ಚಳಿಗಾಲದಲ್ಲಿ ಈ ಆಹಾರ ಪದಾರ್ಥ ಸೇವಿಸಿ ನಿಮ್ಮ‌ ಸೆಕ್ಸ್ ಲೈಫ್ ವೃದ್ಧಿಸಿ!

ಮನುಷ್ಯನ ಜೀವನದಲ್ಲಿ ಲೈಂಗಿಕ ಕ್ರಿಯೆ ಒಂದು ಸಹಜ ಕ್ರಿಯೆ ಆಗಿದೆ. ಮನುಷ್ಯ ಸಂಘ ಜೀವಿಯಾಗಿರಲು ಇಷ್ಟ ಪಡುವ ಕಾರಣ ಲೈಂಗಿಕತೆಗೆ ಹೆಚ್ಚು ಪ್ರಾಶಸ್ಯ ಇದೆ. ಯಾವಾಗ ಸಂಗಾತಿಗಳಿಬ್ಬರ ಮಧ್ಯೆ ಸ್ನೇಹ ಮತ್ತು ಪ್ರೀತಿ ಹೆಚ್ಚಾಗಿರುತ್ತದೆಯೋ  ಆಗ ಮಾತ್ರ ಜೀವನ ಆನಂದಕರವಾಗಿರುತ್ತದೆ. ಆದರೆ ಕೆಲವೊಮ್ಮೆ ಲೈಂಗಿಕ ಜೀವನಕ್ಕೆ ಮುಖ್ಯವಾಗಿ ಬೇಕಾಗಿರುವ ಉದ್ರೇಕ ಮತ್ತು ಆಸಕ್ತಿ ಇಬ್ಬರ ಮಧ್ಯೆ ಇರುವುದೇ ಇಲ್ಲ.

ಅದಲ್ಲದೆ ಲೈಂಗಿಕ ತೃಪ್ತಿ ಕಾರಣದಿಂದ ದಂಪತಿಗಳ ನಡುವೆ ಮುನಿಸು ಅಥವಾ ಕೋಪ ಬಂದರೆ ದಾಂಪತ್ಯ ಮೌನ ಆಗಬಹುದು ಅದಕ್ಕಾಗಿ ಯಾವ ಆಹಾರಗಳನ್ನು ತಿಂದರೆ ಒಳ್ಳೆಯದು ಎಂಬುದನ್ನು ತಿಳಿಸಲಾಗಿದೆ.

ಈಗಾಗಲೇ ಚಳಿಗಾಲ ಪ್ರಾರಂಭ ಆಗಿರುವುದರಿಂದ ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಕೆಳಗಿನ ಹಣ್ಣುಗಳನ್ನು ಮತ್ತು ಇನ್ನಿತರ ಆಹಾರ ಪದಾರ್ಥಗಳನ್ನು ತಿಂದು ಲೈಂಗಿಕ ಜೀವನವನ್ನು ಉತ್ತೇಜಿಸಿಕೊಳ್ಳಬಹುದು.


ಸೇಬು
ಹಣ್ಣುಗಳು:
ನಿಮ್ಮ ಲೈಂಗಿಕ ಜೀವನಕ್ಕೆ ನಿಜಕ್ಕೂ ಒಳ್ಳೆಯದು. ಪ್ರತಿ ದಿನ ಸೇಬು ಹಣ್ಣು ತಿನ್ನುವುದರಿಂದ ದೇಹದಲ್ಲಿ ಸಂತೋಷಕರ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಉತ್ತಮ ರಕ್ತ ಸಂಚಾರ ಉಂಟಾಗಿ ಮನಸ್ಸಿನಲ್ಲಿ ಆಹ್ಲಾದಕರ ಭಾವನೆ ಬರುತ್ತದೆ ಮತ್ತು ಸಂಗಾತಿಯ ಜೊತೆ ಸೇರಲು ಮನಸ್ಸಾಗುತ್ತದೆ

