ಮಕ್ಕಳ ಕೆಲವೊಂದು ಅಭ್ಯಾಸ ಮುಜುಗರ ತರಿಸುತ್ತದೆ. ಆದ್ರೆ ಮಕ್ಕಳಿಗೆ ಬೈದ್ರೆ ಯಾವುದೇ ಪ್ರಯೋಜನವಿಲ್ಲ. ಪಾಲಕರಾದವರು ತಾಳ್ಮೆಯಿಂದ ಸಮಸ್ಯೆ ಬಗೆಹರಿಸಬೇಕಾಗುತ್ತದೆ.
ಪ್ರತಿ ದಿನ ಮಕ್ಕಳ ವರ್ತನೆ, ಸ್ವಭಾವದಲ್ಲಿ ನಾವು ಬದಲಾವಣೆ ಕಾಣಬಹುದು. ಕೆಲ ಮಕ್ಕಳ ಬೆಳವಣಿಗೆ ಬೇಗ ಆಗುತ್ತೆ. ಮತ್ತೆ ಕೆಲ ಮಕ್ಕಳ ಬೆಳವಣಿಗೆ ನಿಧಾನವಾಗಿ ಆಗುತ್ತದೆ. ಹಾಗೆಯೇ ಮಕ್ಕಳು ಮೂರು ನಾಲ್ಕು ತಿಂಗಳಿರುವಾಗ್ಲೇ ಕೈ ಬೆರಳನ್ನು ಬಾಯಿಗೆ ಹಾಕಿಕೊಳ್ಳಲು ಶುರು ಮಾಡ್ತಾರೆ. ಆರಂಭದಲ್ಲಿ ಇದು ಚೆನ್ನಾಗಿಯೇ ಕಾಣುತ್ತದೆ. ಆದ್ರೆ ದಿನ ಕಳೆದಂತೆ ಮಕ್ಕಳಿಗೆ ಇದೊಂದು ಅಭ್ಯಾಸವಾಗಿ ಬಿಡುತ್ತದೆ. ಇದನ್ನು ಬಿಡಿಸೋದು ಪಾಲಕರಿಗೆ ಕಷ್ಟವಾಗುತ್ತದೆ. ಸಾಮಾನ್ಯವಾಗಿ ಮೂರು ವರ್ಷಗಳವರೆಗೆ ಮಕ್ಕಳು ಕೈ ಬೆರಳನ್ನು ಬಾಯಿಗೆ ಹಾಕಿದ್ರೆ ಅದನ್ನು ಸಾಮಾನ್ಯ ಎನ್ನಬಹುದು.
ಮೂರು ವರ್ಷದ ನಂತರವು ಮಕ್ಕಳು ಕೈ ಬೆರಳನ್ನು ಬಾಯಿಗೆ ಹಾಕ್ತಿದ್ದರೆ ಅದು ಸಹಜವೆನ್ನಿಸುವುದಿಲ್ಲ. ನೋಡಲು ಕೂಡ ವಿಚಿತ್ರವೆನ್ನಿಸುತ್ತದೆ. ಮಕ್ಕಳ ಆರೋಗ್ಯಕ್ಕೆ ಇದು ಹಾನಿಕಾರಕವೂ ಹೌದು. ಮಕ್ಕಳು ದೊಡ್ಡವರಾಗ್ತಿದ್ದಂತೆ ಅನೇಕ ವಸ್ತುಗಳನ್ನು ಮುಟ್ತಾರೆ. ಆದ್ರೆ ಕೈ ತೊಳೆಯದೆ ಅದೇ ಕೈಯನ್ನು ಬಾಯಿಗೆ ಹಾಕ್ತಾರೆ. ಇದರಿಂದ ಬ್ಯಾಕ್ಟೀರಿಯಾಗಳು ದೇಹ ಸೇರುತ್ತವೆ. ಆಗಾಗಾ ಅನಾರೋಗ್ಯ ಸಮಸ್ಯೆ ಮಕ್ಕಳನ್ನು ಕಾಡಲು ಶುರು ಮಾಡುತ್ತದೆ. ಇದಲ್ಲದೆ ಇದು ಮಕ್ಕಳ ಮಾನಸಿಕ ಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳು
ಕೈ ಬೆರಳು ಬಾಯಿಗೆ ಹೋಗ್ತಿದ್ದರೆ ಆರಂಭದಲ್ಲಿಯೇ ಅದನ್ನು ಬಿಡಿಸುವುದು ಉತ್ತಮ.
ಒಂದು ವೇಳೆ ಅದು ಸಾಧ್ಯವಾಗಿಲ್ಲ ಎನ್ನುವ ಪಾಲಕರು, ಈಗಲಾದ್ರೂ ಮಕ್ಕಳ ಈ ಅಭ್ಯಾಸ ಬಿಡಿಸುವ ಪ್ರಯತ್ನ ಮಾಡಿ.
ನಾವಿಂದು ಕೈ ಬೆರಳನ್ನು ಬಾಯಿಗೆ ಹಾಕುವ ಮಕ್ಕಳ ಕೆಟ್ಟ ಅಭ್ಯಾಸ ಬಿಡಿಸಲು ಕೆಲ ಟ್ರಿಕ್ಸ್ ಹೇಳ್ತೇವೆ.