ಗರ್ಭಿಣಿಯರು ಯೋಗ ಮಾಡುವುದರಿಂದ ಗರ್ಭಾವಸ್ಥೆಯಲ್ಲಿ ಕಾಡುವ ಬಿಪಿ, ಶುಗರ್ ಸಮಸ್ಯೆಗಳನ್ನು ತಡೆಗಟ್ಟಬಹುದು, ಅಲ್ಲದೆ ಸಹಜ ಹೆರಿಗೆಗೆ ಈ ಯೋಗಾಸನಗಳು ಸಹಾಯ ಮಾಡುತ್ತದೆ. ಹಾಗಾಗಿ ತುಂಬಾ ಗರ್ಭಿಣಿಯರು ಎಕ್ಸ್ಪರ್ಟ್ ಬಳಿಯ ಸಲಹೆ ಸೂಚನೆಯಂತೆ ಯೋಗಾಭ್ಯಾಸ ಮಾಡುತ್ತಾರೆ.
ಮೊದಲ ತ್ರೈ ಮಾಸಿಕದಲ್ಲಿ ಯೋಗ:
ಮೊದಲ ತ್ರೈ ಮಾಸಿಕದಲ್ಲಿ ತುಂಬಾ ಯೋಗಾಭಂಗಿಗಳನ್ನು ಮಾಡಬಾರದು. ಈ ಸಮಯದಲ್ಲಿ ವೈದ್ಯರು ಕೂಡ ಹೆಚ್ಚು ಓಡಾಡಬೇಡಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸೂಚಿಸುತ್ತಾರೆ. ಹಾಗಾಗಿ ಈ ಅವಧಿಯಲ್ಲಿ ಯಾವುದೇ ವ್ಯಾಯಾಮ ಅಥವಾ ಕಠಿಣ ಯೋಗಾ ಭಂಗಿಗಳನ್ನು ಅಭ್ಯಾಸ ಮಾಡದಿರುವುದು ಒಳ್ಳೆಯದು, ಇಲ್ಲಾ ನಾನು ಮಾಡಿದ್ದೇನೆ ಎಂದು ಕೆಲವರು ಹೇಳಬಹುದು, ವ್ಯಕ್ತಿಯಿಂದ ವ್ಯಕ್ತಿಗೆ ಶರೀರದ ಆರೋಗ್ಯ ಭಿನ್ನವಾಗಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಆದಷ್ಟೂ ಸುರಕ್ಷತೆ ಕಡೆಗೆ ಗಮನಹರಿಸಬೇಕು.
ಈ ಸಮಯದಲ್ಲಿ ಧ್ಯಾನ, ನಾಡಿ ಶುದ್ಧಿಯಂಥ ವ್ಯಾಯಾಮ ಮಾಡಬಹುದು. ಕಪಾಲಭಾತಿ ಈ ಬಗೆಯ ಉಸಿರಾಟದ ವ್ಯಾಯಾಮ ಮಾಡುವಂತಿಲ್ಲ. ಸ್ವಂತವಾಗಿ ಏನನ್ನೂ ಮಾಡಿದಿರಿ, ಯೋಗಾ ಎಕ್ಸ್ಪರ್ಟ್ ಇದರ ಬಗ್ಗೆ ಸಲಹೆ ನೀಡುತ್ತಾರೆ, ಅದನ್ನಷ್ಟೇ ಪಾಲಿಸಿ, ಟಿವಿ ನೋಡಿ, ಯೂಟ್ಯೂಬ್ ನೋಡಿ ಯೋಗಾ ಮಾಡಲು ಹೋಗದಿರಿ.
ಎರಡನೇ ತ್ರೈ ಮಾಸಿಕದಲ್ಲಿ ಯೋಗಾಭ್ಯಾಸ ಪ್ರಾರಂಭಿಸಬಹುದು, ಈ ಸಮಯದಲ್ಲಿ ವಾಂತಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುತ್ತದೆ, ಈ ಅವಧಿಯಲ್ಲಿ ಟ್ವಿಸ್ಟ್ ಮಾಡಬೇಡಿ, ಈ ಸಮಯದಲ್ಲಿ ಏನು ಮಾಡಬೇಕು ಎಂಬುವುದನ್ನು ಕೂಡ ವೈದ್ಯರನ್ನು ಕೇಳಿಯೇ ಮಾಡಬೇಕು.
ಮೂರನೇ ತ್ರೈ ಮಾಸಿಕ:
ಯೋಗ ಈ ಸಮಯದಲ್ಲಿ ಬಿಪಿ, ಮಧುಮೇಹದ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು ಹಾಗಾಗಿ ಈ ಅವಧಿಯಲ್ಲಿ ಅಧಿಕ ತಕ್ಕ ಯೋಗಾಭ್ಯಾಸ ಮಾಡಿಸುತ್ತಾರೆ, ಅಲ್ಲದೆ ಸಹಜ ಹೆರಿಗೆಗೆ ಕೂಡ ಕೆಲವೊಂದು ಭಂಗಿಗಳಿವೆ ಅದನ್ನು ಯೋಗಾ ಪರಿಣಿತರ ಸಲಹೆಯಂತೆ ಮಾಡಬಹುದು.
ಯೋಗ ಈ ಸಮಯದಲ್ಲಿ ಬಿಪಿ, ಮಧುಮೇಹದ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು ಹಾಗಾಗಿ ಈ ಅವಧಿಯಲ್ಲಿ ಅಧಿಕ ತಕ್ಕ ಯೋಗಾಭ್ಯಾಸ ಮಾಡಿಸುತ್ತಾರೆ, ಅಲ್ಲದೆ ಸಹಜ ಹೆರಿಗೆಗೆ ಕೂಡ ಕೆಲವೊಂದು ಭಂಗಿಗಳಿವೆ ಅದನ್ನು ಯೋಗಾ ಪರಿಣಿತರ ಸಲಹೆಯಂತೆ ಮಾಡಬಹುದು.
ಗರ್ಭಿಣಿಯರು ಎಲ್ಲಾ ಸಮಯದಲ್ಲಿ ಟ್ರೈ ಮಾಡಬಹುದಾದ ಸುರಕ್ಷಿತ ಯೋಗಾಭಂಗಿಗಳು
ಚಿಟ್ಟೆಯ ಪೋಸ್
ಬೆಕ್ಕು -ಹಸುವಿನ ಪೋಸ್
ವಜ್ರಾಸನ
ಮಾಲಾಸನ
ಚಿಟ್ಟೆಯ ಪೋಸ್
ಬೆಕ್ಕು -ಹಸುವಿನ ಪೋಸ್
ವಜ್ರಾಸನ
ಮಾಲಾಸನ