ಮಗುವಿನ ತೂಕ ಪ್ರತಿವಾರದಲ್ಲಿ 100-140 ಗ್ರಾಂ ಹೆಚ್ಚಾಗುವುದು ಹಾಗೆ ಹೊಟ್ಟೆ ತುಂಬಿದರೆ ಮಗು ತುಂಬಾ ಚೆನ್ನಾಗಿ ನಿದ್ದೆ ಮಾಡುತ್ತದೆ. ಮಗು ದಿನದಲ್ಲಿ 7-8 ಬಾರಿ ಮಗು ಅಧಿಕ ಮೂತ್ರ ವಿಸರ್ಜನೆ ಮಡಿದಷ್ಟು ಒಳ್ಳೆಯದು. ಮಲ ವಿಸರ್ಜನೆ ಚೆನ್ನಾಗಿ ಆಗುವುದು.
ಎದೆಹಾಲು ಸಾಕಷ್ಟು ಸಿಗದಿದ್ದರೆ ಮಗುವಿನಲ್ಲಿ ನಿಶ್ಯಕ್ತಿ ಇರುತ್ತದೆ, ತುಂಬಾನೇ ನಿದ್ದೆ ಮಾಡುವುದು ಮಲ ತುಂಬಾ ಗಟ್ಟಿಯಾಗಿದ್ದು ಮಗುವಿಗೆ ಮಲವಿಸರ್ಜನೆಗೆ ಕಷ್ಟವಾದರೆ ಎದೆಹಾಲು ಸಾಕಾಗುತ್ತಿಲ್ಲ ಎಂದರ್ಥ. ಮಗು ಬೇಗನೆ ಹಾಲು ಕುಡಿದು ನಿಲ್ಲಿಸುತ್ತದೆ, ಮಗುವಿಗೆ ಸರಿಯಾಗಿ ಹಾಲು ಸಿಗದೇ ಇದ್ದಾಗ ಈ ರೀತಿ ಮಾಡುತ್ತದೆ. ಈ ರೀತಿ ಮಾಡುತ್ತಿದ್ದರೆ ಮಗುವಿಗೆ ಸರಿಯಾಗಿ ಹೊಟ್ಟೆ ತುಂಬುವುದಿಲ್ಲ.
ಮಗುವಿನ ಮೈತೂಕ ಸರಿಯಾದ ರೀತಿಯಲ್ಲಿ ಹೆಚ್ಚಾಗುವುದಿಲ್ಲ ಮಗುವಿನಲ್ಲಿ ಮೂತ್ರ ವಿಸರ್ಜನೆ ಕಡಿಮೆ ಇರುತ್ತದೆ. ಹಾಲು ಸಾಕಾಗದಿದ್ದರೆ ಫಾರ್ಮುಲಾ ಹಾಲು ಕೊಡುವುದು ಒಳ್ಳೆಯದೇ? ಫಾರ್ಮುಲಾ ಹಾಲು ಕೊಟ್ಟರೆ ಮಗುವಿನ ಹೊಟ್ಟೆ ತುಂಬುವುದು, ಆದರೆ ತಾಯಿಯ ಎದೆಹಾಲಿಗೆ ಸಮವಾಗಿರಲ್ಲ. ಅಲ್ಲದೆ ಮಗುವಿಗೆ ಜೀರ್ಣಗೊಳ್ಳಲು ಕಷ್ಟವಾಗಬಹುದು. ಮಗುವಿಗೆ ಮಲಬದ್ಧತೆ ಸಮಸ್ಯೆ ಕಂಡು ಬರುವುದು. ಆದ್ದರಿಂದ ಫಾರ್ಮುಲಾ ಹಾಲಿಗಿಂತ ಮಕ್ಕಳಿಗೆ ಎದೆಹಾಲೇ ತುಂಬಾ ಒಳ್ಳೆಯದು.
ಮೊದಲ ಹೆರಿಗೆಯಾದ ತಾಯಂದಿರಿಗೆ ಕೆಲ ಸಲಹೆಗಳು ಮಗುವಿಗೆ ಒಂದೂವರೆ ಗಂಟೆಗೊಮ್ಮೆ ಹಾಲುಣಿಸಿ, ಹೀಗೆ ಮಾಡುವುದರಿಂದ ಹಸಿವು ಇಂಗುವುದು. ಮಗುವಿಗೆ ಹಾಲುಣಿಸಿದಷ್ಟೂ ಎದೆಹಾಲಿನ ಉತ್ಪತ್ತಿ ಹೆಚ್ಚಾಗುವುದು. ನೀವು ಒಂದು ಬದಿ ಸಂಪೂರ್ಣ ಕುಡಿಸಿದ ಬಳಿಕ ಇನ್ನೊಂದು ಸ್ತನದಿಂದ ಕುಡಿಸಿ. ಸ್ತನವನ್ನು ಮಸಾಜ್ ಮಾಡಿ, ಮಗುವಿಗೆ ಹಾಲುಣಿಸುವಾಗ ಮೆಲ್ಲನೆ ಎದೆಯನ್ನು ಪ್ರೆಸ್ ಮಾಡಿ, ಇದರಿಂದ ಮಗುವಿಗೆ ಹೆಚ್ಚು ಹಾಲು ಸಿಗುವುದು.
ಹೆಚ್ಚು ಹಾಲಿದ್ದರೆ ಹೀಗೆ ಮಾಡಬೇಡಿ, ನೆಲ್ಲಿಗೆ ಹತ್ತುವುದು. ಎದೆಹಾಲಿನ ಉತ್ಪತ್ತಿ ಹೆಚ್ಚಿಸಲು ಯಾವ ಬಗೆಯ ಆಹಾರ ಒಳ್ಳೆಯದು? ಕಬ್ಬಿಣಂಶ, ಪ್ರೊಟೀನ್, ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ ಧಾನ್ಯಗಳು, ಸೊಪ್ಪು, ತರಕಾರಿ, ಬಟಾಣಿ, ಡ್ರೈ ಫ್ರೂಟ್, ಒಣದ್ರಾಕ್ಷಿ, ವಿಟಮಿನ್ ಸಿ ಇರುವ ಆಹಾರಗಳನ್ನು ಸೇವಿಸಿ. ಅಗ್ಯವಿದ್ದರೆ ಸಪ್ಲಿಮೆಂಟ್ ಸೇವಿಸಿ ವಿಟಮಿನ್ ಬಿ-12 ಸಪ್ಲಿಮೆಂಟ್ , ಒಮೆಗಾ 3, ವಿಟಮಿನ್ ಡಿ ಈ ಬಗೆಯ ಸಪ್ಲಿಮೆಂಟ್ಸೇವಿಸಿ. ನೀವು ಸ್ವಂತ ಸಪ್ಲಿಮೆಂಟ್ ಸೇವಿಸಬೇಡಿ. ನೀವು ವೈದ್ಯರ ಸಲಹೆ ಪಡೆಯಿರಿ
ಸೊಪ್ಪು, ಧಾನ್ಯಗಳು, ನುಗ್ಗೆಕಾಯಿ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು , ಮೊಳಕೆ ಬರಿಸಿದ ಧಾನ್ಯಗಳು ಈ ಬಗೆಯ ಆಹಾರ ಸೇವಿಸಿ.