35ರ ನಂತರ ಗರ್ಭಿಣಿಯಾಗುತ್ತಿದ್ದೀರಾ? ಆರೋಗ್ಯವಂತ ಮಗು ಪಡೆಯಲು ಏನು ಮಾಡಬೇಕು?

ಮಗು ನಿಧಾನಕ್ಕೆ ಮಾಡಿಕೊಳ್ಳುವ ಈಗಲೇ ಬೇಡ ಎಂದು ಹೇಳುವ ಅನೇಕ ದಂಪತಿಗಳಿದ್ದಾರೆ. ಮೊದಲು ನಮ್ಮ ಕೆರಿಯರ್‌, ಫೈನಾನ್ಷಿಯಲ್ ಇಂಪ್ರೂವ್‌ ಮಾಡಿಕೊಳ್ಳುವ. ನಂತರ ಮಗು ಮಾಡುವ ಪ್ಲ್ಯಾನ್ ಮಾಡೋಣ ಎನ್ನುತ್ತಾರೆ. ಹೀಗಾಗಿ ತುಂಬಾ ದಂಪತಿ ಮಗು ಮಾಡಿಕೊಳ್ಳಲು ಮನಸ್ಸು ಮಾಡುವಾಗ ವಯಸ್ಸು 30 ದಾಟುತ್ತಿದೆ.

ನೀವು ಆರೋಗ್ಯವಾಗಿದ್ದರೆ 40ರ ನಂತರ ಕೂಡ ಮಗು ಮಾಡಿಕೊಳ್ಳಬಹುದು, ಎಷ್ಟೋ ಜನರು ತುಂಬಾ ತಡವಾಗಿ ಗರ್ಭಿಣಿಯಾಗಿ ಆರೋಗ್ಯವಂತ ಮಗುವಿಗೆ ಜನ್ಮ ನೀಡುತ್ತಿದ್ದಾರೆ, ಆದರೆ ಆರೋಗ್ಯಕರ ಮಗುವನ್ನು ಪಡೆಯುವ ದೃಷ್ಟಿಯಿಂದ ನೋಡುವುದಾದರೆ ವಯಸ್ಸು 35 ದಾಟಿದರೆ ಸವಾಲುಗಳು ಅಧಿಕ.

35 ವರ್ಷ ಕಳೆದ ಮೇಲೆ ಗರ್ಭಿಣಿಯಾದರೆ ಎದುರಾಗಬಹುದಾದ ಸಮಸ್ಯೆಗಳೇನು? 35 ರ ನಂತರ ಮಗುವಿಗೆ ಪ್ಲ್ಯಾನ್ ಮಾಡಿದರೆ ಪ್ರಯೋಜನಗಳೇನು? ಆರೋಗ್ಯಕರ ಮಗುವನ್ನು ಪಡೆಯುವುದು ಹೇಗೆ ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

35ರ ಗರ್ಭಿಣಿಯಾದರೆ ಎದುರಾಗುವ ಸಮಸ್ಯೆಗಳು:
* ಅತ್ಯಧಿಕ ರಕ್ತದೊತ್ತಡ (ಗರ್ಭಿಣಿಯ ರಕ್ತದೊತ್ತಡ ಹೆಚ್ಚಾದರೆ ತುಂಬಾನೇ ಅಪಾಯಕಾರಿ, ಇದರಿಂದ ಮಗುವಿನ ಅಂಗಾಂಗಕ್ಕೆ ಹಾನಿಯಾಗಬಹುದು, ಅವಧಿ ಪೂರ್ವ ಮಗು ಜನಿಸುವ ಸಾಧ್ಯತೆ ಹೆಚ್ಚು)
 * ಗರ್ಭಾವಸ್ಥೆಯಲ್ಲಿ ಮಧುಮೇಹ
* ಗರ್ಭಪಾತ
* ಮಗು ಸತ್ತು ಹುಟ್ಟುವುದು
* ಸಹಜ ಹೆರಿಗೆ ತೊಂದರೆಯಾಗಿ ಸಿ ಸೆಕ್ಷನ್ ಮಾಡಬೇಕಾಗುವುದು
* ಅವಧಿ ಪೂರ್ವ ಮಗುವಿನ ಜನನ
* ಅತ್ಯಧಿಕ ಕಡಿಮೆ ಮೈ ತೂಕ
* ಮಗುವಿನಲ್ಲಿ ಕ್ರೋಮೋಸೋಮ್ ತೊಂದರೆ ಅಂದ್ರೆ ಡೌನ್‌ ಸಿಂಡ್ರೋಮ್‌

