ಗರ್ಭಿಣಿಯಾಗಿದ್ದಾಗ ಸ್ತನಗಳ ಆರೈಕೆ: ಸ್ತನಗಳ ಮಸಾಜ್‌ ಎದೆಹಾಲಿನ ಉತ್ಪತ್ತಿಗೆ ಸಹಕಾರಿಯೇ?


ಗರ್ಭಿಣಿಯಾದ ಸಂದರ್ಭದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳು, ಹೆರಿಗೆ ನೋವು ಬಹಳ ಕಷ್ಟಕರ ಎಂದು ಅನೇಕರು ಹೇಳಿರುತ್ತಾರೆ. ಆದರೆ ಇವುಗಳ ಜೊತೆಯಲ್ಲಿ ಮಗುವಿನ ಸ್ತನಪಾನ ಮಾಡಿಸುವುದು ಎಷ್ಟೊಂದು ಸವಾಲಿನ ಕೆಲಸ ಎನ್ನುವುದು ಅನೇಕರಿಗೆ ತಿಳಿದಿಲ್ಲ.

ಜಗತ್ತಿನಲ್ಲಿ ಸರಿ ಸುಮಾರು 50 ಪ್ರತಿಶತಕ್ಕೂ ಅಧಿಕ ತಾಯಂದಿರು ಮಗುವಿಗೆ ಹಾಲುಣಿಸುವುದು ಹೆರಿಗೆ ನೋವಿಗಿಂತಲೂ ಕಷ್ಟಕರ ಕೆಲಸ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸ್ತನಪಾನ ಯಾಕೆ ಕಷ್ಟಕರ ಎನಿಸುತ್ತದೆ..? ಮಹಿಳೆಯರು ಗರ್ಭಿಣಿಯಾದ ಸಂದರ್ಭದಲ್ಲಿ ಯಾವ ವಿಚಾರವನ್ನು ನಿರ್ಲಕ್ಷಿಸಿದ ಪರಿಣಾಮ ಅವರಿಗೆ ರೀತಿ ತೊಂದರೆ ಉಂಟಾಗುತ್ತದೆ..? ಸ್ತನಪಾನ ಸುಲಭವಾಗಿಸಲು ನಾವೇನು ಮಾಡಬೇಕು ಎಂಬುದಕ್ಕೆ ಮಾಹಿತಿ ತಿಳಿದುಕೊಳ್ಳೋಣ:

ನೋವು ರಹಿತ ಸ್ತನಪಾನಕ್ಕಾಗಿ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಒಂದೇ ಒಂದು ಮಾರ್ಗವೆಂದರೆ ಸ್ತನಗಳ ಮಸಾಜ್​. ಇದನ್ನು ನೀವು ಗರ್ಭಿಣಿಯಾದ ದಿನಗಳಿಂದಲೇ ಆರಂಭಿಸಬೇಕು. ಇವುಗಳು ಸ್ತನಗಳಲ್ಲಿ ಮುಚ್ಚಿರುವ ನಾಳಗಳು ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಸ್ತನದ  ತೊಟ್ಟುಗಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಸಾಜ್ಮಾಡಿಕೊಳ್ಳುವುದರಿಂದ ನಿಮಗೆ ಭವಿಷ್ಯದಲ್ಲಿ ಸ್ತನಪಾನದ ನೋವು ಅಷ್ಟೊಂದು ಕಾಡುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ರಾಸಾಯನಿಕ ಕ್ರೀಮ್ಗಳು ಅಥವಾ ಮಷಿನ್ಗಳನ್ನು ಖರೀದಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ಆರ್ಯುವೇದಿಕ ಪದಾರ್ಥಗಳನ್ನು ಬಳಕೆ ಮಾಡಿ ನೀವು ಸ್ತನ ಮಸಾಜ್ಮಾಡಿಕೊಳ್ಳಬಹುದಾಗಿದೆ.

