ಮನೆಯಲ್ಲಿ ಚಾಕೊಲೇಟ್ ವ್ಯಾಕ್ಸ್ ಹೇಗೆ ತಯಾರಿಸೋದು ಒಮ್ಮೆ ತಿಳಿಯಿರಿ

ಬ್ಯೂಟಿ ಬಗ್ಗೆ ತುಂಬಾನೆ ತಲೆ ಕೆಡಿಸುವ ಜನರು ವ್ಯಾಕ್ಸಿಂಗ್ ತಿಂಗಳಿಗೊಮ್ಮೆ ಮಾಡಿಯೇ ಮಾಡ್ತಾರೆಇಲ್ಲಾವಾದ್ರೆ ಬೇಡವಾದ ಕೂದಲು ಬೆಳೆದುಕೆಟ್ಟದಾಗಿ ಕಾಣಿಸುತ್ತೆಆದರೆ ಯಾವಾಗಲೂ ಪಾರ್ಲರ್ ಗೆ ಹೋಗೋದು ಮತ್ತು ವ್ಯಾಕ್ಸಿಂಗ್ ಮಾಡೋದು ಹಣ ಮತ್ತು ಸಮಯ ಎರಡನ್ನೂ ವೇಸ್ಟ್ ಮಾಡುತ್ತೆಹಣ ಮತ್ತು ಸಮಯ ವೇಸ್ಟ್ ಮಾಡುವ ಬದಲು ನೀವು ಮನೆಯಲ್ಲಿಯೇ ಸುಲಭವಾಗಿ ವ್ಯಾಕ್ಸ್ ಮಾಡಬಹುದು.

ಚಾಕೊಲೇಟ್ ವ್ಯಾಕ್ಸ್ ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡ್‍ನಲ್ಲಿದೆ. ವ್ಯಾಕ್ಸ್‍ನಲ್ಲಿ ಗ್ಲೈ ಸೈರನ್, ಬಾದಾಮಿ ಎಣ್ಣೆ ಮತ್ತು ವಿಟಮಿನ್ ನಂತಹ ಪೋಷಕಾಂಶಗಳನ್ನು ಹೊಂದಿರುತ್ತೆಇತರ ಯಾವುದೇ ರೀತಿಯ ವ್ಯಾಕ್ಸ್ ಗೆ  ಹೋಲಿಸಿದರೆ ಚಾಕೊಲೇಟ್ ವ್ಯಾಕ್ಸ್ ಬಳಸೋದು ವ್ಯಾಕ್ಸಿಂಗ್ ಸಮಯದಲ್ಲಿ ನೋವು ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತೆ.

ಮನೆಯಲ್ಲಿ ಚಾಕೊಲೇಟ್ ವ್ಯಾಕ್ಸ್  ಹೇಗೆ ತಯಾರಿಸೋದು, ಪ್ರಯೋಜನ ಮತ್ತು ಅದನ್ನು ಹೇಗೆ ಬಳಸೋದು ಎಂಬುದನ್ನು ತಿಳಿಯೋಣ .

ಚಾಕೊಲೇಟ್ ವ್ಯಾಕ್ಸ್  ತಯಾರಿಸೋದು ಹೇಗೆ?:
ಬೇಕಾಗುವ ಸಾಮಗ್ರಿ:
1 ಟೀಸ್ಪೂನ್ ಕೋಕೋ ಪೌಡರ್ 
1 ಟೀಸ್ಪೂನ್ ಜೇನುತುಪ್ಪ
1 ಟೀಸ್ಪೂನ್ ಹಣ್ಣಿನ ರಸ

ಮಾಡೋದು ಹೇಗೆ?:
ಒಂದು ಪಾತ್ರೆಯಲ್ಲಿ ಕೋಕೋ ಪುಡಿ ಮತ್ತು ಜೇನುತುಪ್ಪ ಸೇರಿಸಿ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಮಿಶ್ರಣಕ್ಕೆ 1 ಟೀಸ್ಪೂನ್ ಯಾವುದೇ ಹಣ್ಣಿನ ರಸ ಸೇರಿಸಿ.
ಮಿಶ್ರಣವನ್ನು ಗ್ಯಾಸ್  ಮೇಲೆ ಬಿಸಿ ಮಾಡಿ.
ಮಿಶ್ರಣ ದಪ್ಪ ಆದ ನಂತರ ಗ್ಯಾಸ್  ಆಫ್ ಮಾಡಿ.
ವ್ಯಾಕ್ಸ್ ತಣ್ಣಗಾಗಲು 1 ರಿಂದ 2 ಗಂಟೆಗಳ ಕಾಲ ಬಿಡಿ.
ತಣ್ಣಗಾದ ನಂತರ ವ್ಯಾಕ್ಸ್ ಬಳಸಿ.

ವ್ಯಾಕ್ಸಿಂಗ್ ಮಾಡೋದು ಹೇಗೆ?:
ವ್ಯಾಕ್ಸಿಂಗ್ಗಾಗಿ ಒಂದು ಬೌಲ್ ನಲ್ಲಿ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ.
ವ್ಯಾಕ್ಸ್ ಅನ್ನು ಒಂದು ಸಣ್ಣ ಬೌಲ್ ನಲ್ಲಿ ತುಂಬಿಸಿ, ನಂತರ ಅದನ್ನು ಗ್ಯಾಸ್ ಮೇಲೆ ಬಿಸಿ ಮಾಡಲು ಬಿಡಿ.
ನೀವು ವ್ಯಾಕ್ಸ್ ಮಾಡಲು ಬಯಸುವ ದೇಹದ ಭಾಗವನ್ನು ಒಣಗಿಸಿ.
ಮರದ ಸ್ಪಾಚುಲಾದ ಸಹಾಯದಿಂದ ಚರ್ಮದ ಮೇಲೆ ವ್ಯಾಕ್ಸ್ ಹಚ್ಚಿ.
ವ್ಯಾಕ್ಸ್ ಹೆಚ್ಚು ಬಿಸಿ ಇರದಂತೆ ನೋಡಿ.
ಕೂದಲಿನ ಬೆಳವಣಿಗೆಯ ದಿಕ್ಕಿನಲ್ಲಿ ವ್ಯಾಕ್ಸ್ ಹಚ್ಚಿ.
ವ್ಯಾಕ್ಸಿಂಗ್ ಸ್ಟ್ರಿಪ್ ಅನ್ನು ಬಿಸಿ ವ್ಯಾಕ್ಸ್ ಮೇಲೆ ಇರಿಸಿ ಮತ್ತು ಎಲ್ಲಾ ಕಡೆ ಸರಿಯಾಗಿ ಆವರಿಸುವಂತೆ ಚೆನ್ನಾಗಿ ಒತ್ತಿ.
ಈಗ ನಿಧಾನವಾಗಿ ಅದರ ಮೇಲೆ ಪ್ರೆಶರ್ ಹಾಕಿ, ಬಳಿ ಸ್ಟ್ರಿಪ್ ಎಳೆಯಿರಿ.
ನೀವು ಜಾಗದಲ್ಲಿ ಇನ್ನಷ್ಟು ಕೂದಲನ್ನು ನೋಡಿದರೆ, ನೀವು ಮತ್ತೆ ವ್ಯಾಕ್ಸ್ ಹಚ್ಚಬಹುದು.
ವ್ಯಾಕ್ಸ್ ನಂತರ, ಚರ್ಮವನ್ನು ಶುದ್ಧವಾದ ನೀರಿನಿಂದ ತೊಳೆಯಿರಿ.
ಎಲ್ಲಾ ಆದ ಬಳಿಕ ಕ್ರೀಮ್ ಅಥವಾ ಲೋಷನ್ ಹಚ್ಚಿ.

