ಕೆಲವರಿಗೆ ಸಿಟ್ ಮಾತ್ರ ತಡೆಯೋಕೆ ಆಗಾಲ್ಲಾ ಅನ್ನೋರು ಇದನ್ನು ಓದಿ

ಕೆಲವು ದಂಪತಿಗಳ ಮಧ್ಯೆ ಜಗಳವಾಗುವುದು ಸಹಜ. ಆದರೆ ಜಗಳ ಒಮ್ಮೊಮ್ಮೆ ಅತೀರೆಗಕ್ಕೆ ಹೋಗುವುದೂ ಇರುತ್ತದೆ. ಜಗಳ ರಾಜಿಯಲ್ಲಿ ಕೊನೆಯಾಗದೆ ಪರಸ್ಪರ ದೂರವಾಗುವಷ್ಟರ ಮಟ್ಟಿಗಿನ ಅನಾಹುತವನ್ನು ತಂದೊಡ್ಡುತ್ತದೆ.

ದಂಪತಿಗಳ ಜಗಳವೂ ಒಂದು ಮಿತಿಯಲ್ಲಷ್ಟೇ ಇರಬೇಕು ಅಥವಾ ಕೋಪ ಹದವಾಗಿರಬೇಕು. ಹೆಚ್ಚು ಕೋಪಿಷ್ಠರಾಗಿದ್ದಷ್ಟೂ ಜಗಳವೂ ಸಾಮಾನ್ಯವಾಗಿ ಹೆಚ್ಚುತ್ತದೆ. ಹೀಗಾಗಿ, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.

ಪತಿ-ಪತ್ನಿ ಅನಗತ್ಯವಾಗಿ ಫೈಟ್ ಮಾಡುತ್ತಲೇ ಇರಬೇಕೆಂದಿಲ್ಲ. ವಾದ-ವಾಗ್ವಾದದಲ್ಲಿ ನಿರತರಾಗಬೇಕೆಂದಿಲ್ಲ. ಗುಣ ಸಂಬಂಧದಲ್ಲಿ ಬಿರುಕು ಮೂಡಿಸಬಲ್ಲದು. ಹೀಗಾಗಿ, ಕೋಪವನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಕೆಲವು ಮಾರ್ಗಗಳನ್ನು ಅನುಸರಿಸಬಹುದು.

ಕೋಪದ ಭಾವನೆಯನ್ನು ನಿಭಾಯಿಸಲು ಮೊದಲಿಗೆ ಮಾನಸಿಕವಾಗಿ ಸಿದ್ಧರಾಗಬೇಕು. ಅಂದರೆ, ಪ್ರಜ್ಞಾಪೂರ್ವಕವಾಗಿ ಕೆಲವು ವರ್ತನೆಗಳನ್ನು ನಿಮ್ಮದಾಗಿಸಿಕೊಳ್ಳಬೇಕು ಹಾಗೂ ಕೆಲವು ಕೆಲಸಗಳನ್ನು ಮಾಡಬೇಕು.

ಪ್ರತಿದಿನ ವ್ಯಾಯಾಮ:
ವ್ಯಾಯಾಮಕ್ಕೂ ಕೋಪಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎನಿಸಬಹುದು. ಕೋಪ, ಹತಾಶೆಯಂತಹ ಋಣಾತ್ಮಕ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ದೈಹಿಕ ವ್ಯಾಯಾಮ ಅತ್ಯಂತ ಅಗತ್ಯ. ದಿನವೂ ದೈಹಿಕ ಚಟುವಟಿಕೆ ಮಾಡುವುದರಿಂದ ಮನಸ್ಸು ಹಾಗೂ ದೇಹದ ನಡುವೆ ಸಮತೋಲನ ಸೃಷ್ಟಿಯಾಗುತ್ತದೆ. ವ್ಯಾಯಾಮ ಮಾಡಿದಾಗ ಖುಷಿಯ ಹಾರ್ಮೋನ್ ಡೊಪಮೈನ್  ಬಿಡುಗಡೆಯಾಗುತ್ತದೆ. ಇದರಿಂದ ಒತ್ತಡ ನಿವಾರಣೆಯಾಗುತ್ತದೆ. ನಿಮಗೆ ಕೋಪ ಬಂದಾಗ ವ್ಯಾಯಾಮ ಮಾಡಿನೋಡಿ, ಒತ್ತಡ ನಿವಾರಣೆಯಾಗಿ ಕೋಪ ಕರಗುತ್ತದೆ. ಕೋಪ ಕಡಿಮೆಯಾಗಿ ಅಂತರಾಳದಿಂದ ಖುಷಿ ಮೂಡುವಾಗ ಸಂಬಂಧವೂ ಸುಧಾರಣೆಯಾಗುತ್ತದೆ. ಮಿದುಳಿನಲ್ಲಿ ಡೊಪಮೈನ್ ಉತ್ತಮ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದ್ದರೆ ಹಲವಾರು ರೋಗಗಳು ಕೂಡ ಬರುವುದಿಲ್ಲ.

