ಸನ್‌ಸ್ಕ್ರೀನ್‌ ಹಗಲಷ್ಟೇ ಅಲ್ಲ, ರಾತ್ರಿ ಕೂಡ ಹಚ್ಚಿಕೊಳ್ಳಿ!

ನಮ್ಮ ದೈನಂದಿನ ತ್ವಚೆಯ ಆರೈಕೆಯಲ್ಲಿ ಸನ್‌ಸ್ಕ್ರೀನ್‌ ಎಂದಿಗೂ ಮರೆಯಬಾರದು. ಈ ಸನ್‌ಸ್ಕ್ರೀನ್‌ ನಮ್ಮ ತ್ವಚೆಯನ್ನ ಹಾನಿಕಾರಕ ಕಿರಣಗಳಿಂದ ರಕ್ಷಣೆ ನೀಡುವುದು. ಅದೇ ಕಾರಣಕ್ಕೆ ಮನೆಯಲ್ಲಿರುವಾಗ ಅಥವಾ ಮನೆಯಿಂದ ಹೊರಡೆ ಹೋಗುವ ಮುನ್ನ ಸನ್‌ಸ್ಕ್ರೀನ್‌ ಕಡ್ಡಾಯವಾಗಿ ಬಳಸಬೇಕು.

ರಾತ್ರಿ ಸಮಯದಲ್ಲಿ ಸನ್‌ಸ್ಕ್ರೀನ್‌ ಅಗತ್ಯವಿಲ್ಲ ಎಂಬುದು ಹೆಚ್ಚಿನವರ ನಂಬಿಕೆ. ಆದರೆ ಇದು ನಿಜವಲ್ಲ. ಏಕೆಂದರೆ ರಾತ್ರಿ ಟಿವಿ, ಲ್ಯಾಪ್ಟಾಪ್‌ಗಳು ಮತ್ತು ಮೊಬೈಲ್‌ ನಂತಹ ನಮ್ಮ ಸಾಧನಗಳಿಂದ ಹೊರಸೂಸುವ ಯುವಿ ಕಿರಣಗಳು ಸಹ ನಮ್ಮ ತ್ವಚೆಗೆ ಹಾನಿ ಮಾಡುತ್ತವೆ. ಇದನ್ನ ತಡೆಯಲು ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದು ತುಂಬಾ ಮುಖ್ಯ.

ರಾತ್ರಿ ಸನ್‌ಸ್ಕ್ರೀನ್‌ ಬಳಸಬೇಕು ಎನ್ನಲು ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.

1. ಕ್ಯಾನ್ಸರ್‌ನಿಂದ ರಕ್ಷಿಸುವುದು:
ಸನ್‌ಸ್ಕ್ರೀನ್‌ ನಿಮ್ಮ ತ್ವಚೆಯನ್ನು ಟಿ.ವಿ, ಮೊಬೈಲ್‌ಗಳಿಂದ ಹೊರಬರುವ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಈ ಕಿರಣಗಳು ವಿವಿಧ ರೀತಿಯ ಕ್ಯಾನ್ಸರ್ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ರಾತ್ರಿ ಕೂಡ ಸನ್‌ಸ್ಕ್ರೀನ್‌ ಹಚ್ಚಲು ಮರೆಯದಿರಿ. ಇದು ಚರ್ಮದ ಕ್ಯಾನ್ಸ್‌ರ್‌ಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.

2. ಚರ್ಮದ ಹಾನಿ ತಡೆಯುವುದು:
ಓಝೋನ್ ಪದರದ ಹಾನಿಗೊಳಗಾಗುವುದರಿಂದ, ಸೂರ್ಯನ ಹಾನಿಕಾರಕ ಯುವಿ ಕಿರಣಗಳು ನಮ್ಮ ಚರ್ಮಕ್ಕೆ ನೇರವಾಗಿ ಬೀಳುತ್ತವೆ. ಇವು ನಮ್ಮ ತ್ವಚೆಯನ್ನ ಸುಲಭವಾಗಿ ಹಾನಿಗೊಳಿಸುತ್ತವೆ. ಸನ್‌ಸ್ಕ್ರೀನ್‌ ಹಚ್ಚಿಕೊಳ್ಳದೇ ಇರುವುದರಿಂದ ಸನ್ಬರ್ನ್ ಉಂಟಾಗಬಹುದು. ಇದರಿಂದ ಕೆಂಪುಗುಳ್ಳೆ, ಮೊಡವೆಗಳು, ತುರಿಕೆ ಮತ್ತು ಸೆನ್ಸಿಟಿವ್ ಸ್ಕಿನ್ ಇರುವವರು ಅನೇಕ ಸಮಸ್ಯೆಗಳನ್ನು ಎದುರಿಸಬಹುದು.

