ಮಹಿಳೆಯರ ಗರ್ಭಕೋಶವು ಫಲವತ್ತತೆಗಾಗಿ
ಅಂಡಾಣುವನ್ನು ಬಿಡುಗಡೆ ಮಾಡುವುದು. ಈ ವೇಳೆ ಗರ್ಭಕೋಶದಲ್ಲಿ ವೀರ್ಯವು ಸಿಕ್ಕಿದರೆ ಆಗ ಗರ್ಭ ಧರಿಸುವ
ಸಾಧ್ಯತೆ ಇದೆ. ಮಹಿಳೆಯ ಆವರ್ತನಕ್ಕೆ ಅನುಗುಣವಾಗಿ ಅಂಡೋತ್ಪತ್ತಿ ಸಮಯವಿರುವುದು. ಕೆಲವು ಮಹಿಳೆಯ
ಆವರ್ತನವು 35 ದಿನಗಳು ಆಗಿರುವುದು. ಈ ವೇಳೆ 21ನೇ ದಿನದಲ್ಲಿ ಅಂಡೋತ್ಪತ್ತಿ ಆಗುವುದು. 21 ದಿನಗಳ
ಆವರ್ತನ ಹೊಂದಿರುವ ಮಹಿಳೆಯರಲ್ಲಿ ಕೇವಲ 7ನೇ ದಿನದಲ್ಲಿ ಅಂಡೋತ್ಪತ್ತಿ ಆಗುವುದು.
72 ಗಂಟೆಗಳ ಕಾಲ ವೀರ್ಯ ಮಹಿಳೆಯ
ದೇಹದಲ್ಲಿ ಉಳಿಯುತ್ತದೆ ವೀರ್ಯ ಸ್ಖಲನವಾದ ಸುಮಾರು 72 ಗಂಟೆಗಳ ಕಾಲ ಮಹಿಳೆಯ ದೇಹದಲ್ಲಿ ಅದು ಉಳಿಯುತ್ತದೆ.
ಇದರಿಂದ ಋತುಚಕ್ರವು ಕೊನೆಯಾಗುತ್ತಿರುವಂತೆ ಗರ್ಭಧರಿಸುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಅಂಡೋತ್ಪತ್ತಿ
ಬಗ್ಗೆ ನಿಮಗೆ ಹೆಚ್ಚಿನ ಕುತೂಹಲವಿದ್ದರೆ ಆಗ ನೀವು ಋತುಚಕ್ರದ ಅವಧಿಯನ್ನು ಲೆಕ್ಕ ಹಾಕಬಹುದು. ಇದು
ನೀವು ಋತುಚಕ್ರಕ್ಕೆ ಒಳಗಾದ ದಿನ ಮತ್ತು ಮತ್ತೆ ಋತುಚಕ್ರವಾದ ದಿನವನ್ನು ಸೇರಿಸಿಕೊಳ್ಳಬೇಕು. ಕೆಲವು
ತಿಂಗಳ ಕಾಲ ನೀವು ಇದನ್ನು ತಿಳಿಯಲು ಪ್ರಯತ್ನಿಸಿದರೆ, ಆಗ ನಿಮಗೆ ಅಂಡೋತ್ಪತ್ತಿ ಸಮಯ ತಿಳಿಯುವುದು.
