ಕೆಲವರಿಗೆ ಬೆಂಡೆಕಾಯಿ ಪಲ್ಯ ಅಂದರೆ ಅಷ್ಟೋಂದು ಇಷ್ಟವಾಗುವುದಿಲ್ಲಾ. ತಿನ್ನುವಾಗ ನೊಳಿ ನೊಳಿ ಅನ್ಸುತ್ತೆ ಹಾಗಾಗಿ ತಿನ್ನಲು ರುಚಿ ಆಗುವುದಿಲ್ಲಾ. ಬೆಂಡೆಕಾಯಿ ಪಲ್ಯ ತಿನ್ನದಿದ್ದರೆ ಅದರ ಮಸಾಲ ಫ್ರೈ ರೆಸಿಪಿ ಮಾಡಿಕೊಂಡಿ ತಿನ್ನಿ.
ಬೆಂಡೆಕಾಯಿ ಪಲ್ಯ ಅನೇಕ
ರೀತಿಯಲ್ಲಿ ಮಾಡಬಹುದು. ನಾವಿಲ್ಲಿ ಬೆಂಡೆಕಾಯಿಯನ್ನ ಇಷ್ಟಪಡದವರು ಕೂಡ ತಿನ್ನುವಂಥ ಒಂದು ಸುಲಭವಾದ, ಆರೋಗ್ಯಕರವಾದ ಹಾಗೂ ರುಚಿಕರವಾದ
ರೆಸಿಪಿ ನೀಡಿದ್ದೇವೆ. ಇದನ್ನೊಮ್ಮೆ ಮನೆಯಲ್ಲಿಯೇ ಟ್ರೈ ಮಾಡಿ, ಮತ್ತೆ ಮತ್ತೆ ಮಾಡಿಕೊಂಡು ತಿಂತೀರಾ.
* ಮೊದಲು ಬೆಂಡೆಕಾಯಿ ತೊಳೆದು, ಒರೆಸಿ. ಅದರಲ್ಲಿ ನೀರಿನಂಶ ಇರಬಾರದು. ಇಲ್ಲದಿದ್ದರೆ ಅದು ಕ್ರಿಸ್ಪಿ
ಆಗುವುದಿಲ್ಲ.
* ಈಗ ಅದನ್ನು ಉದ್ದವಾಗಿ, ಎರಡು ಭಾಗ ವಾಗಿ ಕತ್ತರಿಸಿ.
* ಬೇಕಾಗುವ ಸಾಮಗ್ರಿಗಳು:
15-20 ಬೆಂಡೆಕಾಯಿ, ಅರ್ಧ ಚಮಚ ಅರಿಶಿಣ ಪುಡಿ, ಅರ್ಧ ಚಮಚ ಖಾರದ ಪುಡಿ, ಅರ್ಧ ಚಮಚ ಕೊತ್ತಂಬರಿ ಪುಡಿ,
1/4 ಚಮಚ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಎಣ್ಣೆ.
ಮಾಡುವ ವಿಧಾನ:
* ಕತ್ತರಿಸಿದ ಬೆಂಡೆಕಾಯಿಯನ್ನ ದೊಡ್ಡ ಬೌಲ್ನಲ್ಲಿ ಹಾಕಿ.
* ಈಗ ಬೌಲ್ ಗೆ ಮಸಾಲೆಗೆ ಸಾಮಗ್ರಿ ಹಾಗೂ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ.
* ಈಗ ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ ಅದು ಕುದಿದ ನಂತರ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಕರಿಯಿರಿ.
ಚಿಪ್ಸ್ ತರ ಗರಿಗರಿಯಾಗಿ ಕರಿದರೆ ಮಸಾಲಾ ಬೆಂಡಿ ಫ್ರೈ ರೆಡಿ.