ಮಹಿಳೆಯರ ದೇಹವನ್ನು ಪ್ರಕೃತಿಗೆ
ಹೋಲಿಸುತ್ತಾರೆ. ಏಕೆಂದರೆ ಪ್ರಕೃತಿಯಲ್ಲಿ ನಡೆಯುವ ಕೆಲವೊಂದು ಪ್ರಕ್ರಿಯೆಗಳು ಮಹಿಳೆಯರ ದೇಹದ ಆರೋಗ್ಯಕ್ಕೆ
ಸಾಮ್ಯತೆಯನ್ನು ಹೊಂದಿರುತ್ತವೆ. ಮಹಿಳೆಯರಲ್ಲಿ ಅವರ ದೇಹ ಪ್ರಕೃತಿಗೆ ಅನುಗುಣವಾಗಿ ನಡೆಯುವ ಆಂತರಿಕ
ಚಟುವಟಿಕೆಗಳಲ್ಲಿ ಪಿರಿಯಡ್ಸ್ ಸಹ ಒಂದು.
ಸ್ತನಗಳಲ್ಲಿ ಗಂಟು, ಏನಿದು ಸಮಸ್ಯೆ?
ಸ್ತನಗಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ಸ್ತನಗಳ ಭಾಗದಲ್ಲಿ ಹಗ್ಗದ ತರಹ ಮತ್ತು ದುಂಡನೆಯ ಆಕಾರದಲ್ಲಿ
ಗಂಟುಗಳು ಕಂಡು ಬರುತ್ತವೆ. ಋತುಚಕ್ರ ಅವಧಿಗೆ ಮುಂಚೆ ಮಹಿಳೆಯರಲ್ಲಿ ಈ ರೀತಿ ಆಗುತ್ತದೆ ಮತ್ತು ಋತುಚಕ್ರ
ಶುರುವಾದ ನಂತರದಲ್ಲಿ ಕೆಲವರಿಗೆ ಸರಿಹೋಗುತ್ತದೆ.
ಸ್ತನ ನೋವಿದ್ರೆ ಆತಂಕ ಬೇಡ.
ಇದು ಕ್ಯಾನ್ಸರ್ ಅಲ್ಲ!
ಇದರ ಲಕ್ಷಣಗಳು:
ಗಂಟುಗಳಿಂದ ಕೂಡಿದ ಸ್ತನಗಳು ಇರುವ ಮಹಿಳೆಯರಿಗೆ ಈ ಕೆಳಗಿನ ಲಕ್ಷಣಗಳು ಕಂಡುಬರುತ್ತವೆ.
ಸ್ತನಗಳ ಭಾಗದಲ್ಲಿ ಗಂಟುಗಳು
ಕಂಡುಬರುವ ಜಾಗದಲ್ಲಿ ಚರ್ಮ ಗಟ್ಟಿಯಾಗುತ್ತದೆ. ಕೆಲವರಿಗೆ ಇದು ಮುಟ್ಟಿದರೆ ತುಂಬಾ ಸೂಕ್ಷ್ಮ ಎನಿಸುತ್ತದೆ.
ಒಂದು ರೀತಿಯ ಅಸ್ವಸ್ಥತೆ ಕಂಡುಬರುತ್ತದೆ.
ಸ್ತನಗಳ ಗಾತ್ರ ಬದಲಾಗುವುದರ ಜೊತೆಗೆ ನಿಪ್ಪಲ್ ನಿಂದ ಹಸಿರು ಅಥವಾ ಕಡು ಕಂದು ಬಣ್ಣದ ಡಿಸ್ಚಾರ್ಜ್
ನಿರಂತರವಾಗಿರುತ್ತದೆ. ಎರಡು ಸ್ತನಗಳಲ್ಲಿ ಇದೇ ರೀತಿ ಉಂಟಾಗುತ್ತದೆ.