3.ಫೋಟೋಜಿಂಗ್ ಪರಿಣಾಮದಿಂದ ರಕ್ಷಿಸುವುದು:
ಕೆಲವು ಹೊಸ ಅಧ್ಯಯನಗಳು ಪ್ರತಿದೀಪಕ ದೀಪಗಳು ಮತ್ತು ನಿಮ್ಮ ಕಂಪ್ಯೂಟರ್‌ನಿಂದ ಕೆಲವು ಲೈಟ್‌ಗಳು ಪ್ರಾಯಶಃ ಫೋಟೋಜಿಂಗ್ಗೆ ಕೊಡುಗೆ ನೀಡಬಹುದು ಎಂದು ಹೇಳುತ್ತವೆ. ಅಂದಹಾಗೇ ಈ ಫೋಟೋಜಿಂಗ್ ಅಂದರೆ, ಸೂರ್ಯನ ಕಿರಣಗಳಿಂದ ತ್ವಚೆಗೆ ಆಗುವ ಹಾನಿ. ಇದೇ ರೀತಿಯ ಹಾನಿ ಕಂಪ್ಯೂಟರ್ಗಳ ಕಿರಣಗಳಿಂದಲೂ ಆಗುವುದು ಎನ್ನುತ್ತವೆ ಸಂಶೋಧನೆಗಳು. ಇದನ್ನ ತಡೆಗಟ್ಟಲು ಸನ್‌ಸ್ಕ್ರೀನ್‌ ಬಳಸುವುದು ಉತ್ತಮ.

4. ಮನೆಯೊಳಗಿನ ಕಿರಣಗಳು:
ಹೌದು, ಮನೆಯೊಳಗಿನ ಕಿರಣಗಳು ಸಹ ನಿಮ್ಮ ತ್ವಚೆಗೆ ಹಾನಿ ಮಾಡುತ್ತವೆ. ಕೆಲವೊಂದು ಬಲ್ಬ್ಗಳಿಂದ ಹೊರಬರುವ ಕಿರಣಗಳು ನಿಮ್ಮ ಸೂಕ್ಷ್ಮ ತ್ವಚೆಯನ್ನು ಹಾಳು ಮಾಡಬಹುದು. ಅಂತಹ ಸಂದರ್ಭದಲ್ಲಿ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದು ನಿಮಗೆ ರಕ್ಷಣೆಯನ್ನು ನೀಡುತ್ತವೆ.

5. ಮೆಲಸ್ಮಾ ಅಥವಾ ಬಂಗು ಸಮಸ್ಯೆ ತಡೆಯಬಹುದು:
ಸೂರ್ಯ ಮತ್ತು ನೀಲಿ ಬೆಳಕಿನ ಒಡ್ಡುವಿಕೆಯು ಮೆಲಸ್ಮಾ ಎಂಬ ಸ್ಥಿತಿಗೆ ಕಾರಣವಾಗಬಹುದು, ಇದನ್ನು ಸಾಮಾನ್ಯವಾಗಿ ಬಂಗು ಎಂದು ಕರೆಯಲಾಗುವುದು. ಇದು ಮುಖದ ಮೇಲೆ ಡಾರ್ಕ್ ಪ್ಯಾಚ್ಗಳನ್ನು ಉಂಟುಮಾಡುತ್ತದೆ. ಗಾಢವಾದ ಚರ್ಮದ ಹೊಂದಿರುವ ಜನರಲ್ಲಿ ಮೆಲಸ್ಮಾ ಹೆಚ್ಚು ಸಾಮಾನ್ಯವಾಗಿದೆ. ಆದ್ದರಿಂದ ರಾತ್ರಿ ಸನ್‌ಸ್ಕ್ರೀನ್‌ ಬಳಸುವುದು ಇಂತಹ ಸಮಸ್ಯೆಗಳಿಂದ ದೂರವಿರಲು ಸಹಕರಿಸುವುದು.