ಬ್ರೇಕ್ ಕೊಟ್ಟುಕೊಳ್ಳಿ:
ಸತತವಾಗಿ ಕಾರ್ಯನಿರತವಾಗುವುದರಿಂದ ಸುಸ್ತಾಗುತ್ತದೆ. ಆಗ ಚಿಕ್ಕ ವಿಚಾರವೂ ಕಿರಿಕಿರಿ ಮೂಡಿಸುತ್ತದೆ. ನಿಮ್ಮ ಸಂಗಾತಿಯ ಮೇಲೆ ಸಿಕ್ಕಾಪಟ್ಟೆ ಕೋಪ ಬರುತ್ತಿದೆ ಎಂದಾದರೆ ನೀವೇ ಎಚ್ಚರಿಕೆ ವಹಿಸಿ ನಿಮ್ಮ ಎಲ್ಲ ಒತ್ತಡದ ಕೆಲಸಗಳಿಂದ ಬ್ರೇಕ್ ತೆಗೆದುಕೊಳ್ಳಿ. ಮನಸ್ಸನ್ನು ಸ್ವಲ್ಪ ರಿಲ್ಯಾಕ್ಸ್ ಮಾಡಿ.

ಸುಮ್ಮನೆ ಕುಳಿತುಕೊಳ್ಳಿ:
ಸಂಗಾತಿ ಜತೆಗೆ ಮಾತನಾಡುತ್ತಿರುವಾಗ ಮಾತುಕತೆ ವಾದಕ್ಕೆ ತಿರುಗಿತು ಎಂದಾದರೆ ಸುಮ್ಮನಿದ್ದು ಬಿಡುವ ಅಭ್ಯಾಸ ಮಾಡಿಕೊಳ್ಳಿ. ವಿಚಾರದ ಬಗ್ಗೆ ನಿಮಗೇನು ಅನಿಸುತ್ತಿದೆ, ನಿಮ್ಮ ನಿಲುವೇನು ಎನ್ನುವುದನ್ನು ಸ್ಪಷ್ವಾಗಿ ಹೇಳಿ. ಆದರೆ, ಅದನ್ನು ಹಲವಾರು ರೀತಿಯಲ್ಲಿ ಸಮರ್ಥಿಸಿಕೊಳ್ಳುವ ಪ್ರಯತ್ನ ಬೇಡ. ಹಾಗೆಯೇ, ಯಾವ ಸನ್ನಿವೇಶ, ಎಂತಹ ಮಾತುಕತೆ ನಿಮ್ಮನ್ನು ಹತಾಶೆಗೆ ತಳ್ಳುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ಇರಲಿ. ಮನಸ್ಸಿನಲ್ಲಿ ಉಂಟಾಗುವ ಭಾವನೆಗಳ ಏರಿಳಿತಕ್ಕೆ ಇತರರನ್ನು ಜವಾಬ್ದಾರರನ್ನಾಗಿಬಾರದು. ಆಗ ಅದನ್ನು ನಿಭಾಯಿಸಲು ಸುಲಭವಾಗುತ್ತದೆ.

ಕೋಪ ಬಂದಾಗ ಜೀವನದ ಖುಷಿಯ ಕ್ಷಣಗಳನ್ನು ನೆನಪಿಸಿಕೊಳ್ಳಿ:
ಸಂಬಂಧದಲ್ಲಿ ತಪ್ಪು ತಿಳಿವಳಿಕೆ ಮೂಡಿದಾಗ ನಿಮ್ಮಿಬ್ಬರ ಸಂತಸದ ಸಮಯವನ್ನು ನೆನಪು ಮಾಡಿಕೊಂಡು ಮೃದುವಾಗಬೇಕು. ಕೋಪಿಸಿಕೊಳ್ಳುವ ಬದಲು, ಉತ್ತಮ ದಿನಗಳನ್ನು ಮೆಲಕು ಹಾಕಬೇಕು. ಸಂಗಾತಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಕ್ಷಣಗಳಿಂದ ಹಿಡಿದು, ನಿಮ್ಮ ಮೊದಲ ಮುತ್ತು, ಮೊದಲ ರಾತ್ರಿ ಹೀಗೆ ಮಧುರ ಕ್ಷಣಗಳಲ್ಲಿ ಕಳೆದುಹೋಗಲು ಯತ್ನಿಸಿಇದು ನಿಮ್ಮ ಸಂಬಂಧವನ್ನು ಪುನಃ ಮಧುರವಾಗಿಸಬಲ್ಲದು.

ಹಳೆಯದನ್ನು ಮರೆತುಬಿಡಿ:
ಕೋಪ ಬಂದಾಗ ಹಳೆಯ ಘಟನೆಯನ್ನು ಕೆದಕುವ ಅಭ್ಯಾಸದಿಂದ ದೂರವಿರಿ. ಕಹಿ ಘಟನೆಗಳು, ನೆನಪುಗಳನ್ನು ಕೆದಕುತ್ತಿರುವುದರಿಂದ ಸಂಬಂಧ ಹಾಳಾಗುತ್ತದೆ. ಮತ್ತೊಮ್ಮೆ ನಿಮ್ಮನ್ನು ಕಹಿ ಮೂಡಿಗೆ ಕಳಿಸುತ್ತದೆ. ಹೀಗಾಗಿ, ಆಗಿದ್ದು ಆಗಿಹೋಗಿದೆ, ಅದರ ಬಗ್ಗೆ ಯೋಚನೆ, ಮಾತು ಎರಡೂ ಬೇಡ.