ಸ್ತನ ಮಸಾಜ್ಮಾಡುವುದು ಸುರಕ್ಷಿತವೇ..?
ಸ್ತನ ಮಸಾಜ್ಎನ್ನುವುದು ಸ್ತನ್ಯಪಾನಕ್ಕೆ ಪೂರಕವೇ ಹೊರತು ಮಾರಕವಲ್ಲ. ನಿಮ್ಮ ಸ್ತನಗಳನ್ನು ಅತ್ಯಂತ ನಯವಾಗಿ ಮಸಾಜ್ಮಾಡಿಕೊಳ್ಳುವುದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ನೆನಪಿಡಿ ಅತ್ಯಂತ ಗಟ್ಟಿಯಾಗಿ ಸ್ತನ ಮಸಾಜ್ಮಾಡಿಕೊಳ್ಳಬೇಡಿ. ಅತ್ಯಂತ ಕಡಿಮೆ ಒತ್ತಡದಲ್ಲಿ ಸ್ತನ ಮಸಾಜ್ಮಾಡುವುದರಿಂದ ಯಾವುದೇ ರೀತಿಯ ಹಾನಿ ಇರುವುದಿಲ್ಲ.

ಸ್ತನ
ಮಸಾಜ್ನಿಂದ ಏನೇನು ಲಾಭ..?
ಹೆರಿಗೆಯಾದ ಬಳಿಕ ಎಷ್ಟೇ ನೋವಾದರೂ ಸ್ತನಪಾನ ಮಾಡುವುದು ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಅತ್ಯಮೂಲ್ಯ. ಆದರೆ ಕೆಲವೊಮ್ಮೆ ಅತಿಯಾದ ನೋವು ನಿಮ್ಮನ್ನು ಸ್ತನಪಾನ ಮಾಡದಂತೆ ತಡೆಯಬಹುದು. ಇಂತಹ ಸಂದರ್ಭಗಳಲ್ಲಿ ಸ್ತನಗಳಿಗೆ ನೀವು ಮಾಡಿಕೊಳ್ಳುವ ಮೃದುವಾದ ಮಸಾಜ್​​ ನಿಮ್ಮ ಸ್ತನದಲ್ಲಿ ಉರಿಯಾಗುವುದನ್ನು ತಪ್ಪಿಸುತ್ತದೆ. ಮುಚ್ಚಿ ಹೋಗಿರುವ ನಾಳಗಳನ್ನು ಹಾಗೂ ಮಾಸ್ಟೈಟಿಸ್ನಂತಹ ಸೋಂಕುಗಳಿಂದ ನಿಮ್ಮನ್ನು ದೂರ ಇರಿಸುತ್ತದೆ. ಅದರಲ್ಲೂ ಸಿಜೇರಿಯನ್ಮೂಲಕ ಮಗು ಪಡೆದ ತಾಯಂದಿರಿಗೆ ಆಪರೇಷನ್ ನೋವಿನ ಜೊತೆಯಲ್ಲಿ ನೋವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಸ್ತನಪಾನಕ್ಕೆ ಮಸಾಜ್ಎನ್ನುವುದು ಖಂಡಿತ ಒಂದು ಚಿಕಿತ್ಸೆಯಲ್ಲ. ಆದರೆ ಇದು ನಿಮ್ಮ ಸ್ತನಗಳನ್ನು ಆರೈಕೆ ಮಾಡಿಕೊಳ್ಳುವ ಮಾರ್ಗವಾಗಿದೆ. ಗರ್ಭಿಣಿಯಾದ ಸಂದರ್ಭದಲ್ಲಿ ನೀವು ವಾಸೆಲಿನ್ಬಳಕೆ ಮಾಡಿ ಮಗು ಜನಿಸಿದ ಬಳಿಕ ನೀವು ಕೊಬ್ಬರಿ ಎಣ್ಣೆಯನ್ನು ಬಳಸಿ ಮಸಾಜ್ಮಾಡಬಹುದಾಗಿದೆ. ಮಸಾಜ್ಮಾಡುವ ಮುನ್ನ ವಿಚಾರಗಳು ನಿಮ್ಮ ಗಮನದಲ್ಲಿ ಇರಲಿ :

