ಕಾಲಿಗೆ ಬೆಳ್ಳಿ ಕಾಲ್ಗೆಜ್ಜೆ ಧರಿಸಬೇಕು ಎನ್ನುವ ಸಂಪ್ರದಾಯದ ಹಿಂದಿದೆ ವೈಜ್ಞಾನಿಕ ಕಾರಣ

ಮನೆಯಲ್ಲಿ ಒಂದು ಪುಟ್ಟ  ಹೆಣ್ಣು ಮಗು ಇದ್ದರೆ ಅವಳ ಕಾಲಿಗೆ ಗೆಜ್ಜೆ ಹಾಕಬೇಕು ಅನ್ನಿಸುತ್ತದೆ, ಏಕೆಂದರೆ ಗಜ್ಜೆ ಕಟ್ಟಿಕೊಂಡು ಮಗು ಮನೆ ತುಂಬಾ ಓಡಾಡಲು ನೋಡಲು ತುಂಬಾ ಕುಷಿಯಾಗುತ್ತೆ ಹಾಗೂ ಕೇಳಲು ಹಿತವಾಗುತ್ತದೆ. ಅದರಂತೆ ಹೆಜ್ಜೆ ಹೆಣ್ಣಿನ ಅಲಂಕಾರಿಕ ವಸ್ತುಗಳಲ್ಲಿ ಒಂದು, ಅದು ಅವಳ ಕಾಲಿನ ಅಂದ ಹೆಚ್ಚಿಸುವುದು.

ಕಾಲ್ಗೆಜ್ಜೆ ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣಗಳು:
ಕಾಲ್ಗೆಜ್ಜೆ ಹಾಕಿದರೆ ನೋವು ನಿವಾರಿಸುತ್ತೆ, ಆಗಾಗ ಕಾಲುನೋವು ಮತ್ತು ಮರಗಟ್ಟಿದಂತೆ ಅನಿಸುವುದು ಇವೆಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತದೆ. ಕಾಲಿನ ಹಿಮ್ಮಡಿಯಲ್ಲಿ ತುಂಬಾ ನೋವು ಕಂಡು ಬರುತ್ತಿದ್ದರೆ ಬೆಳ್ಳಿಯ ಕಾಲ್ಗೆಜ್ಜೆ ಬಳಸಿ, ಏಕೆಂದರೆ ನೋವು ಕಡಿಮೆ ಮಾಡುತ್ತದೆ ಹಾಗೂ ದೇಹಕ್ಕೆ ಧನಾತ್ಮಕ ಶಕ್ತಿ ಹರಿಸುತ್ತದೆ, ಕಾಲುಗಳಲ್ಲಿ ಊತ ಇದ್ದರೆ ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಬೆಳ್ಳಿ ಕಾಲ್ಗೆಜ್ಜೆ ಬ್ಯಾಕ್ಟಿರಿಯಾಗಳ ವಿರುದ್ಧವೂ ಹೋರಾಡುತ್ತೆ.

ಆ್ಯಂಟಿಬ್ಯಾಕ್ಟಿರಿಯಾ ಪ್ರಯೋಜನಗಳು:
ಬೆಳ್ಳಿಯ ಕಾಲ್ಗೆಜ್ಜೆ ಬೆಳ್ಳಿಯ ಅಯಾನ್‌ಗಳನ್ನು ಉತ್ಪತ್ತಿ ಮಾಡುತ್ತವೆ, ಇದು ದೇಹವು ಬ್ಯಾಕ್ಟಿರಿಯಾಗಳ ವಿರುದ್ದ ಹೋರಾಡವ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಹಿಂದೆಯೆಲ್ಲಾ ಸಮುದ್ರಯಾನ ಮಾಡುವವರು ಬೆಳ್ಳಿ ಹಾಗೂ ರಮ್‌ ತೆಗೆದುಕೊಂಡು ಹೋಗುತ್ತಿದ್ದರು. ನೀರಿಗೆ ಇವೆರಡು ಹಾಕಿದರೆ ಆ ಶುದ್ಧ ನೀರು ಸಿಗುತ್ತಿತ್ತು.

ಸ್ತ್ರೀ ಸಂಬಂಧಿ ಸಮಸ್ಯೆ ಹೋಗಲಾಡಿಸುತ್ತೆ:
ಬೆಳ್ಳಿಯ ಕಾಲ್ಗೆಜ್ಜೆ ದೇಹದಲ್ಲಿ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ಸಹಕಾರಿ. ಅನಿಯಮಿತ ಮುಟ್ಟಿನ ಸಮಸ್ಯೆ, ಒಬೆಸಿಟಿ ಮುಂತಾದ ತೊಂದರೆಗಳನ್ನು ತಡೆಗಟ್ಟುತ್ತೆ. ಗರ್ಭಿಣಿಯರು, ಬಾಣಂತಿಯರು ಬೆಳ್ಳಿಯ ಕಾಲ್ಗೆಜ್ಜೆ ಧರಿಸಿದರೆ ಒಳ್ಳೆಯದು.

ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ದೊರೆಯುವ ಇತರ ಪ್ರಯೋಜನಗಳು:
*ದೇಹದ ಉಷ್ಣತೆ ಕಡಿಮೆ ಮಾಡುತ್ತೆ. ಅಲ್ಲದೆ ಕೋಪವನ್ನೂ ಕಡಿಮೆ ಮಾಡುವುದು.
*ಮನೆಯಲ್ಲಿ 
ಸ್ತ್ರೀಯರು ಬೆಳ್ಳಿ ಕಾಲ್ಗಜ್ಜೆ ಧರಿಸಿ ಓಡಾಡುತ್ತಿದ್ದರೆ ಲಕ್ಷ್ಮಿಯು ಆಕರ್ಷಿತಳಾಗುತ್ತಾಳೆ, ಇದರಿಂದ ಮನೆಗೆ ಒಳ್ಳೆಯದು ಎಂದು ಹೇಳಲಾಗುವುದು.

ಚಿನ್ನದ ಕಾಲ್ಗೆಜ್ಜೆ ಧರಿಸಬಹುದೇ?
ಹಿಂದೂ ಸಂಪ್ರದಾಯ ಹಾಗೂ ನಂಬಿಕೆ ಪ್ರಕಾರ ಚಿನ್ನವನ್ನು ಸೊಂಟದ ಮೇಲೆ ಧರಿಸಬೇಕು, ಸೊಂಟದ ಕೆಳಗಡೆ ಧರಸಿಬಾರದು ಎಂದು ಹೇಳುತ್ತಾರೆ. ಚಿನ್ನದ ಕಾಲ್ಗೆಜ್ಜೆ ಅಥವಾ ಕಾಲುಂಗುರ ಧರಿಸಬಾರದು ಎಂದು ಹಿರಿಯರು ಹೇಳುತ್ತಾರೆ. ಚಿನ್ನ ಲಕ್ಷ್ಮಿ, ಆದ್ದರಿಂದ ಆದನ್ನು ಕಾಲಿಗೆ ಧರಿಸಬಾರದು ಎನ್ನುತ್ತಾರೆ. ವೈಜ್ಞಾನಿಕವಾಗಿ ನೋಡುವುದಾದರೆ ಚಿನ್ನ ಕಾಲಿಗೆ ದೇಹದ ಉಷ್ಣತೆ ಹೆಚ್ಚುವುದು, ಅದೇ ಬೆಳ್ಳಿ ದೇಹವನ್ನು ತಂಪಾಗಿ ಇಡುವುದು.