ಬೇಸಿಗೆಯಲ್ಲಿ ನಿಮ್ಮ ದೇಹವು ಬದಲಾವಣೆ ಆದರೆ ವಿಟಮಿನ್ ಬಿ12 ಕೊರತೆ ಆಗಿದೆ ಎಂದರ್ಥ

ಬೇಸಿಗೆ ಕಾಲದಲ್ಲಿ ನಮ್ಮ ದೇಹವು ಹಲವು ರೀತಿಯಲ್ಲಿ ಪರಿವರ್ತನೆ ಆಗುತ್ತದೆ. ಕೆಲವೊಮ್ಮೆ ಹೊರಗಿನ ತಾಪಮಾನಕ್ಕೆ ದೇಹ ಹೊಂದಿಕೊಳ್ಳುವಲ್ಲಿ ಸ್ವಲ್ಪ ಬದಲಾವಣೆಯಾದರು ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇನ್ನು ಬೇಸಿಗೆಯಲ್ಲಿ ಸಾಮಾನ್ಯವಾಗಿ ಬಾಯಿಯ ಹುಣ್ಣು ಅಥವಾ ನಾಲಗೆ ಮೇಲೆ ಹುಣ್ಣಾಗುವುದು ಸಾಮಾನ್ಯ ಎನ್ನುವಂತಾಗಿದೆ.

ಬೇಸಿಗೆಯಲ್ಲಿ ನಾಲಿಗೆ ಮತ್ತು ಬಾಯಿಯಲ್ಲಿ ಹುಣ್ಣಾಗುವುದು ನೋಡಬಹುದು. ಇದು ಹೆಚ್ಚಾಗಿ ಬೇಸಿಗೆಯಲ್ಲಿ ಕಂಡುಬರುತ್ತದೆ. ದೇಹದಲ್ಲಿ ವಿಪರೀತ ಶಾಖ ಉತ್ಪಾದನೆ ಹಾಗೂ ಆಹಾರ ಕ್ರಮದ ಕಾರಣದಿಂದಾಗಿ ಈ ಹುಣ್ಣು ಕಾಣಿಸಿಕೊಳ್ಳಬಹುದು. ಇದೊಂದು ಕಾರಣ ಹೊರತುಪಡಿಸಿ ಉಳಿದಂತೆ ನಮ್ಮ ದೇಹದಲ್ಲಿ ವಿಟಮಿನ್ ಕೊರತೆಯಾದಾಗಲೂ ಈ ಹುಣ್ಣು ಕಾಣಿಸಿಕೊಳ್ಳುತ್ತದೆ.

ವಿಟಮಿನ್ ಬಿ12 ನಮ್ಮ ನರಕೋಶಗಳು ಮತ್ತು ರಕ್ತಕಣಗಳನ್ನು ಆರೋಗ್ಯವಾಗಿಡುವಲ್ಲಿ ನೆರವಾಗುತ್ತದೆ. ಆದರೆ ಈ ವಿಟಮಿನ್ ಬಿ12 ಅನ್ನು ನಮ್ಮ ದೇಹ ಸ್ವತಂತ್ರವಾಗಿ ಉತ್ಪಾದಿಸುವ ಶಕ್ತಿ ಹೊಂದಿಲ್ಲ. ಈ ವಿಟಮಿನ್ ಬೇಕಾದರೆ ನಾವು ತರಕಾರಿ, ಹಣ್ಣು ಸೇರಿದಂತೆ ಕೆಲವೊಂದು ಆಹಾರವನ್ನು ಸೇವಿಸುವುದರ ಮೂಲಕ ಪಡೆಯಬಹುದಾಗಿದೆ.

ವಿಟಮಿನ್ ಬಿ 12 ಮಾಂಸ, ಡೈರಿ ಮತ್ತು ಮೊಟ್ಟೆಗಳಂತಹ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಕೆಲವು ಧಾನ್ಯಗಳು, ಬ್ರೆಡ್ನಲ್ಲೂ ಈ ವಿಟಮಿನ್ ಇರುವಿಕೆ ಕಾಣಬಹುದು. ಆದರೆ ನಮ್ಮ ದೇಹಕ್ಕೆ ಈ ವಿಟಮಿನ್ ಬಿ12 ಕಡಿಮೆಯಾಗಿದೆ ಎಂದು ಮೊದಲೆ ತಿಳಿಯುತ್ತದೆ. ಹಾಗಾದರೆ ಈ ವಿಟಮಿನ್ ಕಡಿಮೆಯಾಗಿರುವುದು ತಿಳಿಯುವುದಾದರು ಹೇಗೆ.?