ಕೈ ತೊಳೆಯದೇ ಸ್ತನ ಮಸಾಜ್ಬೇಡ:
ನವಜಾತ ಶಿಶುಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಹೀಗಾಗಿ ನೀವು ಸ್ವಚ್ಛವಲ್ಲದ ಕೈಗಳಿಂದ ನಿಮ್ಮ ಸ್ತನ ಮಸಾಜ್ಮಾಡಿ ಬಳಿಕ ಅದೇ ಸ್ತನದಿಂದ ನಿಮ್ಮ ಮಗು ಹಾಲು ಕುಡಿದರೆ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಹೀಗಾಗಿ ಚೆನ್ನಾಗಿ ಕೈ ತೊಳೆದು ಬಳಿಕವೇ ಸ್ತನ ಮಸಾಜ್ಮಾಡಿಕೊಳ್ಳಿ.

ರಾಸಾಯನಿಕಗಳ ಬಳಕೆ ಬೇಡ:
ಸ್ತನ ಮಸಾಜ್ಗೆಂದೇ ಮಾರುಕಟ್ಟೆಯಲ್ಲಿ ಸಾಕಷ್ಟು ಕ್ರೀಂಗಳು, ತೈಲಗಳು ಲಭ್ಯವಿದೆ. ಆದರೆ ಇವುಗಳಲ್ಲಿ ರಾಸಾಯನಿಕಗಳ ಬಳಕೆ ಇರುವುದರಿಂದ ಇದು ಕೂಡ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಮನೆಯಲ್ಲೇ ತಯಾರಿಸಿದ ಕೊಬ್ಬರಿ ಎಣ್ಣೆ ಸ್ತನ ಮಸಾಜ್ಗೆ ಸೂಕ್ತ ಎಂದು ಹೇಳಬಹುದು.

ವರ್ತುಲಾಕಾರದಲ್ಲಿಯೇ ಮಸಾಜ್ಮಾಡಿ:
ಮಗುವಿಗೆ ಹಾಲುಣಿಸುವ ಮುನ್ನ ಅತ್ಯಂತ ನಯವಾಗಿ, ಸ್ವಲ್ಪವೂ ಒತ್ತಡ ಹಾಕಿಕೊಳ್ಳದೇ ನಿಮ್ಮ ಸ್ತನಗಳ ಮೇಲೆ ವರ್ತುಲಾಕಾರದಲ್ಲಿ ಕೈಯಾಡಿಸುವ ಮೂಲಕ ಸ್ತನ ಮಸಾಜ್ಮಾಡಿಕೊಳ್ಳಿ. ನಿಮ್ಮ ಭುಜಗಳಿಗೆ ಮಸಾಜ್ಮಾಡಿಕೊಳ್ಳುವ ರೀತಿಯಲ್ಲಿ ಬಲವಾಗಿ ಒತ್ತಿಕೊಳ್ಳುವುದು ಬೇಡ.

ಐಸ್ಪ್ಯಾಕ್ಗಳನ್ನು ಬಳಸಿ:
ಕೆಲವರಿಗೆ ಸ್ತನಗಳಲ್ಲಿ ಅತೀವ ನೋವಿರುತ್ತದೆ. ಸ್ಪರ್ಶಿಸಲೂ ಆಗದಂತಹ ಪರಿಸ್ಥಿತಿ ಇರುತ್ತದೆ. ಇಂಥಾ ಸಂದರ್ಭಗಳಲ್ಲಿ ನೀವು ಮೊದಲು ಐಸ್ಪ್ಯಾಕ್ನ್ನು ನಿಮ್ಮ ಸ್ತನದ ಮೇಲಿಟ್ಟುಕೊಂಡು ಬಳಿಕ ಸ್ತನ ಮಸಾಜ್ ಮಾಡಿಕೊಳ್ಳುವುದರಿಂದ ನಿಮಗೆ ಸ್ವಲ್ಪ ಆರಾಮದಾಯಕ ಎನಿಸುತ್ತದೆ.