿಂದ ನಿಮ್ಮ ಮನಸ್ಸಿಗೂ ವಿಶ್ರಾಂತಿ ಸಿಗುತ್ತದೆ.

5. ನಿಮಗೆ ರಕ್ತದೊತ್ತಡ ಜಾಸ್ತಿಯಾಗಿದೆ ಎಂದು ಅನಿಸಿದರೆ ನೀವು ಕೂಡಲೇ ಉಸಿರಾಟ ನಡೆಸಿ. ವಿವಿಧ ರೀತಿಯಲ್ಲಿ ಉಸಿರಾಡಿ. ಇದರಿಂದ ನಿಮ್ಮ ಹೃದಯ ಬಡಿತ ಸಾಮಾನ್ಯ ಸ್ಥಿತಿಗೆ ಬರುತ್ತದೆ.

6. ನಿಮಗೆ ರಕ್ತದೊತ್ತಡದ ಅನುಭವ ಆದರೆ ನೀರು ಕುಡಿಯಿರಿ ಅಥವಾ ಜ್ಯೂಸ್ ಕುಡಿದರು ಪರವಾಗಿಲ್ಲ.

7. ನಿಮಗೆ ರಕ್ತದೊತ್ತಡ ಜಾಸ್ತಿಯಾಗಿದೆ ಎಂದು ಅನಿಸಿದರೆ ನೀವು ಕೂಡಲೇ ಕಣ್ಣನ್ನು ಮುಚ್ಚಿ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ಕೊಡಿ. ಯಾವುದೇ ಕಾರಣಕ್ಕೂ ಭಾವೋದ್ವೇಗಕ್ಕೆ ಒಳಗಾಗಬೇಡಿ. ಇವೆಲ್ಲ ಕೂಡಲೇ ನಿಮಗೆ ರಿಲೀಫ್ ನೀಡಬಹುದಾದರೂ ಪರಿಸ್ಥಿರಿಗೆ ಅನುಗುಣವಾಗಿರುತ್ತದೆ. ಹೀಗಾಗಿ ವೈದ್ಯರ ಸಲಹೆಯನ್ನು ಪಾಲಿಸುವುದುದು ಕೂಡ ಒಳ್ಳೆಯದು.