ಮಿತವಾಗಿ ಗೋಡಂಬಿ ಸೇವಿಸಿದರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ

ಯಾವುದೇ ಹಬ್ಬದ ಅಡುಗೆಯಾಗಿರಲಿ ಅದಕ್ಕೆ ಗೋಡಂಬಿ ಹಾಕಿದ್ದರೆ ಅಡುಗೆಯ ಸ್ವಾದವನ್ನೇ ಬದಲಾಯಿಸುತ್ತದೆ. ಸಿಹಿ ಇರಲಿ, ಖಾರದ ಅಡುಗೆ ಇರಲಿ ಸ್ವಲ್ಪವಾದರೂ ಗೋಡಂಬಿ ಇರಲೇಬೇಕು. ಆದರೆ ಇತ್ತೀಚೆಗೆ ಗೋಡಂಬಿ ಅತಿಯಾಗಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತು ಕೇಳಿರಬಹುದು.

ಗೋಡಂಬಿಯು ಆಂಟಿ ಆಕ್ಸಿಡೆಂಟ್, ಮಿನರಲ್, ವಿಟಮಿನ್, ಪ್ರೊಟಿನ್, ಕಬ್ಬಿಣಾಂಶ, ಫೈಬರ್, ಮೆಗ್ನೇಶಿಯಂ, ಪಾಸ್ಪರೆಸ್, ಸೆಲೆನಿಯಂನಂಥ ಪೋಷಕಾಂಶಗಳ ಆಗರವಾಗಿದೆ. ಗೋಡಂಬಿಯಲ್ಲಿ ಸಕ್ಕರೆ ಕಡಿಮೆ ಇದ್ದು, ಫೈಬರ್, ಕೊಬ್ಬು ಮತ್ತು ಸಸ್ಯ ಪ್ರೋಟೀನ್ ಸಮೃದ್ಧವಾಗಿದೆ. ಈ ಪೋಷಕಾಂಶಗಳು ಶಕ್ತಿ ಉತ್ಪಾದನೆ, ಮೂಳೆ ಆರೋಗ್ಯ, ರೋಗನಿರೋಧಕ ಶಕ್ತಿ, ಹೃದಯ ಆರೋಗ್ಯ, ಚರ್ಮ ಸಮಸ್ಯೆಗಳಿಗೆ ಪರಿಹಾರವಾಗಿದೆ. 

ಗೋಡಂಬಿ ಸೇವನೆ ಒಳ್ಳೆಯದಲ್ಲ ಆದರೂ ಮಿತವಾಗಿ ಗೋಡಂಬಿ ಸೇವಿಸಿದರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಇಲ್ಲಿವೆ ನೋಡಿ: 

ಹೃದಯದ ಆರೋಗ್ಯ:
ಗೋಡಂಬಿಯಲ್ಲಿರುವ ಅಪರ್ಯಾಪ್ತ ಕೊಬ್ಬಿನಾಮ್ಲಗಳು ಎಲ್ಡಿಎಲ್ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಹೃದಯರಕ್ತನಾಳದ ಕಾಯಿಲೆ, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹ:
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್,ಯುಎಸ್ಎ ಪ್ರಕಟಿಸಿದ ಅಧ್ಯಯನದಲ್ಲಿ, ಗೋಡಂಬಿಯಿಂದ ತಮ್ಮ ದೈನಂದಿನ ಕ್ಯಾಲೊರಿಗಳಲ್ಲಿ 10% ಇರುವ ಹಾಗೂ ಟೈಪ್ 2 ಮಧುಮೇಹ ಹೊಂದಿರುವ ಜನರು ಗೋಡಂಬಿಯನ್ನು ಸೇವಿಸದವರಿಗಿಂತ ತುಲನಾತ್ಮಕವಾಗಿ ಕಡಿಮೆ ಇನ್ಸುಲಿನ್ ಮಟ್ಟವನ್ನು ಹೊಂದಿದ್ದಾರೆ ಎಂದು ಕಂಡುಬಂದಿದೆ.

ರಕ್ತದೊತ್ತಡ:
ಗೋಡಂಬಿಗಳು ಅಪರ್ಯಾಪ್ತ ಕೊಬ್ಬುಗಳು ಮತ್ತು ಮೆಗ್ನೀಸಿಯಂ, ಪೊಟ್ಯಾಸಿಯಮ್ ಮತ್ತು ಎಲ್-ಅರ್ಜಿನೈನ್ ನಂತಹ ಖನಿಜಗಳು ಹೇರಳವಾಗಿವೆ. ಈ ಪೋಷಕಾಂಶಗಳು ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಾಲಜನ್:
ಗೋಡಂಬಿಯಲ್ಲಿ ಹೆಚ್ಚಿನ ತಾಮ್ರದ ಅಂಶವಿದೆ. ತಾಮ್ರವು ನಮ್ಮ ದೇಹದಲ್ಲಿನ ಕಾಲಜನ್ ಮತ್ತು ಎಲಾಸ್ಟಿನ್ ಮಟ್ಟವನ್ನು ನಿರ್ವಹಿಸುತ್ತದೆ. ಹಾನಿಗೊಳಗಾದ ಅಂಗಾಂಶ ಅಥವಾ ಕಾಲಜನ್ ಅನ್ನು ಬದಲಿಸಲು ಇದು ಸಹಾಯ ಮಾಡುತ್ತದೆ.

ಮೂಳೆ:
ಗೋಡಂಬಿಯಲ್ಲಿನ ಮೆಗ್ನೀಸಿಯಮ್ ಮತ್ತು ತಾಮ್ರವು ಮೂಳೆಗಳಿಗೆ ಅತ್ಯವಶ್ಯಕವಾಗಿದೆ, ಏಕೆಂದರೆ ಅವು ಮೂಳೆಗೆ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ತೀವ್ರವಾದ ತಾಮ್ರದ ಕೊರತೆಯು ಕಡಿಮೆ ಮೂಳೆ ಸಾಂದ್ರತೆಯೊಂದಿಗೆ ಸಂಬಂಧಿಸಿದೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸಬಹುದು.

ತ್ವಚೆಯ ಸಮಸ್ಯೆಗೆ ಪರಿಹಾರ:
ಗೋಡಂಬಿಯಲ್ಲಿ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ಗುಣ ಸಾಕಷ್ಟಿರುತ್ತದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ, ಹಲವು ತ್ವಚೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.