ಕೃಷ್ಣ ಜನ್ಮಾಷ್ಟಮಿ ಹಾಗೂ ಶನಿದೋಷ ನಿವಾರಣೆಗೆ ವಿಶೇಷ ಪರಿಹಾರ

ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುವುದು. ಹಬ್ಬದಲ್ಲಿ ಕೃಷ್ಣನಿಗೆ ಪೂಜೆಯ ಜೊತೆಗೆ ಮುದ್ದು ಮಕ್ಕಳಿಗೆ ಕೃಷ್ಣ-ರಾಧೆ ವೇಷವನ್ನು ಹಾಕಿ ಕಣ್ತುಂಬಿಕೊಳ್ಳುವುದೇ ಸಂಭ್ರಮ.

ಕೃಷ್ಣನು ಶ್ರೀ ವಿಷ್ಣುವಿನ ಎಂಟನೇ ಅವತಾರ ಎಂದು ಹೇಳಲಾಗುವುದು, ಹಿಂದೂ ಪಂಚಾಂಗದ ಪ್ರಕಾರ ಶ್ರೀಕೃಷ್ಣನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೇ ಅಷ್ಟಮಿಯಂದು ಜನಿಸಿದ.

ಶ್ರೀಕೃಷ್ಣನನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ ಬದುಕಿನಲ್ಲಿ ನೆಮ್ಮದಿ, ಪ್ರೀತಿ, ಕರುಣಿ  ಹಾಗೂ ಎಂಥದೆ ಕಷ್ಟ ಬಂದರು ರಕ್ಷಣೆ ಮಾಡುತ್ತಾನೆ ಎಂಬವುದು ನಂಬಿಕೆ.

ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡಿದರೆ ತುಂಬಾ ಒಳ್ಳೆಯದು, ವರ್ಷದಲ್ಲಿ ಮಾಡುವ ಉಪವಾಸದ ಫಲ ದಿನ ಮಾಡುವ ಉಪವಾಸದಿಂದ ಸಿಗುತ್ತದೆ. ಆದ್ದರಿಂದ ಕೃಷ್ಣ ಜನ್ಮಾಷ್ಟಮಿಗೆ ಮಾಡುವ ಉಪವಾಕ್ಕೆ ವ್ರತರಾಜ್ ಸ್ಥಾನಮಾನ ನೀಡಲಾಗಿದೆ. ದಿನ ಉಪವಾಸ ವ್ರತ ಮಾಡಿ ಶ್ರೀಕೃಷ್ಣನಿಗೆ ಪೂಜೆ ಮಾಡಿದರೆ ಶನಿದೋಷಕ್ಕೆ ಕೂಡ ಪರಿಹಾರ ಮಾಡಿದಂತಾಗುವುದು.

ಶನಿದೋಷ ನಿವಾರಣೆಗೆ ಜನ್ಮಾಷ್ಟಮಿ ಪೂಜೆ ಶನಿದೋಷ ಇರುವವರು ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಜನ್ಮಾಷ್ಟಮಿ ಪೂಜೆ ಮಾಡಿದರೆ ಒಳ್ಳೆಯದು. ಜ್ಯೋತಿಷ್ಯ ಪ್ರಕಾರ ಶನಿ ದೇವನಿಗೂ ಸಂಖ್ಯೆ 8ಕ್ಕೂ ಸಂಬಂಧವಿದೆ. ಶ್ರೀವಿಷ್ಣುವಿನ 8ನೇ ಅವತಾರವಾಗಿರುವ ಶ್ರೀಕೃಷ್ಣ ಜನಿಸಿರುವುದು ಕೂಡ ಅಷ್ಟಮಿಯಂದು, ಅಲ್ಲದೆ ದೇವಕ್ಕಿಯ 8ನೇ ಮಗ.  ಶನಿ ದೇವ ಶ್ರೀಕೃಷ್ಣನ ಭಕ್ತ. ಆದ್ದರಿಂದ ಶ್ರೀಕೃಷ್ಣನನ್ನು ಪೂಜಿಸಿದರೆ ಶನಿದೇವ ಖುಷಿಯಾಗಿ ತನ್ನ ಕೆಟ್ಟ ದೃಷ್ಟಿ ಬೀರುವುದನ್ನು ನಿಲ್ಲಿಸುತ್ತಾನೆ. ಆದ್ದರಿಂದ ಶನಿದೋಷ ಅಥವಾ ಶನಿ ಸಾಡೇಸಾತಿ ಇದ್ದರೆ ಕೃಷ್ಣ ಜನ್ಮಾಷ್ಟಮಿಯಂದು ಉಪವಾಸವಿದ್ದು ಶ್ರೀ ಕೃಷ್ಣನನ್ನು ಪೂಜಿಸಿ.

ಜನ್ಮಾಷ್ಟಮಿಯಂದು ಪರಿಹಾರಗಳನ್ನು ಮಾಡಿ:
* ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿಸಲು ಶ್ರೀ ಕೃಷ್ಣನಿಗೆ ಸಿಹಿ ಕಡುಬು ನೈವೇದ್ಯವಾಗಿ ಇಡಿ.
* ಶ್ರೀ ಕೃಷ್ಣನಿಗೆ 8 ಬಗೆಯೆ ಹೂಗಳನ್ನು ಅರ್ಪಿಸುವುದರಿಂದ ಸಂತೋಷ, ಸಮೃದ್ಧಿ ಹೆಚ್ಚುವುದು.
* ದೇವಾಲಯಕ್ಕೆ ಬೆಳ್ಳಿಯ ಕೊಳಲು ನೀಡಿದರೆ ಒಳಿತಾಗುವುದು.
* ದಿನ ಶ್ರೀಕೃಷ್ಣ ಹಾಗೂ ರಾಧೆಯ ಮಂತ್ರಗಳನ್ನು ಪಠಿಸಿ.