ಸ್ತನಗಳ ಒಳಭಾಗದಲ್ಲಿ ಉಂಟಾಗುವ
ಬದಲಾವಣೆ:
ಸ್ತನಗಳ ಒಳಭಾಗದಲ್ಲಿ ಕೂಡ ಹಾಲಿನ ಗ್ರಂಥಿಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಅಂದರೆ ಹೆಚ್ಚಿನ
ಜೀವ ಕೋಶಗಳು ಬೆಳವಣಿಗೆ ಆಗುವುದು, ಅಲ್ಲಲ್ಲಿ ನೀರು ತುಂಬಿದ ಗಂಟುಗಳು ಕಂಡುಬರುವುದು. ಹಾಲು ಉತ್ಪತ್ತಿ
ಮಾಡುವ ಗ್ರಂಥಿಗಳು ದೊಡ್ಡದಾಗುವುದು. ಇವೆಲ್ಲವೂ ಮೈಕ್ರೋಸ್ಕೋಪ್ ನ ಮೂಲಕ ನೋಡಿದಾಗ ಕಾಣಸಿಗುತ್ತದೆ.
ಸ್ತನ ಕ್ಯಾನ್ಸರ್ ಇದ್ದರೆ ನೋವು
ಕಾಣಿಸುತ್ತಾ?:
ಸ್ತನಗಳಲ್ಲಿ ತಾತ್ಕಾಲಿಕವಾಗಿ ಉಂಟಾಗುವ ಗಂಟುಗಳು ಸ್ತನ ಕ್ಯಾನ್ಸರ್ ಸಮಸ್ಯೆಯನ್ನು ತಂದುಕೊಡುತ್ತದೆ
ಎನ್ನುವ ಆತಂಕ ಬೇಡ. ಏಕೆಂದರೆ ಸ್ತನಗಳಲ್ಲಿ ಅಥವಾ ನಿಪ್ಪಲ್ ಭಾಗದಲ್ಲಿ ಕಂಡು ಬರುವ ನೋವು ಸ್ತನ ಕ್ಯಾನ್ಸರ್
ಲಕ್ಷಣಗಳಲ್ಲ.
ಸ್ತನ ಕ್ಯಾನ್ಸರ್ ಬರುವುದೇ ಆದರೆ
ಸ್ತನಗಳಲ್ಲಿ ಗಂಟು ಕಂಡು ಬರುವುದರ ಜೊತೆಗೆ ಸ್ತನಗಳ ಸುತ್ತಮುತ್ತ ಕಂಕು ಳಿನ ಭಾಗದಲ್ಲಿ, ಭುಜಗಳ ಭಾಗದಲ್ಲಿ
ಊತ ಬರುತ್ತದೆ.
ಸ್ತನಗಳಲ್ಲಿ ನಿಪ್ಪಲ್ ಭಾಗ ಒಣಗುತ್ತದೆ.
ಸ್ತನಗಳ ಚರ್ಮ ಗಟ್ಟಿಯಾಗುತ್ತದೆ, ಇದರ ಜೊತೆಗೆ ನಿಪ್ಪಲ್ ಭಾಗ ಒಳಗೆ ತಿರುಗಿಕೊಳ್ಳುತ್ತದೆ ಮತ್ತು
ನಿರಂತರವಾಗಿ ಡಿಸ್ಚಾರ್ಜ್ ಇರುತ್ತದೆ.
ವೈದ್ಯರನ್ನು ಯಾವಾಗ ನೋಡಬೇಕು?:
ಪಿರಿಯಡ್ಸ್ ಅಥವಾ ಋತುಚಕ್ರದ ಸಂದ ರ್ಭದಲ್ಲಿ ಸ್ತನಗಳ ಭಾಗದಲ್ಲಿ ಬದಲಾವಣೆ ಯಾಗುವುದು ಸಾಮಾನ್ಯ. ಆದರೆ
ಇದು ತಾತ್ಕಾಲಿಕವಾಗಿರುತ್ತದೆ.
ಒಂದು ವೇಳೆ ಇದು ನಿರಂತರವಾಗಿ
ಮುಂದು ವರೆದರೆ ಮತ್ತು ಸ್ತನಗಳ ಭಾಗದ ಚರ್ಮ ಗಟ್ಟಿಯಾದರೆ ನೀವು ವೈದ್ಯರನ್ನು ಭೇಟಿಯಾ ಗುವುದು ಉತ್ತಮ.
ಜೊತೆಗೆ ಸ್ತನಗಳ ನೋವು ಹೆಚ್ಚಾಗುತ್ತಾ ಹೋಗುತ್ತದೆ. ಇಂತಹ ಸಂದರ್ಭ ದಲ್ಲಿ ನಿರ್ಲಕ್ಷತನ ಬೇಡ.