ಮಹಿಳೆಯರು ಸ್ತನಗಳು ಫಿಟ್ ಆಗಿ ನಿಲ್ಲುವಂತೆ ಸಪೋರ್ಟ್ ನೀಡಲು ದಿನವಿಡೀ ಬ್ರಾ ಧರಿಸುತ್ತಾರೆ. ಆದರೆ ಹೀಗೆ ಮಾಡೋದು ನಿಮ್ಮ ಆರೋಗ್ಯಕ್ಕೆ ಉತ್ತಮವೇ? ದೀರ್ಘಕಾಲದವರೆಗೆ ಬ್ರಾ ಧರಿಸುವುದರಿಂದ, ನೀವು ದೇಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹೊಂದಬಹುದು. ಇದರ ಬಗ್ಗೆ ತಿಳಿಯೋಣ.
ಸೊಂಟ ನೋವು:
ಸ್ಟೈಲಿಶ್ ಆಗಿ ಕಾಣಲು ಬ್ರಾ ಧರಿಸುತ್ತಿರಿ ಅನ್ನೋದೇನೋ ನಿಜಾ. ಆದರೆ ನೀವು ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಕಾಲ ಬ್ರಾ ಧರಿಸಿದರೆ, ಸ್ತನಗಳ ಭಾರದಿಂದ ಅದು ಬೆನ್ನು ನೋವಿಗೆ ಕಾರಣವಾಗಬಹುದು. ಇದರಿಂದ ನಿಮ್ಮ ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ರಕ್ತ ಪರಿಚಲನೆಯ ಮೇಲೆ ಪರಿಣಾಮಗಳು:
ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಬ್ರಾ ಧರಿಸುವುದರಿಂದ, ಚರ್ಮ ಆಮ್ಲಜನಕವನ್ನು ಸರಿಯಾಗಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ದೇಹದಲ್ಲಿ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ.
ದದ್ದು ಸಮಸ್ಯೆ:
ನೀವು ದೀರ್ಘಕಾಲದವರೆಗೆ ಬ್ರಾ ಧರಿಸಿದರೆ, ಬ್ರಾ ಇರುವ ಜಾಗಗಳಲ್ಲಿ ಒಳಗೆ ಬೆವರು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಹೆಚ್ಚು ಹೆಚ್ಚು ಬೆವರುವುದರಿಂದ ನೀವು ದದ್ದುಗಳ ಸಮಸ್ಯೆಯನ್ನು ಹೊಂದುವ ಸಾಧ್ಯತೆ ಹೆಚ್ಚಿದೆ.
ಚರ್ಮ ಸಮಸ್ಯೆ:
ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಕಾಲ ಬಿಗಿಯಾದ ಬ್ರಾ ಧರಿಸುವುದರಿಂದ ಸ್ತನದ ಸುತ್ತಲೂ ಚರ್ಮದ ಸಮಸ್ಯೆಗಳು ಉಂಟಾಗಬಹುದು. ತುರಿಕೆ, ಚರ್ಮ ಕೆಂಪಾಗುವುದು, ಹೀಗೆ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಬ್ರಾ ಸ್ಟ್ರಾಪ್ ಗುರುತು:
ದೀರ್ಘಕಾಲದವರೆಗೆ ಬ್ರಾ ಧರಿಸುವುದರಿಂದ, ಚರ್ಮದ ಮೇಲೆ ಬ್ರಾ ಗುರುತುಗಳು ಉಳಿಯುತ್ತವೆ, ಇದು ತುಂಬಾ ಕೆಟ್ಟದಾಗಿ ಕಾಣುತ್ತದೆ. ಅಲ್ಲದೇ ಬ್ರಾ ಸ್ಟ್ರಾಪ್ ಗಳಿಂದ ಬ್ಲಡ್ ಕ್ಲಾಟ್ ಆಗುವ ಸಾಧ್ಯತೆಯೂ ಹೆಚ್ಚು.
ಸ್ತನಗಳಲ್ಲಿ ನೋವು:
ಸ್ತನದ ಉತ್ತಮ ಆಕಾರಕ್ಕಾಗಿ ನೀವು ಬಿಗಿ ಬ್ರಾ ಧರಿಸಿದರೆ, ಅದು ಸ್ತನ ನೋವಿನ ಸಮಸ್ಯೆ ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚು ಸಮಯ ಬ್ರಾ ಧರಿಸಬಾರದು. ಸ್ತನಗಳ ಆಕಾರ ಹಾಗೂ ನಿಪ್ಪಲ್ಗಳಿಗೆ ಹೊಂದುವ ಸರಿಯಾದ ಗಾತ್ರದ ಬ್ರಾ ಧರಿಸಬೇಕು.
ಎಷ್ಟು ಸಮಯ ಬ್ರಾ ಧರಿಸಬೇಕು:
ಕಚೇರಿಯಿಂದ ಅಥವಾ ಹೊರಗಿನಿಂದ ಮನೆಗೆ ಬಂದ ತಕ್ಷಣ ಬ್ರಾವನ್ನು ತೆಗೆದು ಸ್ತನಗಳಿಗೆ ಗಾಳಿ ತಾಕುವಂತಹ ಬಟ್ಟೆ ಧರಿಸಬೇಕು. ಇನ್ನು ನೀವು ದೀರ್ಘಕಾಲ ಹೊರಗೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾದರೆ, ನೀವು ಹತ್ತಿ ಬಟ್ಟೆಯ ಸರಿಯಾದ ಗಾತ್ರದ ಬ್ರಾ ಧರಿಸಬೇಕು.