ಲೈಂಗಿಕತೆಯು ಮಾನವನ ಜೀವನದ ಮಹತ್ವದ
ಅಂಶವಾಗಿದೆ. ಏಕೆಂದರೆ ಇದು ಸಂತಾನೋತ್ಪತ್ತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಲೈಂಗಿಕತೆಯು
ಕೇವಲ ಭಾವನೆಯಷ್ಟೇ ಅಲ್ಲದೇ, ವ್ಯಕ್ತಿಗಳ ನಡುವಿನ ಅನ್ಯೋನ್ಯತೆ, ಸಂಪರ್ಕ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ.
ಆದರೆ ಸಂಸ್ಕೃತಿ, ಸಾಮಾಜಿಕ,
ವೈಯಕ್ತಿಕ ನಂಬಿಕೆಗಳು ಮತ್ತು ಅನುಭವಗಳಂತಹ ಅಂಶಗಳನ್ನು ಅವಲಂಬಿಸಿ ಲೈಂಗಿಕತೆಯ ಪ್ರಾಮುಖ್ಯತೆಯು ವ್ಯಕ್ತಿಯಿಂದ
ವ್ಯಕ್ತಿಗೆ ಬದಲಾಗುತ್ತದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ವೈವಾಹಿಕ ಜೀವನವನ್ನು ಸುಮಧುರವಾಗಿರಲು
ಮತ್ತು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಬಯಸಿದರೆ, ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ
ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮುಖ್ಯ ವಿಚಾರಗಳು ಈ ಕೆಳಗಿನಂತಿದೆ.
ನಿಮ್ಮ ಸಂಗಾತಿಯ ಒಪ್ಪಿಗೆ ಮುಖ್ಯ:
ನಿಮ್ಮ ಸಂಗಾತಿ ಸಂಪೂರ್ಣವಾಗಿ ನಿಮ್ಮ ಹಿಡಿತದಲ್ಲಿ ಇದ್ದರೂ ಅವರೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ
ತೊಡಗುವ ಮುನ್ನ ಅವರಿಗೆ ಒಪ್ಪಿಗೆ ಇದೆಯೇ ಎಂಬುವುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ನೀವು
ನಿಮ್ಮ ಸಂಗಾತಿಯೊಂದಿಗೆ ಸ್ಪಷ್ಟವಾಗಿ ಸಂವಹನ ನಡೆಸಬೇಕು ಮತ್ತು ಅವರ ಭಾವನೆಗಳನ್ನು ಗೌರವಿಸಬೇಕು.
ಸುರಕ್ಷತೆ:
ಲೈಂಗಿಕವಾಗಿ ಹರಡುವ ಸೋಂಕುಗಳು ಮತ್ತು ಅನಪೇಕ್ಷಿತ ಗರ್ಭಧಾರಣೆಯಿಂದ ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು
ರಕ್ಷಿಸಲು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ
ಮಾಡುವ ಅಗತ್ಯತೆಯ ಬಗ್ಗೆ ತಿಳಿದಿರಲಿ. ಲೈಂಗಿಕವಾಗಿ ಹರಡುವ ಸೋಂಕನ್ನು ತಡೆಗಟ್ಟಲು ಕಾಂಡೋಮ್ಗಳು ಸೇರಿದಂತೆ
ಇತರ ರೀತಿಯ ರಕ್ಷಣೆಯ ಅಗತ್ಯವಿದ್ದಲ್ಲಿ ಮುಂದೆ ಯೋಜಿಸಿ ಮತ್ತು ಕಾರ್ಯನಿರ್ವಹಿಸಿ.