ಹಣ್ಣು ದಿನಕ್ಕೊಂದು ತಿಂದರೆ ಆರೋಗ್ಯವಾಗಿ ಇರುತ್ತೇವೆ. ಅದರಲ್ಲೂ ಸೇಬು ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ವ್ಯಕ್ತಿಯ ರೋಗನಿರೋಧಕ ಶಕ್ತಿ ಹೆಚ್ಚಾಗುವ ಜೊತೆಗೆ ಸದೃಢ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಸೇಬು ಹಣ್ಣಿನಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಕಾರ್ಬೋಹೈಡ್ರೇಟ್ಗಳು ಸಮೃದ್ಧವಾಗಿವೆ. ಉತ್ತಮ ಆರೋಗ್ಯಕ್ಕಾಗಿ ಅನೇಕರು ಸೇಬು ಹಣ್ಣನ್ನು ತಿನ್ನುತ್ತಾರೆ. ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾರೆ. ಮತ್ತೆ ಕೆಲವರು ರಾತ್ರಿ ಮಲಗುವ ಮೊದಲು ಸೇಬು ಹಣ್ಣನ್ನು ತಿನ್ನುತ್ತಾರೆ. ಇನ್ನು ಕೆಲವರು ಮಧ್ಯಾಹ್ನ ಸೇಬು ಹಣ್ಣನ್ನು ತಿನ್ನುತ್ತಾರೆ.
ಊಟವಾದ್ಮೇಲೆ ಹಣ್ಣು ತಿನ್ಬೇಕು ಎಂಬ ಒಂದು ಅಲಿಖಿತ ನಿಯಮವಿದೆ. ಊಟದ ನಂತರ ಸೇಬು ಹಣ್ಣು ತಿನ್ನೋದು ಎಷ್ಟು ಸರಿ? ಸೇಬು ಹಣ್ಣಿನ ಪೌಷ್ಟಿಕಾಂಶ ಸಂಪೂರ್ಣವಾಗಿ ದೇಹ ಸೇರುತ್ತಾ ಎಂಬೆಲ್ಲ ಪ್ರಶ್ನೆ ಕಾಡೋದು ಸಹಜ. ನಾವಿಂದು ಸೇಬು ಹಣ್ಣನ್ನು ಯಾವಾಗ ಸೇವನೆ ಮಾಡ್ಬೇಕು. ಹಾಗೆ ಊಟದ ನಂರ ಸೇಬು ಸೇವನೆ ಎಷ್ಟು ಪರಿಣಾಮಕಾರಿ ಎಂಬುದನ್ನು ಹೇಳ್ತೇವೆ.
ದೇಹವು ಸೇಬಿನಲ್ಲಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳನ್ನು ಹೀರಿಕೊಳ್ಳುತ್ತದೆ. ನಿದ್ರೆ ಅಥವಾ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಅವಶ್ಯಕವಾಗಿ ಸೇಬು ಹಣ್ಣನ್ನು ತಿನ್ನಬೇಕು. ಮಲಬದ್ಧತೆ ಸಮಸ್ಯೆಯಿರುವವರಿಗೂ ಸೇಬು ಹಣ್ಣು ಒಳ್ಳೆಯದು. ಸೇಬು ಹಣ್ಣು ಜೀರ್ಣಾಂಗ ಕ್ರಿಯೆಯನ್ನು ಸುಧಾರಿಸುತ್ತದೆ. ಸೇಬು ಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದು ಕೂಡ ಹೆಚ್ಚು ಪ್ರಯೋಜನಕಾರಿ. ಸೇಬು ಹಣ್ಣನ್ನು ಸ್ವಚ್ಛಗೊಳಿಸಿ ನಂತ್ರ ಸೇವನೆ ಮಾಡಬೇಕಾಗುತ್ತದೆ.