ನೀವು ಸೇವಿಸುವ ಆಹಾರದಲ್ಲಿ ವಿಟಮಿನ್ ಬಿ 12ನ ಅಂಶವಿರುವುದರಿಂದ ಬಹುತೇಕರಿಗೆ ಈ ವಿಟಮಿನ್ ಕೊರತೆಯಾಗುವುದಿಲ್ಲ. ಆದರೆ 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಈ ವಿಟಮಿನ್ ಕೊರತೆಯ ಸಮಸ್ಯೆ ನಾವು ಕಾಣಬಹುದು. ವಿಟಮಿನ್ ಬಿ12 ಕೊರತೆ ಉಂಟಾದರೆ ಏಕಾಗ್ರತೆಯಿಂದ ಇರುವುದು ಕಷ್ಟವಾಗುತ್ತಾ ಹೋಗುತ್ತದೆ. ನರಗಳಿಗೆ ಹಾನಿಯುಂಟಾಗುವುದರಿಂದ ಏಕಾಗ್ರತೆಯ ಕೊರತೆ ಉಂಟಾಗುತ್ತದೆ. ಒಂದು ಕೆಲಸದ ಮೇಲೆ ನಿಮ್ಮ ಗಮನ ಇಡಲು ಸಾಧ್ಯವಾಗದಿರದ ಪರಿಸ್ಥಿತಿಯನ್ನು ನೀವು ಎದುರಿಸಬೇಕಾಗುತ್ತದೆ.

ನಾಲಗೆ, ಬಾಯಿ, ಕಣ್ಣಿನಲ್ಲಿ ಹುಣ್ಣು ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಿಂದಾಗಿ ಬಾಯಿ, ನಾಲಗೆ, ಕಣ್ಣಿನಲ್ಲಿ ಹುಣ್ಣುಗಳು ಆಗಬಹುದು. ಇದು ಸುಮಾರು ವಾರಕ್ಕೂ ಹೆಚ್ಚು ದಿನ ಹುಣ್ಣು ದೊಡ್ಡದಾಗುತ್ತದೆ ಜೊತೆಗೆ ಉರಿ ಹೆಚ್ಚಾಗುತ್ತದೆ. ಇನ್ನು ಕಣ್ಣಿನಲ್ಲಿ ಮರಳಿನ ಕಣ ಸೇರಿಕೊಂಡು ಚುಚ್ಚಿದ ಅನುಭವವಾಗುತ್ತದೆ. ಕೇವಲ ಕಣ್ಣು ಮಾತ್ರವಲ್ಲ ಕೈ ಹಾಗೂ ಕಾಲುಗಳಲ್ಲಿ ಚುಚ್ಚಿದಂತಾಗುವುದು.

ವಿಟಮಿನ್ ಬಿ 12 ಕೊರತೆಯು ಅಸಹಜವಾಗಿ ದೊಡ್ಡ ಪ್ರಮಾಣದ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುತ್ತದೆ, ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ, ಇದು ರಕ್ತಹೀನತೆಗೆ ಕಾರಣವಾಗುತ್ತದೆ. ಇದು ಬಾಯಿ, ನಾಲಗೆ ಹುಣ್ಣಿಗೆ ಪರೋಕ್ಷವಾಗಿ ಕಾರಣವಾಗುತ್ತದೆ.

ವಿಟಮಿನ್ ಬಿ12 ಬೇಕಾದರೆ ಯಾವ ಆಹಾರ ಸೇವಿಸಬೇಕು? ವಿಟಮಿನ್ ಬಿ 12 ವಿಟಮಿನ್ ಅನ್ನು ನಮ್ಮ ದೇಹ ಉತ್ಪಾದಿಸಲು ಸಾಧ್ಯವಿಲ್ಲ ಹೀಗಾಗಿ ನಾವು ಆ ವಿಟಮಿನ್ ಇರುವ ಆಹಾರ ಸೇವನೆ ಮಾಡಬೇಕಿದೆ. ವಿಟಮಿನ್ ಬಿ 12 ನ ಕೆಲವು ಉತ್ತಮ ಮೂಲಗಳೆಂದರೆ ಹಂದಿ ಮಾಂಸ, ಕೋಳಿ, ಕುರಿ ಮಾಂಸ, ಮೀನು, ಏಡಿ, ಹಾಲು, ಚೀಸ್ ಮತ್ತು ಮೊಸರು ಮತ್ತು ಮೊಟ್ಟೆಗಳಂತಹ ಡೈರಿ ಉತ್ಪನ್ನಗಳು.

ಬೀಟ್ರೂಟ್, ಕಡಲೆಗಳು, ಬೀನ್ಸ್, ಪಾಲಕ್ ಸೊಪ್ಪು ಹಾಗೂ ಬಹುಪಾಲು ಎಲ್ಲಾ ಹಣ್ಣುಗಳಲ್ಲು ನೀವು ಈ ವಿಟಮಿನ್ ಅಂಶ ನೋಡಬಹುದು.