ಪ್ರತಿಯೊಬ್ಬ ಮಹಿಳೆಗೂ ತಾನು ಗರ್ಭಿಣಿ ಆಗಬೇಕು ಮಗುವಿಗೆ ಜನ್ಮ ನೀಡಬೇಕು ಎನ್ನುವ ಎನ್ನುವ ಆಸೆ ಇದ್ದೆ ಇರುತ್ತದೆ. ಇನ್ನು ಗರ್ಭಾವಸ್ಥೆ ಸಮಯದಲ್ಲಿ ದೇಹದಲ್ಲಿ ಆಗುವ ಸಾಕಷ್ಟು ಬದಲಾವಣೆಗಳು, ಹೆಣ್ಣಿಗೆ ಹೊಸ ಅನುಭವವನ್ನು ನೀಡುತ್ತವೆ ಜೊತೆಗೆ ಸಾಕಷ್ಟು ನೋವನ್ನು ಕೂಡ ನೀಡುತ್ತವೆ.
ಗರ್ಭಾವಸ್ಥೆಯ ಸಮಯದಲ್ಲಿ ದೇಹದಲ್ಲಿ
ಹಾರ್ಮೋನಲ್ ಬದಲಾವಣೆಗಳು ಆಗುತ್ತವೆ. ಇದರಿಂದ ದೇಹದ ಪ್ರತಿಯೊಂದು ಭಾಗದಲ್ಲಿಯೂ ಸಾಕಷ್ಟು ನೋವು ಕಿರಿಕಿರಿ
ಅನುಭವಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರ ಸ್ತನಗಳು ಬಹಳ ಸೂಕ್ಷ್ಮ ಹಾಗೂ ಮೃದುವಾಗಿರುತ್ತದೆ.
ಗರ್ಭಿಣಿಯಾದ ನಾಲ್ಕರಿಂದ ಏಳು ವಾರದ ಒಳಗೆ ಈ ಬದಲಾವಣೆ ಆರಂಭವಾಗುತ್ತದೆ. ಸುಮಾರು ಮೊದಲ ತ್ರೈಮಾಸಿಕದ
ವರೆಗೂ ಸ್ತನಗಳಲ್ಲಿ ಬದಲಾವಣೆಗಳನ್ನು ಕಾಣಬಹುದು.
ಕೊಲೊಸ್ಟ್ರೋನ್ ಸ್ತನಗಳಲ್ಲಿ
ಉತ್ಪಾದನೆಯಾಗುವುದರಿಂದಲೂ ಕೂಡ ಬದಲಾವಣೆಗಳು ಆಗುತ್ತವೆ. ಇದಕ್ಕೆ ಮುಖ್ಯವಾದ ಕಾರಣ ಹೆರಿಗೆಯ ನಂತರ
ಮಗುವಿಗೆ ಮೊದಲ ಆಹಾರವಾಗಿ ತಾಯಿಯ ಎದೆ ಹಾಲನ್ನು ಉಣಿಸಲಾಗುತ್ತದೆ ಹಾಗಾಗಿ ಸ್ತನವು ಅದಕ್ಕೆ ಸಿದ್ಧತೆಯನ್ನು
ಮಾಡಿಕೊಳ್ಳುತ್ತದೆ. ಈ ಸಮಯದಲ್ಲಿ ಗರ್ಭಿಣಿ ಸ್ತ್ರೀ ನೋವು ಕಿರಿಕಿರಿ ಅನುಭವಿಸುವುದು ಸಹಜ. ಮಹಿಳೆಗೆ
38ನೇ ವಾರದಲ್ಲಿ ಕೊಲೋಸ್ಟ್ರೋನ್ ಸೋರಿಕೆಯಾಗಬಹುದು.
ಈ ಸಂದರ್ಭದಲ್ಲಿ ಸ್ತನದ ತೊಟ್ಟು
ಭಾಗದಲ್ಲಿ ಸಾಕಷ್ಟು ನೋವು ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿ ಆರಂಭದಲ್ಲಿ ಉಂಟಾಗುವ ಈ ಸ್ಥಾನಗಳ ನೋವಿನಿಂದಾಗಿ
ಸಾಕಷ್ಟು ಮಹಿಳೆಯರು ಭಯಗೊಳ್ಳುತ್ತಾರೆ ಅಥವಾ ಹೆಚ್ಚಿನ ಕಿರಿಕಿರಿ ಅನುಭವಿಸುತ್ತಾರೆ ಇದು ಯಾಕೆ ಉಂಟಾಗುತ್ತದೆ
ಇದರಿಂದ ಮುಂದೆ ಏನಾದರೂ ಸಮಸ್ಯೆ ಆಗಬಹುದೇ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಅದೇ ರೀತಿ ಸ್ತನದ ತೊಟ್ಟು ನೋವು
ಕಾಣಿಸಿಕೊಳ್ಳುವುದು ಕೂಡ ಸಹಜ ಪ್ರಕ್ರಿಯೆ. ಹಾರ್ಮೋನ್ ಗಳು ಈ ಪ್ರದೇಶವನ್ನೂ ಹೆಚ್ಚು ಮೃದುಗೊಳಿಸುತ್ತದೆ
ಹಾಗಾಗಿ ಸ್ತನದ ತೊಟ್ಟು ಇನ್ನಷ್ಟು ಸೂಕ್ಷ್ಮವಾಗಿರುತ್ತದೆ. ಇನ್ನು ಈ ರೀತಿ ನಾವು ಗರ್ಭಾವಸ್ಥೆಯ ಪೂರ್ಣ
ಅವಧಿಯವರೆಗೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮೂರನೇ ತ್ರೈಮಾಸಿಕದ ಕೊನೆಯ ಹೊತ್ತಿಗೆ
ಅಂದರೆ ಕೊಲೋಸ್ಟ್ರಾಮ್ ಉತ್ಪಾದನೆ ಪ್ರಾರಂಭವಾದಾಗ ಮತ್ತೆ ಸಣ್ಣ ನೋವು ಕಾಣಿಸಿಕೊಳ್ಳಬಹುದು.
ಸ್ರವಿಸುವಿಕೆ: ಗರ್ಭಾವಸ್ಥೆಯಲ್ಲಿ
ಸೋರುವಿಕೆ ಅಥವಾ ಸ್ರವಿಸುವಿಕೆ ಕೂಡ ಸಾಮಾನ್ಯವಾಗಿದೆ. ಮೊದಲು ತೆಳುವಾದ ನೀರಿನ ರೀತಿಯ ದ್ರವ ಹೊರಗಡೆ
ಬರಬಹುದು ಇದು ಕೋಲೋಸ್ಟ್ರಮ್ ನಿಂದ ಆಗುವಂಥದ್ದು. ಬಳಿಕ ದಪ್ಪವಾಗಿರುವ ಚಿಗುಟಾದ ದ್ರವ ಸ್ತನದ ತೊಟ್ಟಿನಿಂದ
ಹೊರಬರುತ್ತದೆ.
* ಉತ್ತಮ ರೀತಿಯ ಬ್ರಾ ಧರಿಸಿ.
ಹೆಚ್ಚು ಬಿಗಿಯಾಗಿರುವ ಬ್ರಾವನ್ನು ಧರಿಸಬೇಡಿ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ತಜ್ಞರನ್ನು
ಸಂಪರ್ಕಿಸಬಹುದು. ಹುಕ್ಸ್ ಇಲ್ಲದ ವೈರ್ ಲೆಸ್ ಬ್ರಾ ಧರಿಸಬಹುದು. ರಾತ್ರಿ ಸಮಯದಲ್ಲಿ ಅಗತ್ಯವಿಲ್ಲದಿದ್ದರೆ
ಬ್ರಾ ಧರಿಸಬೇಡಿ.
* ಐಸ್ ಪ್ಯಾಕ್: ಇನ್ನು ಸ್ತನಗಳಲ್ಲಿ ನೋವು ಹೆಚ್ಚಾಗಿ ಕಾಣಿಸಿಕೊಂಡರೆ ಐಸ್
ಪ್ಯಾಕ್ ಬಳಸಬಹುದು. ಸ್ಪರ್ಶ ನೀಡಿದರೆ ಸ್ವಲ್ಪ ಹಿತವೆನಿಸುತ್ತದೆ ಅಥವಾ ಅತಿಯಾದ ತಂಪು ನಿಮಗೆ ಆಗದೆ
ಇದ್ದರೆ ನೀವು ಬೆಚ್ಚಗಿನ ನೀರಿನ ಶಾಖವನ್ನು ಕೊಡಬಹುದು.
* ಲೋಶನ್: ನೀವು ಲ್ಯನೋಲಿನ್ ಕ್ರೀಮ್ಗಳನ್ನು
ಸ್ತನಕ್ಕೂ ಹಾಗೂ ಮೊಲೆಯ ತೊಟ್ಟಿಗೂ ಮಿತವಾಗಿ ಹಚ್ಚಿಕೊಂಡರೆ ಸ್ವಲ್ಪ ಮಟ್ಟಿಗೆ ನೋವು ಕಡಿಮೆ ಆಗುತ್ತದೆ.
ಇವೆಲ್ಲವುಗಳನ್ನು ಮಾಡಿದ ನಂತರವೂ ನಿಮಗೆ ತಡೆದುಕೊಳ್ಳಲು ಸಾಧ್ಯವಾಗದೇ ಇರುವಷ್ಟು ನೋವು ಕಾಣಿಸಿಕೊಂಡರೆ
ವೈದ್ಯರನ್ನು ಸಂಪರ್ಕ ಮಾಡಿ.