ಕುಂಬಳಕಾಯಿ:
ಬೀಜಗಳಲ್ಲಿ ಜಿಂಕ್ ಪ್ರಮಾಣ ಹೆಚ್ಚಾಗಿರುವುದರಿಂದ ಮಹಿಳೆಯರಲ್ಲಿ ಇವುಗಳು ಚಮತ್ಕಾರ ಮಾಡುತ್ತವೆ. ಪುರುಷರಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಸಂಜೆಯ ಸ್ನಾಕ್ಸ್ ಸಮಯದಲ್ಲಿ ಕುಂಬಳಕಾಯಿ ಬೀಜಗಳನ್ನು ಹುರಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಬಹುದು.

ಸ್ಟ್ರಾಬೆರಿ ಹಣ್ಣು:
ವಿಟಮಿನ್ ಸಿ ಹೆಚ್ಚಾಗಿದೆ. ಇದು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ ನಿಜ. ಸ್ಟ್ರಾಬೆರಿ ಹಣ್ಣುಗಳನ್ನು ತಿನ್ನುವುದರಿಂದ ಲೈಂಗಿಕ ಅಂಗಾಂಗಗಳಿಗೆ ಸುಲಭವಾಗಿ ರಕ್ತ ಸಂಚಾರ ಉಂಟಾಗುತ್ತದೆ. ಇದರಿಂದ ಲೈಂಗಿಕ ಉದ್ರೇಕ ಹೆಚ್ಚುತ್ತದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಹ ಸ್ಟ್ರಾಬೆರಿ ಹಣ್ಣುಗಳನ್ನು ತಿನ್ನಬಹುದು.


ದಾಳಿಂಬೆ
ಹಣ್ಣು:
ನಿಮಗೆ ಗೊತ್ತಿರುವ ಹಾಗೆ ನೀರಿನ ಅಂಶದ ಪ್ರಮಾಣ ಸಾಕಷ್ಟಿದೆ. ಇದು ತ್ವಚೆಯನ್ನು ನೀರಿನ ಅಂಶದಿಂದ ತುಂಬಿರುವಂತೆ ಮಾಡುವುದು ಮಾತ್ರವಲ್ಲದೆ ಹೊಳಪಿನ ಚರ್ಮ ನಿಮ್ಮದಾಗುವ ಹಾಗೆ ನೋಡಿಕೊಳ್ಳುತ್ತದೆ.ವಿಟಮಿನ್ ಸಿ ಹೆಚ್ಚಾಗಿರುವ ದಾಳಿಂಬೆ ಹಣ್ಣು ತನ್ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿದ್ದು, ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುತ್ತದೆ.

ಬ್ರಜಲ್ ಸ್ಪ್ರೌಟ್ಸ್:
ಇವುಗಳಲ್ಲಿ ಸಹ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡುವ ಜೊತೆಗೆ ಈಸ್ಟ್ರೋಜನ್ ಹಾರ್ಮೋನ್ ಕಡಿಮೆ ಬಿಡುಗಡೆ ಆಗುವಂತೆ ನೋಡಿಕೊಳ್ಳುವ ಗುಣವಿದೆ. ಹಾಗಾಗಿ ಒಂದು ವೇಳೆ ಇವುಗಳು ಮಾರುಕಟ್ಟೆಯಲ್ಲಿ ನಿಮಗೆ ಸಿಕ್ಕಿದರೆ ದಯವಿಟ್ಟು ತಂದು ತಿನ್ನಿ.

ಮೇಲಿನ ಆಹಾರ ಪದಾರ್ಥ ಸೇವಿಸಿ ಲೈಂಗಿಕತೆಯನ್ನು ಸಂತೋಷದಿಂದ ಆನಂದಿಸಬಹುದಾಗಿದೆ. ಮತ್ತು ಆರೋಗ್ಯ ದೃಷ್ಟಿಯಿಂದ ಸುರಕ್ಷಿತವಾಗಿದೆ.