ನೀವು ಸಹಜ ಹೆರಿಗೆ ಬಯಸುವುದಾದರೆ ಕೆಲವೊಂದು ಯೋಗಾಸನ ಅಭ್ಯಾಸ ಮಾಡಿ. ಇದರಿಂದ ಸಹಜ ಹೆರಿಗೆಗೆ ಸಹಾಯವಾಗುತ್ತೆ. ನೀವು ಯೋಗಾಸನ ಮಾಡುವ ಮುನ್ನ ನಿಮ್ಮ ವೈದ್ಯರ ಬಳಿ ಸಲಹೆ ಪಡೆಯಿರಿ. ಅಲ್ಲದೆ ಯೋಗಾಸನಗಳನ್ನ ಯೂಟ್ಯೂಬ್ ನೋಡಿ ಮಾಡಬೇಡಿ, ತಜ್ಞರ ಮಾರ್ಗದರ್ಶನದಲ್ಲಿಯೇ ಮಾಡಬೇಕು.
ಸಹಜ ಹೆರಿಗೆಗೆ ಸಹಾಯ ಮಾಡುವ
8 ಯೋಗಾಸನಗಳು
1. ಚೇರ್ ಪೋಸ್:
ಈ ಭಂಗಿ ಹಿಂಬಂದಿಯನ್ನು ಬಲ ಬಡಿಸುತ್ತದೆ, ಎದೆ ಭಾಗ, ಬೆನ್ನಿ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ಇದು
ಮಾನಸಿಕ, ದೈಹಿಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
2. ಬಟರ್‌ಫ್ಲೈ ಫೋಸ್:
ಈ ಆಸನ ಕೂಡ ಸಹಜ ಹೆರಿಗೆಗೆ ಸಹಕಾರಿ. ಇದು ಪೆಲ್ವಿಕ್ ಭಾಗವನ್ನು ಬಲಪಡಿಸುತ್ತದೆ, ತೊಡೆಗಳನ್ನು,
ಹಿಂಬದಿಯನ್ನು ಬಲ ಪಡಿಸುತ್ತದೆ.
3. ಕೋನಾಸನ:
ಈ ಆಸನ ಅಭ್ಯಾಸ ಮಾಡುವುದರಿಂದ ಬೆನ್ನು ಮೂಳೆ, ಕಾಲುಗಳು, ದೇಹದ ಎರಡೂ ಬದಿಗೂ ಒಳ್ಳೆಯದು. ಅದರಲ್ಲೂ
ಗರ್ಭಾವಸ್ಥೆಯಲ್ಲಿ ಕಾಡುವ ಮಲಬದ್ಧತೆ, ಸಯಾಟಿಕ ನೋವು ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹಕಾರಿ.
4. ಪರ್ವತಾಸನ:
ಈ ಆಸನ ಅಭ್ಯಾಸ ಮಾಡುವುದರಿಂದ ಹಿಂಬದಿ, ಬೆನ್ನು ಮೂಳೆ, ಕಾಲು, ತೊಡೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಈ ಆಸನದಿಂದ ಗರ್ಭಿಣಿಯರಿಗೆ ಕಾಡುವ ಸ್ನಾಯು ಸೆಳೆತ ಕಡಿಮೆಯಾಗುವುದು. ಸಹಜ ಹೆರಿಗೆಗೆ ಸಹಕಾರಿ.
5. ವಕ್ರಾಸನ:
ಈ ಆಸನ ಕೂಡ ಬೆನ್ನು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ಇದರಿಂ ಕೆಳ ಹೊಟ್ಟೆಯ ಅಂಗಾಂಗಗಳ ಆರೋಗ್ಯ ವೃದ್ಧಿಸುವುದು.
6. ವೀರಭದ್ರಾಸನ:
ವೀರಭದ್ರಾಸನ ಕೂಡ ಬೆನ್ನು, ಕಾಲುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಇದು ದೇಹದ ಶಕ್ತಿ ಹೆಚ್ಚಿಸಲು
ಸಹಕಾರಿ.
7. ತಾಡಾಸನ:
ಈ ಆಸನ ಕೂಡ ಗರ್ಭಿಣಿಯರಿಗೆ ಸಹಜ ಹೆರಿಗೆಗೆ ಸಹಕಾರಿ.
8. ಮಂಜರಿ ಆಸನ ಅಥವಾ ಕ್ಯಾಟ್
ಪೋಸ್:
ಇದು ಸಂತಾನೋತ್ಪತ್ತಿ ಅಂಗಾಂಗಕ್ಕೆ ತುಂಬಾನೇ ಒಳ್ಳೆಯದು. ಇದರಿಂದ ಭುಜ, ಬೆನ್ನುಮೂಳೆ, ಕುತ್ತಿಗೆಯ
ಆರೋಗ್ಯಕ್ಕೆ ಒಳ್ಳೆಯದು.
3ನೇ ತ್ರೈಮಾಸಿಕದಲ್ಲಿ ಈ ಆಸನ
ತುಂಬಾನೇ ಸಹಕಾರಿ
* ಬಟರ್‌ಫ್ಲೈ ಪೋಸ್
* ಹಾಫ್ ಬಟರ್‌ಫ್ಲೈ ಪೋಸ್
*ಉತ್ಕಾಟಾಸನ
ಸೂಚನೆ: ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ವ್ಯಾಯಾಮ ಮಾಡಿ
ಯೋಗ ಭಂಗಿಯಲ್ಲಿ ಉಸಿರಾಟದ
ಕಡೆಯೂ ಅಷ್ಟೇ ಗಮನಹರಿಸಬೇಕು.
* ಉಸಿರನ್ನು ಬಿಗಿಹಿಡಿಯುವ ವ್ಯಾಯಾಮ ಮಾಡದಿರಿ.
* ಉಸಿರನ್ನು ಬಿಗಿಹಿಡಿಯುವ ವ್ಯಾಯಾಮ ಮಾಡದಿರಿ.
* ದೇಹಕ್ಕೆ ಅಗ್ಯತವಿರುವ ಪೋಷಕಾಂಶದ ಕಡೆಗೆ ಗಮನಹರಿಸಿ.
* ಪ್ರತಿ ಭಂಗಿಯನ್ನು ಅಭ್ಯಾಸ ಮಾಡಿದ ಬಳಿಕ ವಿಶ್ರಾಂತಿ ಪಡೆಯಬೇಕು.
* ಕಂಫರ್ಟಬಲ್ ಬಟ್ಟೆ ಧರಿಸಿ.