35ರ ನಂತರ ಗರ್ಭಧಾರಣೆಯಾದರೆ ಪ್ರಯೋಜನಗಳು:
* ವಯಸ್ಸು ಅಧಿಕವಾಗಿರುವುದರಿಂದ ಮಗುವನ್ನು ಹೇಗೆ ನೋಡಿಕೊಳ್ಳಬೇಕೆಂಬ ಪಕ್ವತೆ ಇರುತ್ತದೆ
* ವಯಸ್ಸಾದ ಮೇಲೆ ಮಕ್ಕಳಾದರೆ ಆ ತಾಯಿಯ ಆಯುಸ್ಸು ಹೆಚ್ಚಿರುತ್ತದಂತೆ
* ವಯಸ್ಸಾದ ತಾಯಿಗೆ ಜನಿಸಿದ ಮಕ್ಕಳು ಆರೋಗ್ಯಕರವಾಗಿದ್ದರೆ ಅವರಲ್ಲಿ ಹೊಂದಾಣಿ, ಬುದ್ಧಿವಂತಿಕೆ ಚೆನ್ನಾಗಿರುತ್ತದೆ.
* ವಯಸ್ಸು 35 ಅಂದ್ರೆ ಲೈಫ್‌ನಲ್ಲಿ ಆಲ್‌ಮೋಸ್ಟ್‌ ಸೆಟ್ಲ್‌ ಆಗಿರುವುದರಿಂದ ಮಗುವನ್ನು ಸಾಕಲು, ಅದಕ್ಕೆ ಒಂದೊಳ್ಳೆ ಶಿಕ್ಷಣ ಕೊಡಿಸಲು ಆರ್ಥಕ ತೊಂದರೆಯಿರಲ್ಲ.

35ರ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುವುದು ಹೇಗೆ?
ನೀವು 35ರ ನಂತರ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ಗರ್ಭಧಾರಣೆಯ ಮುನ್ನ ವೈದ್ಯರನ್ನು ಕಂಡು ಅವರ ಸಲಹೆ -ಸೂಚನೆ ಪಡೆಯಿರಿ. ಅವರು ನಿಮಗೆ ಫಾಲಿಕ್ ಆಮ್ಲ ತೆಗೆದುಕೊಳ್ಲುವಂತೆ ಸೂಚಿಸಬಹುದು. ಗರ್ಭಧಾರಣೆಗೆ ಪ್ರಯತ್ನಿಸುವ 6 ತಿಂಗಳ ಮುಂಚೆಯೇ ಫಾಲಿಕ್ ಆಮ್ಲ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ. ಇನ್ನು ನಿಮಗೆ ಅಗ್ಯತವಿರುವ ಕೆಲ ಸಪ್ಲಿಮೆಂಟ್ಸ್‌ ಸೂಚಿಸುತ್ತಾರೆ, ಅದನ್ನು ತೆಗೆದುಕೊಳ್ಳಿ.

ಗರ್ಭಿಣಿಯಾದ ಮೇಲೆ ಸರಿಯಾದ ಆರೈಕೆ ಮಾಡಿ:
ಮೊದಲ 8 ವಾರಗಳು ಮಗುವಿನ ಬೆಳವಣಿಗೆಗೆ ತುಂಬಾನೇ ಮುಖ್ಯವಾದ ಸಮಯ. ಈ ಸಮಯದಲ್ಲಿ ಗರ್ಭಪಾತದ ಸಾಧ್ಯತೆ ಹೆಚ್ಚಿರುವುದರಿಂದ 35 ವರ್ಷದ ದಾಟಿದ ಗರ್ಭಿಣಿಯರು ತುಂಬಾನೇ ಎಚ್ಚರಿಕೆವಹಿಸಬೇಕು. ವೈದ್ಯರು ನಿಮ್ಮ ದೇಹದ ಸ್ಥಿತಿ ನೋಡಿ ನಿಮಗೆ ಸರಿಯಾದ ಸಲಹೆ ಸೂಚನೆ ನೀಡುತ್ತಾರೆ, ಅವುಗಳನ್ನು ತಪ್ಪದೆ ಪಾಲಿಸಿ. ಕಂಪ್ಲೀಟ್ ರೆಸ್ಟ್ ಬೇಕೆಂದರೆ ತಪ್ಪದೆ ಪಾಲಿಸಿ. ಸ್ಕ್ಯಾನಿಂಗ್ ಮಾಡಿಸಿ, ಇದು ಮಗುವಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ. ಇನ್ನು ಈ ಸಮಯದಲ್ಲಿ ರಕ್ತದೊತ್ತಡ ಹೆಚ್ಚಾಗದಂತೆ ತುಂಬಾನೇ ಎಚ್ಚರವಹಿಸಬೇಕು.
* ಗರ್ಭಾವಸ್ಥೆಯಲ್ಲಿ ಮಧುಮೇಹ ಬಾರದಂತೆ ಎಚ್ಚರವಹಿಸಿ. ಆರೋಗ್ಯಕರ ಆಹಾರ ಸೇವಿಸಿ. ನಿಮ್ಮ ಆಹಾರದಲ್ಲಿ ತರಕಾರಿ ಅಧಿಕವಿರಲು. ಲಘು ವ್ಯಾಯಾಮ ಅಂದ್ರೆ ವಾಕಿಂಗ್ ಮಾಡಿ, ನಂತರ ಎಕ್ಸ್‌ಪರ್ಟ್ ಸಲಹೆ ಪಡೆದು ಯೋಗ ಅಭ್ಯಾಸ ಮಾಡುವುದರಿಂದ ಮಧುಮೇಹ ಬಾರದಂತೆ ತಡೆಗಟ್ಟಲು ಪ್ರಯತ್ನಿಸಬಹುದು.