ಗರ್ಭನಿರೋಧಕ ಮುನ್ನೆಚ್ಚರಿಕೆಗಳು
ನೀವು ಗರ್ಭ ಧರಿಸಲು ಪ್ರಯತ್ನಿಸುತ್ತಾ ಇದ್ದರೆ, ನಿಮ್ಮ ಋತುಚಕ್ರದ ಅವಧಿಯು 28 ದಿನಗಳಿಗಿಂತ ಕಡಿಮೆ
ಆಗಿರದೆ ಇದ್ದರೆ, ಆಗ ನೀವು ಗರ್ಭಧಾರಣೆ ಮಾಡುವಂತಹ ಸಾಧ್ಯತೆಯು ತುಂಬಾ ಕಡಿಮೆ. ನಿಮಗೆ ಗರ್ಭ ಧರಿಸಲು
ಇಷ್ಟವಿಲ್ಲದೆ ಇದ್ದರೆ ಆಗ ನೀವು ಪ್ರತೀ ಸಲ ಸುರಕ್ಷಿತವಾಗಿ ಸೆಕ್ಸ್ ನಡೆಸುವುದು ಒಳ್ಳೆಯದು. ನೀವು
ಕಾಂಡೋಮ್ ಬಳಸಬಹುದು ಅಥವಾ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಬಹುದು. ಆದರೆ ಮಾತ್ರೆಗಳಿಂದ ಹರ್ಪಿಸ್,
ಗೊನೊರಿಯಾ, ಅಥವಾ ಕ್ಲಮೈಡಿಯದಂತಹ ಲೈಂಗಿಕ ರೋಗಗಳನ್ನು ತಡೆಯಲು ಸಾಧ್ಯವಿಲ್ಲ. ಸೋಂಕಿನಿಂದ ತಪ್ಪಿಸಿಕೊಳ್ಳಲು
ಸಂಗಾತಿಗೆ ಕಾಂಡೋಮ್ ಧರಿಸಲು ಹೇಳಿ.
ಮಹಿಳೆಯರ ಋತುಚಕ್ರದ ಅವಧಿಯು
ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುವುದು. ಕೆಲವೊಂದು ಸಲ ಋತುಚಕ್ರದ ವೇಳೆ ಸೆಕ್ಸ್ ನಿಂದ ಗರ್ಭಧರಿಸಬಹುದು.
ಋತುಚಕ್ರದ ಆರಂಭದ ದಿನಗಳಲ್ಲಿ ಸೆಕ್ಸ್ ನಿಂದ ಗರ್ಭ ಧರಿಸುವುದು ಕಡಿಮೆ. ಆದರೆ ಇದರ ಬಳಿಕದ ದಿನಗಳಲ್ಲಿ
ಸಾಧ್ಯತೆಯು ಹೆಚ್ಚುವುದು. ನೀವು ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ, ಒಂದು ವರ್ಷ ಅಥವಾ ಅದಕ್ಕಿಂತ
ಹೆಚ್ಚಿನ ಸಮಯ ಅಸುರಕ್ಷಿತ ಸೆಕ್ಸ್ ನಡೆಸಿಯೂ ಗರ್ಭ ಧರಿಸದೆ ಇದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಬೇಕು.
ಅವರು ಅಂಡೋತ್ಪತ್ತಿಯ ದಿನವನ್ನು ನಿಮಗೆ ಸರಿಯಾಗಿ ತಿಳಿಸಿಕೊಡುವರು.
ಮುಟ್ಟಿನ ರಕ್ತವು ಪುರುಷರ ಶಿಶ್ನಕ್ಕೆ
ಹಾನಿಕಾರವಲ್ಲ ಬಹಳಷ್ಟು ಮಂದಿಗೆ ಮುಟ್ಟಿನ ರಕ್ತದ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಅದು
ಕೆಟ್ಟ ರಕ್ತ. ಅದರಿಂದ ಸೋಂಕು ಹರಡುತ್ತದೆ ಎನ್ನುವ ಭಾವನೆ ಅವರಲ್ಲಿದೆ. ಮುಟ್ಟಿನ ರಕ್ತವು ದೇಹಕ್ಕೆ
ಅಗತ್ಯವಿಲ್ಲದ ಆರೋಗ್ಯಕರ ರಕ್ತ ಹಾಗೂ ಅಂಗಾಂಶಗಳ ಸಂಯೋಜನೆಯಾಗಿದೆ. ಇದರಿಂದ ಯಾವುದೇ ರೀತಿಯ ಹಾನಿಯಿಲ್ಲ.
