ಎಲ್ಲರ
ಅಡುಗೆ ಮನೆಯಲ್ಲಿ ಆಲೂಗಡ್ಡೆಗೆ ಪ್ರತ್ಯೇಕ ಜಾಗವಿದೆ. ಆಲೂಗಡ್ಡೆಯಿಂದ
ವೆರೈಟಿ ಅಡುಗೆ ಮಾಡಬಹುದು. ಸಾಂಬಾರ್ ನಿಂದ ಹಿಡಿದು ಬಜ್ಜಿಯವರೆಗೆ ಸಾಕಷ್ಟು ಅಡುಗೆಗೆ ನೆರವಾಗಬಲ್ಲ. ಖರೀದಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸ್ಬೇಕು.
ಅನೇಕರು
ಮೂಟೆಗಟ್ಟಲೆ ಆಲೂಗಡ್ಡೆಯನ್ನು ಖರೀದಿ ಮಾಡುತ್ತಾರೆ ಆದ್ರೆ ಖರೀದಿ ಮಾಡಿದ ಆಲೂಗಡ್ಡೆ ಮನೆಗೆ ತಂದಾಗ ನಾಲ್ಕು
ಐದು ದಿನಗಳಲ್ಲಿ
ಬಾಡಿ ಹೋಗುತ್ತದೆ. ಹಾಗಾಗಿ ಅಡುಗೆಯಲ್ಲಿ ಇಂಟರೆಸ್ಟ್ ಇದೆ ಎನ್ನುವವರು ಆಲೂಗಡ್ಡೆ ಬಗ್ಗೆಯೂ ಸ್ವಲ್ಪ ತಿಳಿದಿರಬೇಕು. ಎಂಥ ಆಲೂಗಡ್ಡೆ ತರಬೇಕು, ಆಲೂಗಡ್ಡೆಯನ್ನು ಹೇಗೆ ಸಂಗ್ರಹಿಸಿ ಇಡ್ಬೇಕು ಎಂಬುದನ್ನು ತಿಳಿದಿರಬೇಕು.
ಮೊದಲನೇಯದಾಗಿ
ಆಲೂಗಡ್ಡೆ ಖರೀದಿ:
ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಲೂಗಡ್ಡೆ ಸಿಗುತ್ತದೆ. ಹಾಗಂತ ಎಲ್ಲವನ್ನೂ ಖರೀದಿಸಲು ಯೋಗ್ಯವಲ್ಲ. ಅದನ್ನು ಖರೀದಿ ಮಾಡುವಾಗ ಏನೆಲ್ಲ ಗಮನಿಸಬೇಕು ಎಂಬುದನ್ನು ಇಲ್ಲಿ ಹೇಳ್ತೇವೆ.
ಆಲೂಗಡ್ಡೆಯನ್ನು ಖರೀದಿಸುವಾಗ ಕೈನಲ್ಲಿ ಮುಟ್ಟಿ
ನೋಡ್ಬೇಕು. ಏಕೆಂದರೆ ಮೃದುವಾಗಿದ್ದರೆ ಆಲೂಗಡ್ಡೆ ಹಾಳ ಆಗುತ್ತದೆ ಅದಕ್ಕೆ ಗಟ್ಟಿಯಾಗಿರುವ ಆಲೂಗಡ್ಡೆಯನ್ನು ಮಾತ್ರ ಖರೀದಿ ಮಾಡ್ಬೇಕು.
ಮೊಳಕೆಯೊಡೆದ
ಆಲೂಗಡ್ಡೆ ತರ್ಬೇಡಿ:
ನ್ಯಾಷನಲ್ ಕ್ಯಾಪಿಟಲ್ ಪಾಯಿಸನ್ ಸೆಂಟರ್ ಪ್ರಕಾರ, ಮೊಳಕೆಯೊಡೆದ ಆಲೂಗಡ್ಡೆಯನ್ನು ತಿನ್ನಬಾರದು. ಅಧ್ಯಯನಗಳ ಪ್ರಕಾರ, ಆಲೂಗಡ್ಡೆ ಮೊಳಕೆಯೊಡೆದಾಗ ಅದರ ಗ್ಲೈಕೋಲ್ಕಲಾಯ್ಡ್ ಅಂಶವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಆಲೂಗಡ್ಡೆ
ಬಣ್ಣ ಗಮನಿಸಿ:
ಆಲೂಗಡ್ಡೆ ಖರೀದಿಸುವಾಗ ನೀವು ಅದರ ಬಣ್ಣದ ಬಗ್ಗೆಯೂ ಗಮನ ನೀಡ್ಬೇಕು. ಹಸಿರಾಗಿರುವ ಆಲೂಗಡ್ಡೆಯನ್ನು ಖರೀದಿಸಲು ಹೋಗ್ಬಾರದು. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ.
ಈ
ಆಲೂಗಡ್ಡೆ ಖರೀದಿಸಬೇಡಿ:
ಅನೇಕ ಕಡೆ ಸ್ವಚ್ಛತೆ ಹೆಸರಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಆಲೂಗಡ್ಡೆ ಹಾಕಿರ್ತಾರೆ. ಅದು ನೋಡಲು ಸುಂದರವಾಗಿ ಕಾಣುತ್ತದೆ. ಹಾಗಾಗಿ ಅನೇಕರು ಇದನ್ನು ಖರೀದಿ ಮಾಡ್ತಾರೆ. ಆದ್ರೆ ಪ್ಲಾಸ್ಟಿಕ್ ಚೀಲದಲ್ಲಿರುವ ಆಲೂಗಡ್ಡೆಯಲ್ಲಿ ತೇವಾಂಶ ಸಂಗ್ರಹವಾಗಿರುವ ಸಾಧ್ಯತೆಯಿದೆ. ಇದ್ರಿಂದ ಆಲೂಗಡ್ಡೆ ಬೇಗ ಕೆಡುವ ಸಂಭವವಿರುತ್ತದೆ.
ಆಲೂಗಡ್ಡೆ ಸಿಹಿ ತೆಗೆಯೋದು ಸುಲಭ, ನಾವು ಹೇಳುತ್ತೇವೆ ಇಲ್ ಕೇಳಿ!
ಉತ್ತಮ ಗುಣಮಟ್ಟದ ಆಲೂಗಡ್ಡೆ ಖರೀದಿಸಿದ್ರೆ ಸಾಲದು, ಅದನ್ನು ಸಂಗ್ರಹಿಸುವುದು ಹೇಗೆ ಎಂಬುದು ತಿಳಿದಿರಬೇಕು. ಅನೇಕ ಬಾರಿ ಆಲೂಗಡ್ಡೆಯನ್ನು ಹಾಗೆಯೇ ಹೊರಗೆ ಇಟ್ಟಿರ್ತೇವೆ. ಅದು ಬೇಗ ಹಾಳಾಗುತ್ತದೆ. ಅನೇಕರು ಆಲೂಗಡ್ಡೆ ಖರೀದಿಸಿದ ನಂತರ ಅದನ್ನು ಸ್ವಚ್ಛವಾಗಿ ತೊಳೆದು ಸಂಗ್ರಹಿಸ್ತಾರೆ. ಇದು ಒಳ್ಳೆ ವಿಧಾನವಲ್ಲ. ನೀರಿನಲ್ಲಿ ಸ್ವಚ್ಛಗೊಳಿಸಿದಾಗ ತೇವಾಂಶ ಸೇರಿ ಆಲೂಗಡ್ಡೆ ಬೇಗ ಹಾಳಾಗುತ್ತದೆ. ಆಲೂಗಡ್ಡೆಯನ್ನು ಯಾವುದೇ ಬಾಕ್ಸ್ ಅಥವಾ ಕವರ್ ನಲ್ಲಿ ಮುಚ್ಚಿ ಇಡಬಾರದು ಹಾಗೂ ಎಂದಿಗೂ ಫ್ರಿಜ್ ನಲ್ಲಿ, ಬಿಸಿಲಿನಲ್ಲಿ ನೀರು ಬರುವ ಜಾಗದಲ್ಲಿ ಇಡಬೇಡಿ ಮತ್ತು ಆಲೂಗಡ್ಡೆಯನ್ನು ಇತರ ತರಕಾರಿಗಳೊಂದಿಗೆ ಎಂದಿಗೂ ಇಡಬೇಡಿ. ಉದಾಹರಣೆಗೆ, ಟೊಮ್ಯಾಟೊ, ಈರುಳ್ಳಿ ಸೇರಿದಂತೆ ಯಾವುದೇ ತರಕಾರಿ ಜೊತೆ ಇಡಬೇಡಿ.