ಓದುವುದು ಹಾಗೂ ಬರೆಯುವುದು ಇವೆರಡು ನೆನಪಿನ ಶಕ್ತಿ ಹೆಚ್ಚಿಸುವ ವಿಧಾನ. ಎಷ್ಟೇ ಓದಿದರೂ ನೆನಪಿಗೆ ಬರುವುದಿಲ್ಲವೆಂದರೆ ಓದುವ ಕ್ರಮ ಸರಿಯಾಗಿಲ್ಲವೆಂದರ್ಥ. ಜೋರಾಗಿ, ಗಟ್ಟಿಯಾಗಿ ಓದುವುದರಿಂದ ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಜೋರಾಗಿ ಓದುವುದರಿಂದಾಗುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸ್ಕೂಲ್ ದಿನಗಳಲ್ಲಿ ಓದುವುದು ಪ್ರತೀ ದಿನ ಒಂದು ಪರೀಕ್ಷೆಯಾಗಿತ್ತು. ಬಾಯಿ ಬಿಟ್ಟು ಓದಿದರಷ್ಟೇ ತಲೆಯಲ್ಲಿ ಉಳಿಯುತ್ತಿತ್ತು. ಮೌನವಾಗಿ ಓದಿದರೆ ಸ್ವಲ್ಪ ಡಿಸ್ಟರ್ಬ್ಯಾ, ಆದರೂ ಓದುವ ಆಸಕ್ತಿ ಸಡನ್ ಆಗಿ ಕಡಿಮೆಯಾಗುತ್ತಿತ್ತು. ಆದರೆ ಈಗಿನ ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸುವುದರ ಜೊತೆಗೆ ಜೋರಾಗಿ ಓದುವ ಅಭ್ಯಾಸವನ್ನು ಮಾಡಿಸಿ. ಜೋರಾಗಿ ಓದುವುದರಿಂದಲೂ ಹಲವು ಲಾಭಗಳಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಉತ್ಪಾದನಾ ಪರಿಣಾಮ:
ಅಕ್ಷರಗಳನ್ನು ನೋಡಿಕೊಂಡು ಓದುವಾಗ ನಮ್ಮ ನೆನಪಿನಂಗಳದಲ್ಲಿ ಅಚ್ಚಾಗಿ ಉಳಿಯುತ್ತದೆ. ಕೆಲವರಿಗೆ ಒಂದು ಭಾರಿ ಓದಿದರೆ ಸಾಕು ಕಣ್ಣಿಗೆ ಕಟ್ಟಿದಂತೆ ನೆನಪಿನಲ್ಲಿ ಉಳಿಯುತ್ತದೆ. ಇಂತಹ ಜನರಿಗೆ ಫೋಟೋಗ್ರಾಫಪಿಕ್ ಮೆಮೊರಿ ಹೊಂದಿದ್ದು ಅಸಾಧಾರಣ ಪ್ರತಿಭೆಗಳಾಗಿರುತ್ತಾರೆ. ಇನ್ನು ಕೆಲವರಿಗೆ ಓದಿದ ದೃಶ್ಯಗಳು ನೆನಪಿರುತ್ತದೆಯೇ ಹೊರತು ಅಕ್ಷರಗಳು ಅಸ್ಪಷ್ಟವಾಗಿರುತ್ತವೆ. ಈ ರೀತಿಯ ಸಮಸ್ಯೆಗೆ ಪರ್ಯಾಯ ಮಾರ್ಗವನ್ನು ಹುಡಿಕೊಳ್ಳಬೇಕಾಗುತ್ತದೆ. ಜೋರಾಗಿ ಓದುವುದರಿಂದ ಈ ರೀತಿಯ ಸಮಸ್ಯೆಗಳು ಕಡಿಮೆಯಾಗುತ್ತದೆ. ಏಕೆಂದರೆ ಓದುವಾಗ ನಮ್ಮ ಕಣ್ಣು, ಕೈ ಬೆರಳು, ಹಾಗೂ ಅಕ್ಷರಗಳ ಮೇಲೆ ಕೇಂದ್ರೀಕರಿಸಿರುತ್ತೇವೆ. ಅಲ್ಲದೆ ಜೋರಾಗಿ ಓದುವುದು ನಮ್ಮ ಕಿವಿಗೆ ಆ ಶಬ್ದಗಳು ಬಿದ್ದಾಗ ನಮ್ಮ ಮೆಮೊರಿಯಲ್ಲಿ ಇನ್ನೂ ಪ್ರಬಲವಾಗಿ ನೆನಪಿರುತ್ತದೆ.
ಓದಿನೊಂದಿಗೆ ಸಂಪರ್ಕ:
ಪರೀಕ್ಷೆಯ ಸಮಯದಲ್ಲಿ ಟೆಕ್ಸಟ್ ಬುಕ್ ಅನ್ನು ಸುಮ್ಮನೆ ಓದಿಕೊಂಡು ಹೋದರೆ ಪ್ರಯೋಜನವಿಲ್ಲ. ಜೋರಾಗಿ ಓದಿಕೊಂಡು ಹೋದರು ಅದು ಅಪ್ರಯೋಜಕ. ಏಕೆಂದರೆ ಓದುವಾಗ ಪ್ರಶ್ನೆಗಳನ್ನು ಹಾಕಿಕೊಂಡಿರುವುದಿಲ್ಲ. ಏಕೆ? ಏನು? ಎಲ್ಲಿ? ಹೇಗೆ? ಎಂದೆಲ್ಲಾ ಓದುವಾಗ ಕಂಡುಕೊಳ್ಳಬೇಕು. ಓದುವಾಗ ವರ್ಗೀಕರಿಸುವುದು, ಪ್ರಶ್ನೆಗಳನ್ನು ಕೇಳದೆ ಮತ್ತು ಓದುವುದರ ಜೊತೆಗೆ ಸಂಪರ್ಕಗಳನ್ನು ಮಾಡದೆ ಸರಳವಾಗಿ ಓದುವುದು ಮನಸ್ಸಿನಲ್ಲಿರುವ ವಿಷಯವನ್ನು ಸಂಘಟಿಸಲು ಏನನ್ನೂ ಮಾಡುವುದಿಲ್ಲ. ಪುಸ್ತಕವನ್ನು ಕೇಂದ್ರೀಕರಿಸಿ ಸಿಸ್ಟಮ್ಯಾಟಿಕ್ ಆಗಿ ಓದಲಿಲ್ಲವೆಂದರೆ ಏನು ಓದಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಗಟ್ಟಿಯಾಗಿ ಜೋರಾಗಿ ಹಾಗೂ ಶ್ರದ್ಧೆಯಿಂದ ಓದುವುದರಿಂದ ಶ್ರವಣೇಂದ್ರಿಯಗಳೂ ಆಕ್ಟಿವ್ ಆಗಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ ಕೂಡ.
ಜೋರಾಗಿ ಓದುವುದರ ಪ್ರಯೋಜನಗಳಿವೆ:
ಜೋರಾಗಿ ಓದುವುದರಿಂದ ಕೇಳುವ ಶಕ್ತಿ ಹೆಚ್ಚುತ್ತದೆ. ಅಂದರೆ ಶ್ರವಣೇಂದ್ರಿಯವು ಕಲಿಕೆಯ ಪ್ರಕ್ರಿಯೆಯ ಭಾಗವಾಗುತ್ತದೆ. ಇದರಿಂದ ಹಲವು ಪ್ರಯೋಜನಗಳಿವೆ. ಉದಾ.
1. ನಿಮ್ಮೆದುರಿರುವ ವಸ್ತುಗಳಿಗೆ ಹೆಚ್ಚು ಗಮನ ಹರಿಸುತ್ತೀರಿ.
2. ಆ ವಸ್ತುವನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವು ಸುಧಾರಿಸುತ್ತದೆ.
3. ಏನು ಓದುತ್ತಿದ್ದೇನೆ ಎಂಬ ವಿಷಯಗಳ ಜೊತೆಗೆ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ.
ಇದನ್ನು ಯಾವ ರೀತಿ ಅಭ್ಯಾಸ ಮಾಡಬೇಕು ಎಂದರೆ
1. ಮೊದಲು ಜೋರಾಗಿ ಓದುವುದನ್ನು ರೆಕಾರ್ಡ್ ಮಾಡಿಕೊಂಡು ನಂತರ ಪುಸ್ತಕವನ್ನು ಹಿಡಿಯಿರಿ.
2. ಇನ್ನೊಬ್ಬರಿಗೆ ಪಾಠ ಮಾಡುತ್ತಿರುವಂತೆ ಅಂದುಕೊಂಡು ಜೋರಾಗಿ ಅರ್ಥೈಸಿಕೊಂಡು ಓದುವುದು ಒಳ್ಳೆಯದು.
ಜೋರಾಗಿ ಹಾಗೂ ಗಟ್ಟಿಯಾಗಿ ಓದುವುದು ಮೊದಮೊದಲು ಮುಜುಗರ ಹಾಗೂ ಕಿರಿಕಿರಿ ಮೂಡಿಸಬಹುದು, ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಆದರೆ ಇದು ಸ್ವಲ್ಪ ವಿಚಲಿತರನ್ನಾಗಿ ಮಾಡಬಹುದು. ಆದರೆ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಪರಿಣಾಮಕಾರಿ ತಂತ್ರವಾಗಿದೆ.
ಓದಿದ್ದನ್ನು ಮನನ ಮಾಡಿಕೊಳ್ಳುವುದು ಹೇಗೆ:
1. ಗಟ್ಟಿಯಾಗಿ ಜೋರಾಗಿ ಅರ್ಥ ಮಾಡಿಕೊಂಡು ನಾಲ್ಕೈದು ಬಾರಿ ಓದಿ.
2. ನಿಮಗೆ ಅರ್ಥವಾದಷ್ಟು, ಬಂದಷ್ಟು ಓದಿದ್ದನ್ನು ಒಂದು ಪುಸ್ತಕದಲ್ಲಿ ನೋಡದೇ ಬರಿಯುವುದು.
3. ಬರೆದದ್ದನ್ನು ಒಮ್ಮೆ ಕ್ರಾಸ್ ಚೆಕ್ ಮಾಡಿಕೊಳ್ಳುವುದು.
4. ತಪ್ಪು ಎಲ್ಲಾಗಿದೆ, ಏನು ತಪ್ಪಾಗಿದೆ, ಯಾವುದು ಮಿಸ್ ಆಗಿದೆ ಎಂಬುದು ಮತ್ತೆ ಪುಸ್ತಕ ತೆರೆದು ನೋಡಿಕೊಂಡು ಮತ್ತೆ ಸರಿಮಾಡಿಕೊಳ್ಳುವುದು.
5. ಮಲಗುವ ಮುನ್ನ ಬಾಯಲ್ಲಿ ಜೋರಾಗಿ ಓದಿದ್ದನ್ನು ಮತ್ತೊಮ್ಮೆ ನೋಡಿಕೊಳ್ಳದೇ ಹೇಳುವುದು.