ರಕ್ತದ ಬಿಡುಗಡೆಯ ವೇಗವನ್ನು
ಹೆಚ್ಚಿಸಬಹುದು ಸಂಭೋಗೋದ್ರೇಕದಿಂದ ಮುಟ್ಟಿನ ರಕ್ತದ ಬಿಡುಗಡೆಯ ವೇಗವನ್ನು ಹೆಚ್ಚಿಸಬಹುದು. ಎಂಡೊಮೆಟ್ರಿಯಲ್
ಭಾಗದಲ್ಲಿನ ತ್ಯಾಜ್ಯವನ್ನು ದೇಹದಿಂದ ಹೊರಹಾಕುವ ದರವನ್ನು ಹೆಚ್ಚಿಸಬಹುದು. ಇದರಿಂದ ನಿಮ್ಮ ಪಿರಿಯೆಡ್ಸ್
ಅವಧಿಯ ಕಡಿಮೆಯಾಗುವ ಸಾಧ್ಯತೆ ಇದೆ.
ಲೈಂಗಿಕ ರೋಗಗಳು ಹರಡುವ ಸಾಧ್ಯತೆ
ಪಿರಿಯೆಡ್ಸ್ ಸಂದರ್ಭದಲ್ಲಿ ಸೆಕ್ಸ್ ಮಾಡೋದರಿಂದ ಲೈಂಗಿಕವಾಗಿ ಹರಡುವ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ.
ಈ ಸಂದರ್ಭದಲ್ಲಿ ಗರ್ಭ ಕೋಶ ಹೆಚ್ಚು ತೆರೆದಿರುವುದರಿಂದ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚು ಇರುತ್ತದೆ.
ಗರ್ಭಧರಿಸುವ ಸಾಧ್ಯತೆ ಇದೆ ಮುಟ್ಟಿನ
ಸಂದರ್ಭದಲ್ಲಿ ಸೆಕ್ಸ್ ಮಾಡಿದ್ರೆ ಗರ್ಭಿಣಿ ಆಗುತ್ತಾರಾ ಎನ್ನುವ ಪ್ರಶ್ನೆ ಹಲವರಲ್ಲಿದೆ. ಹೌದು. ಈ
ಸಂದರ್ಭ ಸೆಕ್ಸ್ ಮಾಡಿದ್ರೆ ಗರ್ಭಧರಿಸೋ ಸಾಧ್ಯತೆ ಇದೆ. ಯಾಕೆಂದರೆ ಈ ಸಂದರ್ಭದಲ್ಲೂ ಅಂಡೋತ್ಪತ್ತಿಯಾಗುತ್ತದೆ.
ಹಾಗೂ ವೀರ್ಯಾಣು ಸುಮಾರು 7 ದಿನಗಳವರೆಗೆ ಜೀವಂತವಾಗಿರುತ್ತದೆ.
ಕೆಲವರಿಗೆ ನೋವುಂಟಾಗುತ್ತದೆ
ಈ ಸಂದರ್ಭದಲ್ಲಿ ಸೆಕ್ಸ್ ಮಾಡೋದರಿಂದ ಕೆಲವರಿಗೆ ನೋವು ಉಂಟಾಗುತ್ತದೆ. ಯಾಕೆಂದರೆ ಇದು ಗರ್ಭಕೋಶಕ್ಕೆ
ಒತ್ತಡವನ್ನು ಉಂಟುಮಾಡುತ್ತದೆ. ಜೊತೆಗೆ ಕಂಫರ್ಟೇಬಲ್ ಅನಿಸೋದಿಲ್ಲ.
ಪಿರಿಯೆಡ್ಸ್ ಸಂದರ್ಭ ಸೆಕ್ಸ್
ಮಾಡ್ತಾರೆ ನಿಮಗೆ ಪಿರಿಯೆಡ್ಸ್ ವೇಳೆ ಸೆಕ್ಸ್ ಮಾಡಬೇಕೆಂದಿದ್ದರೆ ನೀವೇನೂ ಯಾರೂ ಮಾಡದ್ದನ್ನು ಮಾಡುತ್ತಿಲ್ಲ.
ಯಾಕೆಂದರೆ ಸುಮಾರು 30% ಜನರು ಪಿರಿಯೆಡ್ಸ್ ಸಂದರ್ಭ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ.