ನಿಮ್ಮ ಫೆವರಿಟ್ ಟೀಚರ್‌ಗೆ ಕೊಡಬಹುದಾದ ಬೆಸ್ಟ್ ಗಿಫ್ಟ್ ಇಲ್ಲಿದೆ ನೋಡಿ

ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟಿದ ದಿನದಂದು ಶಿಕ್ಷಕರ ದಿನವೆಂದು ಆಚರಿಸುತ್ತಾರೆ. ಶಿಕ್ಷಕರ ದಿನದಂದು ಟೀಚರ್‌ಗೆ  ಕೆಲವು ಮಕ್ಕಳು ವಿಶೇಷವಾದ ಉಡುಗೊರೆ ನೀಡಲು ಬಯಸುತ್ತಾರೆ. ನೀವು ಯಾವ ಉಡುಗೊರೆಯನ್ನು ಅವರಿಗೆ ಕೊಡಲು ನೀಡಬಹುದು ಎಂದು ನಾವಿಂದು ಹೇಳುತ್ತೇವೆ.

ಗಿಫ್ಟ್ ಗಳನ್ನು ನೋಡಿದ್ರೆ ಟೀಚರ್‌ಗೆ  ಖಂಡಿತವಾಗಿಯೂ ಇಷ್ಟವಾಗುತ್ತೆ, ಅಲ್ಲದೇ ಅದನ್ನು ನೋಡಿದಾಗಲೆಲ್ಲಾ ನಿಮ್ಮ ನೆನಪು ಆಗುತ್ತೆ.

ಕಸ್ಟಮೈಸ್ಡ್ ಮಗ್:
ಶಿಕ್ಷಕರ ದಿನದಂದು ನಿಮ್ಮ ಶಿಕ್ಷಕರಿಗೆ ಗಿಫ್ಟ್ ನೀಡಲು ಕಸ್ಟಮೈಸ್ಡ್ ಮಗ್ ಬೆಸ್ಟ್ ಆಯ್ಕೆ. ಇದರಲ್ಲಿ, ನಿಮ್ಮ ಶಿಕ್ಷಕರಿಗಾಗಿ ನೀವು ಕೆಲವು ವಿಶೇಷ ಲೈನ್ಸ್ ಬರೆಯಬಹುದು, ಉದಾಹರಣೆಗೆ ಬೆಸ್ಟ್ ಟೀಚರ್ ಎವರ್ ಲವ್ ಮೈ ಟೀಚರ್ ಇತ್ಯಾದಿ. ಅಥವಾ ಟೀಚರ್ ಫೋಟೋ ಹಾಕಿ ನೀಡಬಹುದು. ಅವರುಈ ಕಪ್ ನಲ್ಲಿ ಚಹಾ ಅಥವಾ ಕಾಫಿ ಕುಡಿದಾಗಲೆಲ್ಲಾ, ಖಂಡಿತವಾಗಿಯೂ ನಿಮ್ಮನ್ನು ನೆನಪಿಸುತ್ತಾರೆ.



ಪೆನ್
ಸೆಟ್:
ಶಿಕ್ಷಕರಿಗೆ ಪೆನ್ ಬಹಳ ಮುಖ್ಯ. ಅದು ನಿಮ್ಮ ನೋಟ್ಸ್ ಕರೆಕ್ಷನ್ ಮಾಡಲು ಅಥವಾ ನಿಮಗೆ ಕಲಿಸಲು ಆಗಿರಲಿ, ಟೀಚರ್ಸ್ ಗೆ ಪೆನ್ ತುಂಬಾನೆ ಮುಖ್ಯವಾಗಿರುತ್ತೆ. ಹಾಗಾಗಿ, ನೀವು ಅವರಿಗೆ ಸುಂದರವಾದ ಪೆನ್ ಸೆಟ್ ಉಡುಗೊರೆಯಾಗಿ ನೀಡಬಹುದು ಅಥವಾ ಪೆನ್ ಸ್ಟ್ಯಾಂಡ್ ನೀಡಬಹುದು.

ಪುಸ್ತಕ:
ಹೆಚ್ಚಿನ ಶಿಕ್ಷಕರು ಪುಸ್ತಕಗಳನ್ನು ಓದಲು ತುಂಬಾ ಇಷ್ಟಪಡ್ತಾರೆ. ಇದು ಅವರ ಜ್ಞಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ.ನೀವು ನಿಮ್ಮ ಶಿಕ್ಷಕರಿಗೆ ಪ್ರೇರಕ ಅಥವಾ ಸ್ಫೂರ್ತಿ ಪುಸ್ತಕವನ್ನು ಉಡುಗೊರೆಯಾಗಿ ನೀಡಬಹುದು.

ಡೈರಿ:
ಹೆಚ್ಚಿನ ಶಿಕ್ಷಕರು ಡೈರಿಗಳನ್ನು ಹೆಚ್ಚಾಗಿ ಕ್ಯಾರಿ ಮಾಡ್ತಾರೆ. ಅದರಲ್ಲಿ ಅವರು ಪ್ರಮುಖ ನೋಟ್ಸ್ ಮತ್ತು ಅನೇಕ ವಿಷಯಗಳನ್ನು ಬರೆಯುತ್ತಾರೆ. ಹಾಗಾಗಿ, ನಿಮ್ಮ ಶಿಕ್ಷಕರಿಗೆ ಉಪಯುಕ್ತವಾದದ್ದನ್ನು ನೀಡಲು ನೀವು ಬಯಸಿದರೆ, ಅವರಿಗೆ ಉತ್ತಮ ಡೈರಿಯನ್ನು ಗಿಫ್ಟ್  ಆಗಿ ನೀಡಬಹುದು.

ವಾಚ್
:
ಪ್ರತಿಯೊಬ್ಬ ಶಿಕ್ಷಕರು ವಾಚ್ ಧರಿಸುತ್ತಾರೆ. ಯಾಕಂದ್ರೆ ಟೀಚರ್ಸ್ ಗೆ ಟೈಮ್ ತುಂಬಾನೆ ಮುಖ್ಯ. ನಿಮ್ಮ ಶಿಕ್ಷಕರಿಗೆ ಕೆಲವು ಉಪಯುಕ್ತ ಮತ್ತು ಸ್ವಲ್ಪ ದುಬಾರಿ ಉಡುಗೊರೆಯನ್ನು ನೀಡಲು ಬಯಸಿದರೆಅವರಿಗೆ ವಾಚ್ ಉಡುಗೊರೆಯಾಗಿ ನೀಡಬಹುದು. ಪ್ರತಿ ಬಾರಿ ಅವರು ಸಮಯ ನೋಡುವಾಗ ನಿಮ್ಮ ನೆನಪಾಗಬಹುದು.

ಫೋಟೋ ಫ್ರೇಮ್:
ಯಾವುದೇ ಸಂದರ್ಭದಲ್ಲಿ ಫೋಟೋ ಫ್ರೇಮ್ ನೀಡುವುದು ಸಾಕಷ್ಟು ಟ್ರೆಂಡ್ ನಲ್ಲಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ನೀವು ನಿಮ್ಮ ಶಿಕ್ಷಕರಿಗೆ ಫೋಟೋ ಫ್ರೇಮ್ ಗಿಫ್ಟ್  ಆಗಿ ನೀಡಬಹುದು. ಇದರಲ್ಲಿ, ನೀವು ನಿಮ್ಮ ಶಿಕ್ಷಕರೊಂದಿಗೆ ನಿಮ್ಮ ಫೋಟೋವನ್ನು ಸಹ ಹಾಕಬಹುದು ಮತ್ತು ಅದನ್ನು ಅವರಿಗೆ ನೀಡಬಹುದು. ಫೋಟೋ ಅವರಿಗೆ ಯಾವಾಗಲೂ ನಿಮ್ಮನ್ನು ನೆನಪಿಸುತ್ತದೆ.

ಕೈಯಿಂದ ತಯಾರಿಸಿದ ಗಿಫ್ಟ್:
ಶಿಕ್ಷಕರು ಶಾಪ್ ನಿಂದ ತಂದ ಗಿಫ್ಟ್  ಗಳಿಗಿಂದ ಮಕ್ಕಳು ತಾವೇ ಮಾಡಿದ ವಸ್ತುಗಳು ಮತ್ತು ಗಿಫ್ಟ್ ಅನ್ನು ತುಂಬಾನೆ ಇಷ್ಟಪಡ್ತಾರೆ. ಹಾಗಾಗಿ ಶಿಕ್ಷಕರ ದಿನದ ಸಂದರ್ಭದಲ್ಲಿ, ನೀವು ನಿಮ್ಮ ಶಿಕ್ಷಕರಿಗೆ ಕೈಯಿಂದ ತಯಾರಿಸಿದ ಗಿಫ್ಟ್ ನೀಡಬಹುದು. ಇದರಲ್ಲಿ, ನೀವು ಅವರಿಗಾಗಿ ಗ್ರೀಟೀಂಗ್ ಕಾರ್ಡ್ ತಯಾರಿಸಬಹುದು ಅಥವಾ ಅವರಿಗಾಗಿ ನಿಮ್ಮ ಮನದಾಳದ ಮಾತುಗಳನ್ನು ಬರೆದ ಲೆಟರ್ ನೀಡಬಹುದುಇದು ಅವರಿಗೆ ಖಂಡಿತವಾಗಿಯೂ ಇಷ್ಟವಾಗುತ್ತೆ.