ಚಾಕೊಲೇಟ್ ವ್ಯಾಕ್ಸ್  ಪ್ರಯೋಜನಗಳೇನು?:
ಮನೆಯಲ್ಲಿ ತಯಾರಿಸಿದ ಚಾಕೊಲೇಟ್ ವ್ಯಾಕ್ಸ್ ಯಾವುದೇ ರೀತಿಯ ರಾಸಾಯನಿಕಗಳನ್ನು ಹೊಂದಿರೋದಿಲ್ಲ.ಇದರ ಬಳಕೆಯು ಚರ್ಮಕ್ಕೆ ಯಾವುದೇ ರೀತಿಯ ಸೋಂಕಿನ ಅಪಾಯವನ್ನು ಉಂಟು ಮಾಡಲ್ಲ. ಚಾಕೊಲೇಟ್ ವ್ಯಾಕ್ಸ್ ಬಳಕೆಯು ಚರ್ಮಕ್ಕೆ ಹೊಳಪನ್ನು ತರುತ್ತೆ. ಮನೆಯಲ್ಲಿ ತಯಾರಿಸಿದ ಚಾಕೊಲೇಟ್ ವ್ಯಾಕ್ಸ್ ಹಚ್ಚೋದರಿಂದ ಸತ್ತ ಚರ್ಮದ ಕೋಶ ನಿವಾರಣೆಯಾಗುತ್ತೆ. ಚಾಕೊಲೇಟ್ ವ್ಯಾಕ್ಸ್ ಹಚ್ಚೋದರಿಂದ ಟ್ಯಾನಿಂಗ್ ಸಮಸ್ಯೆ ನಿವಾರಣೆಯಾಗುತ್ತೆ.

ಅಷ್ಟೇ ಅಲ್ಲ ಚಾಕೊಲೇಟ್ ವ್ಯಾಕ್ಸ್  ಬಳಸೋದರಿಂದ ಚರ್ಮ ತುಂಬಾನೆ ಸಾಫ್ಟ್ ಆಗುತ್ತೆ. ವ್ಯಾಕ್ಸಿಂಗ್ ಮಾಡೋವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

ಚರ್ಮದಲ್ಲಿ ಗಾಯವಾಗಿದ್ದರೆ ಸ್ಥಳದಲ್ಲಿ ವ್ಯಾಕ್ಸ್ ಮಾಡಬೇಡಿ. ವ್ಯಾಕ್ಸ್  ನಂತರ ಚರ್ಮವನ್ನು ಮಾಯಿಶ್ಚರೈಸ್ ಮಾಡಲು ಮರೆಯಬೇಡಿ. ವ್ಯಾಕ್ಸ್ ಮಾಡಿದ ನಂತರ ಬಿಸಿಲಿಗೆ ಹೋಗೋದನ್ನು ತಪ್ಪಿಸಿ. ಇಲ್ಲಾಂದ್ರೆ ಸ್ಕಿನ್ ಕಪ್ಪಾಗುತ್ತೆ.

ವ್ಯಾಕ್ಸ್ ತುಂಬಾ ಹೆಚ್ಚು ಬಿಸಿ ಮಾಡಬೇಡಿ, ಅದು ಚರ್ಮವನ್ನು ಸುಡಬಹುದು. ಒಂದೇ ಸ್ಥಳದಲ್ಲಿ ಸ್ಟ್ರಿಪ್ ಅನ್ನು ಪದೇ ಪದೇ ಉಜ್ಜಬೇಡಿ, ಇದು ರಾಶಸ್ ಗೆ ಕಾರಣವಾಗಬಹುದು. ವಾರಕ್ಕೆ 1 ಬಾರಿಗಿಂತ ಹೆಚ್ಚು ಬಾರಿ ಚಾಕೊಲೇಟ್ ವ್ಯಾಕ್ಸ್ ಬಳಸಬೇಡಿ. ಚಾಕೊಲೇಟ್ ವ್ಯಾಕ್ಸ್  ಸುರಕ್ಷಿತವಾಗಿ ಬಳಸಿ. ಬಳಸೋ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.